ಇನ್ನು ಚಾಲಕರಿಂದ ಓಲಾ ಕಮಿಷನ್‌ ಪಡೆಯಲ್ಲ

KannadaprabhaNewsNetwork |  
Published : Jun 18, 2025, 12:28 AM ISTUpdated : Jun 18, 2025, 06:21 AM IST
ಓಲಾ  | Kannada Prabha

ಸಾರಾಂಶ

ಓಲಾ ಕಂಪನಿಯು, ತನ್ನ ವಾಹನ ಚಾಲಕರು ಪ್ರತಿ ಪ್ರಯಾಣ ದರದಲ್ಲಿ ಕಂಪನಿಗೆ ಕೊಡಬೇಕಿದ್ದ ನಿರ್ದಿಷ್ಟ ಮೊತ್ತದ ಕಮಿಷನ್ ವ್ಯವಸ್ಥೆಯನ್ನು ಮಂಗಳವಾರದಿಂದ ರದ್ದುಗೊಳಿಸಿದೆ.

ನವದೆಹಲಿ: ಓಲಾ ಕಂಪನಿಯು, ತನ್ನ ವಾಹನ ಚಾಲಕರು ಪ್ರತಿ ಪ್ರಯಾಣ ದರದಲ್ಲಿ ಕಂಪನಿಗೆ ಕೊಡಬೇಕಿದ್ದ ನಿರ್ದಿಷ್ಟ ಮೊತ್ತದ ಕಮಿಷನ್ ವ್ಯವಸ್ಥೆಯನ್ನು ಮಂಗಳವಾರದಿಂದ ರದ್ದುಗೊಳಿಸಿದ್ದು, ಶೂನ್ಯ ಕಮಿಷನ್ ಮಾದರಿಯನ್ನು ಜಾರಿಗೆ ತಂದಿದೆ. ಈ ಮೂಲಕ 1 ಲಕ್ಷಕ್ಕೂ ಅಧಿಕ ಚಾಲಕರು ಆದಾಯ ಮಿತಿಗಳಿಲ್ಲದೆ ಗ್ರಾಹಕರಿಂದ ಪಡೆದ ಹಣವನ್ನು ಪೂರ್ಣವಾಗಿ ತಮ್ಮಲ್ಲೇ ಉಳಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ.

‘ಈ ಉಪಕ್ರಮದಿಂದಾಗಿ, ಚಾಲಕರು ಯಾವುದೇ ಕಡಿತ ಅಥವಾ ಆದಾಯ ಮಿತಿಗಳಿಲ್ಲದೆ ಸಂಪೂರ್ಣ ಮೊತ್ತವನ್ನು ತಮ್ಮಲ್ಲೇ ಇಟ್ಟುಕೊಳ್ಳಬಹುದು. ಇದು ಚಾಲಕರ ಗಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಕ್ರಮವು ದೇಶಾದ್ಯಂತ ಜಾರಿಗೆ ಬಂದಿದ್ದು, ಆಟೋರಿಕ್ಷಾ, ಬೈಕ್ ಹಾಗೂ ಕ್ಯಾಬ್‌ಗಳಿಗೆ ಅನ್ವಯವಾಗುತ್ತದೆ’ ಎಂದು ಓಲಾ ಕಂಪನಿ ತಿಳಿಸಿದೆ. ಇದುವರೆಗೆ ಚಾಲಕರು ಗ್ರಾಹಕರಿಂದ ಪಡೆದ ಪ್ರಯಾಣ ಶುಲ್ಕದಲ್ಲಿ ನಿರ್ದಿಷ್ಟ ಮೊತ್ತವನ್ನು ಕಂಪನಿಗೆ ಪಾವತಿಸಬೇಕಿತ್ತು. ಇನ್ನು ಮುಂದೆ ಪೂರ್ತಿ ಮೊತ್ತ ಚಾಲಕರಲ್ಲೇ ಉಳಿಯಲಿದೆ.

ಛತ್ತೀಸ್‌ಗಢ: ನಕ್ಸಲರಿಂದ 3 ಗ್ರಾಮಸ್ಥರ ಹತ್ಯೆ

ಬಿಜಾಪುರ: ನಕ್ಸಲ್ ನಿಗ್ರಹಕ್ಕೆ ಪಣ ತೊಟ್ಟಿರುವ ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಮತ್ತೆ ಮೊಂಡಾಟ ಮೆರೆದಿದ್ದು, ಕತ್ತು ಹಿಸುಕಿ ಮೂವರು ಗ್ರಾಮಸ್ಥರನ್ನು ಹತ್ಯೆಗೈದಿರುವ ಘಟನೆ ಇಲ್ಲಿನ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಮಾವೋವಾದಿಗಳು ಇಲ್ಲಿನ ಪೆದ್ದಕೋರ್ಮಾ(ನಯಪಾರ) ಗ್ರಾಮದ ಮೂವರು ನಿವಾಸಿಗಳನ್ನು ಸಂಜೆ ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಗ್ರಾಮಸ್ಥರಲ್ಲಿ ಭಯ ಹುಟ್ಟಿಸುವ ಕಾರಣಕ್ಕೆ ನಕ್ಸಲರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ಗಾಜಾದಲ್ಲಿ ಮತ್ತೆ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ: 45 ಸಾವು

ಖಾನ್ ಯೂನಿಸ್‌ (ಗಾಜಾ): ನಿರಾಶ್ರಿತ ಶಿಬಿರದಲ್ಲಿ ವಿಶ್ವಸಂಸ್ಥೆಯ ನೆರವಿನ ಟ್ರಕ್‌ಗೆ ಕಾಯುತ್ತಿದ್ದ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ ಸುಮಾರು 45 ಮಂದಿ ನಿರಾಶ್ರಿತರು ಸಾವನ್ನಪ್ಪಿರುವ ಘಟನೆ ನಡೆದಿದೆ.ಈ ಬಗ್ಗೆ ಇಸ್ರೇಲ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಸ್ರೇಲ್ ನಡೆಸಿದ ಶೆಲ್‌ ದಾಳಿಯಲ್ಲಿ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದ ತಿಂಗಳ ಕೂಡ ಇಸ್ರೇಲ್ ಗಾಜಾದ ನಿರಾಶ್ರಿತ ಶಿಬಿರದ ಮೇಲೆ ದಾಳಿ ನಡೆಸಿತ್ತು. ಈ ದಾಳಿಗೆ ಹಲವು ಪ್ಯಾಲೆಸ್ತೀನಿಯರು ಬಲಿಯಾಗಿದ್ದರು.

ಉಕ್ರೇನ್ ಮೇಲೆ ರಷ್ಯಾ 440 ಡ್ರೋನ್‌ಗಳಿಂದ ದಾಳಿ: 15 ಸಾವು, 116 ಮಂದಿಗೆ ಗಾಯ

ಕೀವ್‌: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಮುಂದುವರೆದಿದ್ದು, ಉಕ್ರೇನ್‌ನ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ರಷ್ಯಾ 440 ಡ್ರೋನ್‌ಗಳಿಂದ ಭೀಕರ ಡ್ರೋನ್ ದಾಳಿ ನಡೆಸಿದೆ. 15 ಉಕ್ರೇನ್ನಿಯರು ಸಾವನ್ನಪ್ಪಿದ್ದು, 116 ಮಂದಿ ಗಾಯಗೊಂಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ಭೀಕರ ಡ್ರೋನ್ ದಾಳಿಯಲ್ಲಿ ಇದು ಕೂಡ ಒಂದಾಗಿದ್ದು, 15 ನಾಗರಿಕರು ಬಲಿಯಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

ರಾತ್ರಿಯಿಡೀ ರಷ್ಯಾ ಸುಮಾರು 440 ಡ್ರೋನ್‌, 32 ಕ್ಷಿಪಣಿಗಳನ್ನು ಬಳಸಿಕೊಂಡು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ರಾತ್ರಿಯಿಡೀ ಜನರಿಗೆ ಸ್ಫೋಟದ ಸದ್ದು ಕೇಳಿಸಿದೆ. ಇನ್ನು ರಷ್ಯಾದ ದಾಳಿಯಲ್ಲಿ 9 ಅಂತಸ್ತಿನ ಕಟ್ಟಡ ನೆಲಸಮಗೊಂಡಿದ್ದು, ಡಜನ್‌ಗಟ್ಟಲೆ ಅಪಾರ್ಟ್‌ಮೆಂಟ್‌ಗಳು ನಾಶವಾಗಿವೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ