ನೀಟ್‌ ಪರೀಕ್ಷೆ ಬರೆಯಲು ಹೆಚ್ಚುವರಿ 15 ನಿಮಿಷ

KannadaprabhaNewsNetwork |  
Published : Jun 13, 2026, 01:45 AM IST
Neet

ಸಾರಾಂಶ

ಜೂ.21ರಂದು ನಡೆಯಲಿರುವ ನೀಟ್‌ ಪರೀಕ್ಷೆಯನ್ನು ವಿದ್ಯಾರ್ಥಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ, 15 ನಿಮಿಷ ಹೆಚ್ಚುವರಿ ಸಮಯ ನೀಡಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಘೋಷಿಸಿದೆ. ಜತೆಗೆ ಲೆಕ್ಕಾಚಾರಗಳನ್ನು ಮಾಡಲು ಉತ್ತರಪತ್ರಿಕೆಯ ಜತೆ 2ರ ಬದಲು 4 ಹಾಳೆಗಳನ್ನು ಕೊಡಲಾಗುವುದು ಎಂದಿದೆ.

 ನವದೆಹಲಿ: ಜೂ.21ರಂದು ನಡೆಯಲಿರುವ ನೀಟ್‌ ಪರೀಕ್ಷೆಯನ್ನು ವಿದ್ಯಾರ್ಥಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ, 15 ನಿಮಿಷ ಹೆಚ್ಚುವರಿ ಸಮಯ ನೀಡಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಘೋಷಿಸಿದೆ. ಜತೆಗೆ ಲೆಕ್ಕಾಚಾರಗಳನ್ನು ಮಾಡಲು ಉತ್ತರಪತ್ರಿಕೆಯ ಜತೆ 2ರ ಬದಲು 4 ಹಾಳೆಗಳನ್ನು ಕೊಡಲಾಗುವುದು ಎಂದಿದೆ.

ಪರೀಕ್ಷೆಯ ಸಮಯ 5:15ರ ವರೆಗೆ

ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯ ವರೆಗಿದ್ದ ಪರೀಕ್ಷೆಯ ಸಮಯವನ್ನು 5:15ರ ವರೆಗೆ ವಿಸ್ತರಿಸಲಾಗಿದ್ದು, ಈ ಅವಧಿಯನ್ನು ಪರಿವೀಕ್ಷಕರ ಸಹಿ ಪಡೆಯುವಂತಹ ಕೆಲಸಗಳಿಗೆ ವಿನಿಯೋಗಿಸಬಹುದು ಎಂದು ಎನ್‌ಟಿಎ ಹೇಳಿದೆ. ಜತೆಗೆ, ಉತ್ತರ ಹೊರತುಪಡಿಸಿದ ಲೆಕ್ಕಾಚಾರ ಮಾಲು ಇರುವ ರಫ್‌ ಪುಟಗಳನ್ನು 4ಕ್ಕೇರಿಸಲಾಗಿದೆ. ಇವುಗಳನ್ನು ಉತ್ತರಪತ್ರಿಕೆಯ ಕೊನೆಯಲ್ಲಷ್ಟೇ ಅಲ್ಲದೆ ಶುರುವಲ್ಲೂ ಕೊಡುವ ಮೂಲಕ, ಎಡಗೈಯ್ಯಲ್ಲಿ ಬರೆಯುವವರಿಗೆ ಅನುಕೂಲ ಮಾಡಿಕೊಡಲಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣ ರದ್ದಾಗಿದ್ದ ಪರೀಕ್ಷೆ

ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣ ರದ್ದಾಗಿದ್ದ ಪರೀಕ್ಷೆಯಿಂದ ದೇಶದಲ್ಲಿ ಭುಗಿಲೆದ್ದಿದ್ದ ಆಕ್ರೋಶಕ್ಕೆ ಮತ್ತೆ ಎಡೆಮಾಡಿಕೊಡದಂತೆ ಎಚ್ಚರಿಕೆ ವಹಿಸುತ್ತಿರುವ ಎನ್‌ಟಿಎ, ಈಗಾಗಲೇ ಪ್ರಶ್ನೆಪತ್ರಿಕೆ ತಯಾರಕರನ್ನು ಲಾಕ್‌ಡೌನ್‌ನಲ್ಲಿರಿಸುವುದು, ಪತ್ರಿಕೆಗಳನ್ನು ವಾಯುಪಡೆ ವಿಮಾನಗಳಲ್ಲಿ ಸಾಗಿಸುವುದು ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗ್ವತ್‌ ಸಂಚರಿಸುತ್ತಿದ್ದ ರೈಲಿನ ಮೇಲೆ ಕಲ್ಲೆಸೆತ
ಟಿಎಂಸಿಯಿಂದ ಮಮತಾ ಔಟ್‌?