ಆಪರೇಷನ್‌ ಸಿಂದೂರ ಅಪ್ರಯೋಜಕ : ಫಾರೂಕ್‌ ಅಬ್ದುಲ್ಲಾ ವಿವಾದ

KannadaprabhaNewsNetwork |  
Published : Nov 17, 2025, 02:00 AM IST
Farooq Abdullah

ಸಾರಾಂಶ

ಆಪರೇಷನ್‌ ಸಿಂದೂರದಿಂದ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ 18 ಜನ ಸತ್ತರು. ಗಡಿಗಳು ರಾಜಿಯಾದವು. ಮತ್ತೆ ಅಂತಹ ಸಂಘರ್ಷ ಸಂಭವಿಸುವುದು ಬೇಡ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 ಶ್ರೀನಗರ: ಆಪರೇಷನ್‌ ಸಿಂದೂರದಿಂದ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ 18 ಜನ ಸತ್ತರು. ಗಡಿಗಳು ರಾಜಿಯಾದವು. ಮತ್ತೆ ಅಂತಹ ಸಂಘರ್ಷ ಸಂಭವಿಸುವುದು ಬೇಡ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯಾವುದೇ ಲಾಭವಾಗಲಿಲ್ಲ

ಉಗ್ರರಿಂದ ಜಪ್ತಿ ಮಾಡಲಾಗಿದ್ದ ಸ್ಫೋಟಕಗಳ ಪರಿಶೀಲನೆ ವೇಳೆ ಕಾಶ್ಮೀರದ 9 ಮಂದಿ ಸಾವನ್ನಪ್ಪಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಆಪರೇಷನ್ ಸಿಂದೂರದಿಂದ ಯಾವುದೇ ಲಾಭವಾಗಲಿಲ್ಲ. ನಮ್ಮ 18 ಜನ ಸತ್ತರು. ಗಡಿಗಳು ರಾಜಿಯಾದವು. ಎರಡೂ ರಾಷ್ಟ್ರಗಳು ತಮ್ಮ ಸಂಬಂಧಗಳನ್ನು ಸುಧಾರಿಸಿಕೊಳ್ಳಬೇಕು. ದೆಹಲಿ ಸ್ಫೋಟದಿಂದ ನಾವು ಇನ್ನೂ ಹೊರಬಂದಿಲ್ಲ. ಆದರೆ ಪ್ರತಿಯೊಬ್ಬ ಕಾಶ್ಮೀರಿಯ ಕಡೆಗೆ ಬೆರಳು ತೋರಿಸಲಾಗುತ್ತಿದೆ. ನಾವು ಸಹ ಭಾರತೀಯರು ಎಂದು ಅವರು ಒಪ್ಪಿಕೊಳ್ಳುವುದು ಯಾವಾಗ?’ ಎಂದು ಪ್ರಶ್ನಿಸಿದರು.

ಇದೇ ವೇಳೆ, ‘ದೆಹಲಿಯಲ್ಲಿ ಬಾಂಬ್ ಸ್ಫೋಟಿಸಿದ ವೈದ್ಯರು ಉಗ್ರಮಾರ್ಗವನ್ನು ಏಕೆ ಆರಿಸಬೇಕಾಯಿತು? ಅದಕ್ಕೆ ಕಾರಣವೇನು ಎಂಬುದನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಿಳಿಸಬೇಕು’ ಎಂದು ಒತ್ತಾಯಿಸಿದರು.  

ಉಗ್ರರಿಗಾಗಿ ಕಣ್ಣೀರು-ಬಿಜೆಪಿ ಕಿಡಿ:

ಅಬ್ದುಲ್ಲಾ ಹೇಳಿಕೆಗೆ ಕಿಡಿ ಕಾರಿರುವ ಬಿಜೆಪಿ ನಾಯಕ ತರುಣ್‌ ಚುಗ್‌, ‘ಉಗ್ರರಿಗಾಗಿ ಕಣ್ಣೀರು ಸುರಿಸುವುದು ಫಾರೂಕ್‌ ಅಬ್ದುಲ್ಲಾ ಅವರ ಹಳೆಯ ಅಭ್ಯಾಸ. ಅದನ್ನು ಅವರು ನಿಲ್ಲಿಸಬೇಕು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳಕೊಲ್ಲೀಲಿ ವಾಯುಭಾರ ಕುಸಿತ : ಭಾರೀ ಮಳೆ ಎಚ್ಚರಿಕೆ
ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು