ನಾನು ಯಾವುದೇ ಸಂಸ್ಥೆಯನ್ನು ಟೀಕಿಸಿಲ್ಲ: ಮಮತಾ ಸ್ಪಷ್ಟನೆ

KannadaprabhaNewsNetwork |  
Published : May 21, 2024, 12:43 AM ISTUpdated : May 21, 2024, 05:27 AM IST
ಮಮತಾ | Kannada Prabha

ಸಾರಾಂಶ

ರಾಮಕೃಷ್ಣ ಮಿಷನ್ ಮತ್ತು ಭಾರತ ಸೇವಾಶ್ರಮ ಸಂಘಗಳ ಬಗ್ಗೆ ನಾನು ಟೀಕೆ ಮಾಡಿಲ್ಲ. ಆದರೆ ಸನ್ಯಾಸತ್ವ ಸ್ವೀಕರಿಸಿ ರಾಜಕೀಯ ಮಾಡುವ ಒಬ್ಬಿಬ್ಬರನ್ನು ಮಾತ್ರ ಟೀಕಿಸಿದ್ದೇನೆ ಎಂದು ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟನೆ ನೀಡಿದ್ದಾರೆ.

ಕೋಲ್ಕತಾ: ರಾಮಕೃಷ್ಣ ಮಿಷನ್ ಮತ್ತು ಭಾರತ ಸೇವಾಶ್ರಮ ಸಂಘಗಳ ಬಗ್ಗೆ ನಾನು ಟೀಕೆ ಮಾಡಿಲ್ಲ. ಆದರೆ ಸನ್ಯಾಸತ್ವ ಸ್ವೀಕರಿಸಿ ರಾಜಕೀಯ ಮಾಡುವ ಒಬ್ಬಿಬ್ಬರನ್ನು ಮಾತ್ರ ಟೀಕಿಸಿದ್ದೇನೆ ಎಂದು ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟನೆ ನೀಡಿದ್ದಾರೆ.

ಈ ಎರಡು ಸಂಘಗಳಲ್ಲಿ ಕೆಲವು ಸನ್ಯಾಸಿಗಳು ಬಿಜೆಪಿಯ ಸೂಚನೆಯ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಬ್ಯಾನರ್ಜಿ ಶನಿವಾರ ಆರೋಪಿಸಿದ್ದರು. ಈ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಿಷನ್‌ಗಳಿದ ತೀವ್ರ ಟೀಕೆಗಳು ಬಂದವು.

ಇದಕ್ಕೆ ಸ್ಪಷ್ಟನೆ ನೀಡಿದ ಮಮತಾ, ರಾಮಕೃಷ್ಣ ಮಿಷನ್‌ ಹಾಗೂ ಭಾರತ ಸೇವಾಶ್ರಮ ಜನಸ್ನೇಹಿ ಕಾರ್ಯಗಳನ್ನು ಮಾಡುತ್ತಿವೆ. ಆದರೆ ನಾನು ಇಡೀ ಸಂಸ್ಥೆಗಳ ಬಗ್ಗೆ ಮಾತನಾಡುತ್ತಿಲ್ಲ. ಸಂಸ್ಥೆಯಲ್ಲಿ ರಾಜಕೀಯ ಮಾಡುವ ಕೆಲವರ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ ಎಂದಿದ್ದಾರೆ.

ಸಂತರು ಬಿಜೆಪಿ ಪರ ಎಂದ ದೀದಿಗೆ ನೋಟಿಸ್‌

ಕೋಲ್ಕತಾ: ‘ರಾಮಕೃಷ್ಣ ಮಿಷನ್‌ ಹಾಗೂ ಭಾರತ ಸೇವಾಶ್ರಮ ಸಂಘದಲ್ಲಿರುವ ಕೆಲ ಸಂತರು ಬಿಜೆಪಿ ಪರ, ನವದೆಹಲಿಯಿಂದ ಬರುವ ಆದೇಶಗಳಿಗೆ ಅವರು ಬದ್ಧರಾಗಿರುತ್ತಾರೆ’ ಎಂದಿರುವ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರತ ಸೇವಾಶ್ರಮ ಸಂಘದ ಕಾರ್ತಿಕ್ ಮಹಾರಾಜ್ (ಸ್ವಾಮಿ ಪ್ರದೀಪ್ತಾನಂದ) ಮಮತಾಗೆ ಲೀಗಲ್ ನೋಟಿಸ್‌ ನೀಡಿದ್ದಾರೆ.

ಮಮತಾ ತಮಗೆ ಮಾನಹಾನಿ ಮಾಡಿದ್ದಾರೆಂದು ಕಾರ್ತಿಕ್‌ ಮಹಾರಾಜ್‌ ಕಿಡಿಕಾರಿದ್ದು, ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.‘ಸನ್ಯಾಸಿಗಳು ಸಂಪ್ರದಾಯಗಳ ಮೌಲ್ಯಗಳಿಗೆ ಧಕ್ಕೆಯಾಗದಂತೆ ತಮ್ಮ ಜೀವನ ನಡೆಸುತ್ತಾರೆ. ರಾಜಕೀಯದ ಜೊತೆಗೆ ಕಾರ್ತಿಕ್ ಮಹಾರಾಜ್‌ಗೆ ಯಾವುದೇ ನಂಟಿಲ್ಲ. ಆಧಾರವಿಲ್ಲದೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ತಪ್ಪು ಹಾದಿಗೆಳೆಯಲಾಗುತ್ತಿದೆ. 

ಸಂತರ ವಿರುದ್ಧ ಉದ್ದೇಶಪೂರ್ವಕ ಆರೋಪ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ 48 ಗಂಟೆಯೊಳಗೆ ಸುದ್ದಿಗೋಷ್ಠಿ ಕರೆದು ಬೇಷರತ್‌ ಕ್ಷಮೆಯಾಚಿಸಬೇಕು’ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದೆ. .ಒಂದು ವೇಳೆ ಟಿಎಂಸಿ ನಾಲ್ಕು ದಿನದೊಳಗೆ ನೋಟಿಸ್‌ಗೆ ಉತ್ತರಿಸಲು ವಿಫಲವಾದರೆ ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

PREV

Recommended Stories

ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ