ಕಾಡಿನಿಂದ ತಪ್ಪಿಸಿಕೊಂಡು ಬಂದ ಪುಂಡಾನೆಯೊಂದು 2 ದಿನಗಳ ಅವಧಿಯಲ್ಲಿ 13 ಜನರನ್ನು ಬಲಿತೆಗೆದುಕೊಂಡು, ನಾಲ್ವರನ್ನು ಗಾಯಗೊಳಿಸಿದ ಘಟನೆ ಜಾರ್ಖಂಡದ ಪಶ್ಚಿಮ ಸಿಂಗಭೂಮ್ ಜಿಲ್ಲೆಯಲ್ಲಿ ನಡೆದಿದೆ.
ಚಾಯ್‌ಬಾಸಾ (ಜಾರ್ಖಂಡ): ಕಾಡಿನಿಂದ ತಪ್ಪಿಸಿಕೊಂಡು ಬಂದ ಪುಂಡಾನೆಯೊಂದು 2 ದಿನಗಳ ಅವಧಿಯಲ್ಲಿ 13 ಜನರನ್ನು ಬಲಿತೆಗೆದುಕೊಂಡು, ನಾಲ್ವರನ್ನು ಗಾಯಗೊಳಿಸಿದ ಘಟನೆ ಜಾರ್ಖಂಡದ ಪಶ್ಚಿಮ ಸಿಂಗಭೂಮ್ ಜಿಲ್ಲೆಯಲ್ಲಿ ನಡೆದಿದೆ.
7 ಜನರ ಜೀವ ತೆಗೆದಿದೆ
‘ಆನೆ ಜ.5ರಂದು ಕೊಲ್ಹನ್ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು 7 ಜನರ ಜೀವ ತೆಗೆದಿದೆ. ಜ.6ರಂದು ನೋವಾಮುಂಡಿ ಮತ್ತು ಹಟಗಮಾರಿಯಾ ಪ್ರದೇಶದಲ್ಲಿ 6 ಜನರನ್ನು ಬಲಿಪಡೆದುಕೊಂಡಿದೆ.
4 ಮಂದಿ ಗಾಯ
ದಾಳಿಯಿಂದಾಗಿ ಜಂಬೊ, ಚೈಬಾಸಾದ 4 ಮಂದಿ ಗಾಯಗೊಂಡಿದ್ದಾರೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆನೆಯನ್ನು ಹಿಡಿದು ಕಾಡಿಗೆ ಬಿಡುವ ಪ್ರಯತ್ನಗಳು ನಡೆದಿವೆ.