ಬಹು ನಿರೀಕ್ಷಿತ ಸಂಪುಟ ಬದಲಾವಣೆಗೆ ಮುಹೂರ್ತ

KannadaprabhaNewsNetwork |  
Published : Nov 17, 2025, 01:02 AM ISTUpdated : Nov 17, 2025, 04:54 AM IST
CM Siddaramaiah

ಸಾರಾಂಶ

ರಾಜ್ಯ ಸಂಪುಟ ಪುನಾರಚನೆ ಕುರಿತು ಎದ್ದಿರುವ ಕುತೂಹಲಕ್ಕೆ ಸೋಮವಾರ ದೆಹಲಿಯಲ್ಲಿ ಕ್ಲೈಮಾಕ್ಸ್‌ ಬೀಳುವ ಸಾಧ್ಯತೆ . ಪುನಾರಚನೆಗೆ ಸಂಬಂಧಿಸಿ ಹೈಕಮಾಂಡ್‌ನಿಂದ ತಾತ್ವಿಕ ಒಪ್ಪಿಗೆ ಪಡೆದಿದ್ದಾರೆ ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರನ್ನು   ದೆಹಲಿಯಲ್ಲಿ ಭೇಟಿ ಮಾಡುವ ಸಾಧ್ಯತೆ 

 ಬೆಂಗಳೂರು :  ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಎದ್ದಿರುವ ಸುದೀರ್ಘ ಅವಧಿಯ ಕುತೂಹಲಕ್ಕೆ ಸೋಮವಾರ ದೆಹಲಿಯಲ್ಲಿ ಕ್ಲೈಮಾಕ್ಸ್‌ ಬೀಳುವ ಸಾಧ್ಯತೆ ಇದೆ. ಸಂಪುಟ ಪುನಾರಚನೆಗೆ ಸಂಬಂಧಿಸಿ ಹೈಕಮಾಂಡ್‌ನಿಂದ ತಾತ್ವಿಕ ಒಪ್ಪಿಗೆ ಪಡೆದಿದ್ದಾರೆ ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಮವಾರ ದೆಹಲಿಯಲ್ಲಿ ಭೇಟಿ ಮಾಡುವ ಸಾಧ್ಯತೆಯಿದೆ. ಈ ವೇಳೆ ಸಂಪುಟ ಪುನರಾಚನೆ ಕುರಿತು ಖರ್ಗೆ ಅವರ ನಿಲುವು ಸ್ಪಷ್ಟಗೊಳ್ಳುವ ಸಾಧ್ಯತೆಯಿದೆ.

ದೆಹಲಿಯಲ್ಲಿ ಶನಿವಾರ ಕಪಿಲ್‌ ಸಿಬಲ್‌ ಅವರ ಪಾಡ್‌ಕಾಸ್ಟ್‌ನ 100 ಸಂಚಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು ಸಭಾಂಗಣದಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ರಾಹುಲ್‌ಗಾಂಧಿ ಅವರು ಸಂಪುಟ ಪುನಾರಚನೆ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲು ತಿಳಿಸಿದ್ದಾರೆ ಎಂಬ ಮಾಹಿತಿ ನೀಡಿದ್ದರು. ಜತೆಗೆ ಭೇಟಿಗೆ ಸಮಯವನ್ನೂ ಕೇಳಿದ್ದರು. ಇದಕ್ಕೆ ಸೋಮವಾರ ಭೇಟಿ ಮಾಡೋಣ ಎಂದು ಖರ್ಗೆ ತಿಳಿಸಿದ್ದರು ಎನ್ನಲಾಗಿದೆ.

ಕುತೂಹಲಕಾರಿ ಸಂಗತಿ ಎಂದರೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಈಗಾಗಲೇ ಭೇಟಿ ಮಾಡಿದ್ದು, ಸಂಪುಟ ಪುನರಾಚನೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಗರಿಗೆದರಿದ ಆಕಾಂಕ್ಷಿಗಳ ಚಟುವಟಿಕೆ:

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ತೀವ್ರ ಚಟುವಟಿಕೆ ಆರಂಭಿಸಿದ್ದು, ಸಂಪುಟ ಸೇರಲು ಲಾಬಿ ಶುರು ಮಾಡಿದ್ದಾರೆ. ಭಾನುವಾರದಿಂದಲೇ ಕಸರತ್ತು ಆರಂಭಿಸಿದ್ದು ನಾಯಕರನ್ನು ಭೇಟಿ ಮಾಡಲು ಶುರುಮಾಡಿದ್ದಾರೆ.

ಕೆಲ ಸಚಿವರ ಕಾರ್ಯವೈಖರಿ, ಸಾಧನೆ ಬಗೆಗಿನ ಅತೃಪ್ತಿಯಿಂದ ಸಚಿವ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಯಿದೆ. ಕೆಲವರಿಗೆ ಎರಡೂವರೆ ವರ್ಷ ತುಂಬಿದ ನೆಪ, ಹೊಸಬರಿಗೆ ಅವಕಾಶದ ಕಾರಣ ನೀಡಿ ಸಂಪುಟದಿಂದ ಕೊಕ್‌ ನೀಡುವ ಸಾಧ್ಯತೆಯಿದೆ. ಹೀಗಾಗಿ ಇದರ ಸದವಕಾಶ ಪಡೆಯಲು ಆಕಾಂಕ್ಷಿಗಳ ಚಟುವಟಿಕೆಗಳು ಗರಿಗೆದರಿವೆ.

ಆಕಾಂಕ್ಷಿಗಳ ಪಟ್ಟೀಲಿ

ನಾಡಗೌಡ, ನರೇಂದ್ರ ಸ್ವಾಮಿ, ಸಲೀಂ, ಹರಿ-ನರೇಂದ್ರಸ್ವಾಮಿ/ಶಿವಣ್ಣ- ಬಿ. ನಾಗೇಂದ್ರ- ಬಿ.ಕೆ. ಹರಿಪ್ರಸಾದ್- ರೂಪಾ ಶಶಿಧರ್- ಅಪ್ಪಾಜಿ ನಾಡಗೌಡ/ಬಸವರಾಜ ರಾಯರೆಡ್ಡಿ- ಲಕ್ಷ್ಮಣ ಸವದಿ- ಟಿ.ಬಿ.ಜಯಚಂದ್ರ- ರಘುಮೂರ್ತಿ- ಸಲೀಂ ಅಹಮದ್-ಯು.ಟಿ.ಖಾದರ್- ಶಿವಲಿಂಗೇಗೌಡ - ಆರ್‌.ವಿ.ದೇಶಪಾಂಡೆ

ದಿಲ್ಲಿಯಲ್ಲಿ ಖರ್ಗೆ ಜತೆಗೆ ಡಿಕೆ ಸಹೋದರರ ಭೇಟಿ

 45 ನಿಮಿಷಗಳ ಕಾಲ ರಾಜಕೀಯ ಚರ್ಚೆ- ಸಿಎಂ ಆಗಮನ ಮುನ್ನಾ ದಿನ ಮಾತುಕತೆಕನ್ನಡಪ್ರಭ ವಾರ್ತೆ ನವದೆಹಲಿಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ದೆಹಲಿಯಲ್ಲಿ ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. 

ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ದೆಹಲಿಲಯಲ್ಲಿ ಖರ್ಗೆ ಅವರನ್ನು ಭೇಟಿಯಾಗುವ ದಿನ ಮುಂಚೆ, ಈ ಇಬ್ಬರೂ ನಾಯಲರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. 

ಭೇಟಿಯ ವೇಳೆ ಏನೆಲ್ಲಾ ಮಾತುಕತೆ ನಡೆದಿದೆ ಎಂಬುದರ ಬಗ್ಗೆ ಮೂವರೂ ನಾಯಕರು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ, ಕೆಪಿಸಿಸಿ ನಾಯಕತ್ವ ಸೇರಿದಂತೆ ವಿವಿಧ ರಾಜಕೀಯ ವಿಷಯಗಳ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಅವರ ಸೋದರ ಡಿ.ಕೆ. ಸುರೇಶ್‌ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ದಿಲ್ಲೀಲಿ ಖರ್ಗೆ- ಸಿದ್ದುಸಂಪುಟ ಪುನಾರಚನೆ ಚರ್ಚೆ

ರಾಹುಲ್‌ ಗಾಂಧಿ ತಾತ್ವಿಕ ಒಪ್ಪಿಗೆ ಬೆನ್ನಲ್ಲೇ ಉಭಯ ನಾಯಕರ ಭೇಟಿ

ಪುನಾರಚನೆ ವೇಳೆ ಸಾಧನೆ ತೋರದ ಕೆಲ ಸಚಿವರಿಗೆ ಕೊಕ್‌ ಸಂಭವ

ಸಚಿವ ಸ್ಥಾನಕ್ಕೆ ರಾಜಧಾನೀಲಿ ಹಲವು ಆಕಾಂಕ್ಷಿಗಳಿಂದ ಭಾರೀ ಲಾಬಿ

PREV
Read more Articles on

Recommended Stories

ಪರ್ಪ್ಲೆಕ್ಸಿಟಿ ಕಂಪನಿ ಶೀಘ್ರ ಬಂದ್ : ಎಐ ದಿಗ್ಗಜರ ಭವಿಷ್ಯ
ಆಪರೇಷನ್‌ ಸಿಂದೂರ ಅಪ್ರಯೋಜಕ : ಫಾರೂಕ್‌ ಅಬ್ದುಲ್ಲಾ ವಿವಾದ