ಭಯೋತ್ಪಾದನೆಗೆ ನಲುಗಿರುವ ಕಾಶ್ಮೀರದಲ್ಲಿ ಬದಲಾವಣೆಯ ಸಂಕೇತ : ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್!

KannadaprabhaNewsNetwork |  
Published : Oct 21, 2024, 12:43 AM ISTUpdated : Oct 21, 2024, 04:58 AM IST
ಒಮರ್‌ | Kannada Prabha

ಸಾರಾಂಶ

ಭಯೋತ್ಪಾದನೆಗೆ ನಲುಗಿರುವ ಕಾಶ್ಮೀರದಲ್ಲಿ ಬದಲಾವಣೆಯ ಸಂಕೇತ ಎಂಬಂತೆ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್ ಓಟ ಭಾನುವಾರ ನಡೆದಿದೆ.

ಶ್ರೀನಗರ: ಭಯೋತ್ಪಾದನೆಗೆ ನಲುಗಿರುವ ಕಾಶ್ಮೀರದಲ್ಲಿ ಬದಲಾವಣೆಯ ಸಂಕೇತ ಎಂಬಂತೆ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್ ಓಟ ಭಾನುವಾರ ನಡೆದಿದೆ. 2000 ಜನ ಭಾಗಿಯಾಗಿದ್ದ ಈ ಮ್ಯಾರಥಾನ್‌ನಲ್ಲಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಕೂಡ ಪಾಲ್ಗೊಂಡು 2 ತಾಸಿನಲ್ಲಿ 21 ಕಿ.ಮೀ ಓಡಿ ಗಮನ ಸೆಳೆದಿದ್ದಾರೆ. 

ಶ್ರೀನಗರದ ಪೋಲೋ ಸ್ಟೇಡಿಯಂನಲ್ಲಿ ಕಾಶ್ಮೀರದ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್ ನಡೆಯಿತು. 59 ವಿದೇಶಿ ಅಥ್ಲೀಟ್‌ಗಳು ಸೇರಿ ಸುಮಾರು 2000 ಜನರು ಭಾಗಿಯಾಗಿದ್ದರು. ಸಿಎಂ ಒಮರ್ ಅಬ್ದುಲ್ಲಾ ಅಲ್ಲದೆ, ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಕೂಡ ಭಾಗಿಯಾಗಿದ್ದರು.

ಅಥ್ಲೀಟ್ಸ್‌ ಜೊತೆಗೆ ಮ್ಯಾರಥಾನ್‌ ಓಟದಲ್ಲಿ ಭಾಗಿಯಾಗಿದ್ದ ಒಮರ್ ಅಬ್ದುಲ್ಲಾ, 2 ಗಂಟೆಯಲ್ಲಿ 21 ಕಿ.ಮೀ ಓಡಿದರು. ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಈ ಹಿಂದೆ ಒಂದು ಬಾರಿ 13 ಕಿ.ಮೀ ಓಡಿದ್ದೆ. ಅದಕ್ಕಿಂತ ಜಾಸ್ತಿ ಎಂದೂ ಓಡಿರಲಿಲ್ಲ. ಆದರೆ ಇಂದು ಮ್ಯಾರಥಾನ್‌ನಲ್ಲಿ ಪ್ರತಿ 5 ನಿಮಿಷ 54 ಸೆಕೆಂಡ್‌ಗೆ 1 ಕಿ.ಮೀ ಸರಾಸರಿಯಲ್ಲಿ 21 ಕಿಮೀ ಓಡಿದ್ದೇನೆ. ಇದು ಸಂತಸ ತಂದಿದೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ದೇಶದಲ್ಲಿ ಭಾರೀ ಮಳೆ, ಬಿರುಗಾಳಿ ಸಾಧ್ಯತೆ: ಇಲಾಖೆ ಮುನ್ಸೂಚನೆ