ದಿಲ್ಲಿಯಲ್ಲಿ 2028ರ ಏ.1ರಿಂದ ಇ-ಬೈಕ್‌ ಮಾತ್ರ ನೋಂದಣಿ

Published : Jun 30, 2026, 10:19 AM IST
E Bike

ಸಾರಾಂಶ

ದೇಶದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯದಿಂದ ಕೂಡಿದ ನಗರವಾದ ದೆಹಲಿಯನ್ನು ಮಾಲಿನ್ಯ ಮುಕ್ತ ಮಾಡಲು ರಾಜ್ಯ ಸರ್ಕಾರ, ಸೋಮವಾರ ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ನೀತಿ ಅನುಮೋದಿಸಿದೆ. ಈ ನೀತಿ ಜು.1ರಿಂದ 2030ರ ಮಾ,31ರವರೆಗೆ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ.

 ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯದಿಂದ ಕೂಡಿದ ನಗರವಾದ ದೆಹಲಿಯನ್ನು ಮಾಲಿನ್ಯ ಮುಕ್ತ ಮಾಡಲು ರಾಜ್ಯ ಸರ್ಕಾರ, ಸೋಮವಾರ ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ನೀತಿ ಅನುಮೋದಿಸಿದೆ. ಈ ನೀತಿ ಜು.1ರಿಂದ 2030ರ ಮಾ,31ರವರೆಗೆ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ.

 ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು ಮಾತ್ರ ಹೊಸ ನೋಂದ

ಈ ಪ್ರಕಾರ 2028ರ ಏ.1ರಿಂದ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು ಮಾತ್ರ ಹೊಸ ನೋಂದಣಿಗೆ ಅರ್ಹವಾಗಿರುತ್ತವೆ. ಹೊಸ ಪೆಟ್ರೋಲ್ ಮತ್ತು ಸಿಎನ್‌ಜಿ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯನ್ನು ಹಂತಹಂತವಾಗಿ ರದ್ದುಗೊಳಿಸಲಾಗುತ್ತದೆ.

30 ಲಕ್ಷ ರು.ಗಿಂತ ಕಮ್ಮಿ ಬೆಲೆಯ ಇ-ಕಾರುಗಳು ತೆರಿಗೆ ಮುಕ್ತ

ಇನ್ನು 2027ರ ಜ.1ರಿಂದ ದೆಹಲಿಯಲ್ಲಿ ವಿದ್ಯುತ್ ಆಟೋರಿಕ್ಷಾಗಳು ಮತ್ತು ಎನ್‌-1 ವರ್ಗದ ಸರಕು ವಾಹನಗಳನ್ನು ಮಾತ್ರ ನೋಂದಾಯಿಸಲಾಗುತ್ತದೆ. 30 ಲಕ್ಷ ರು.ಗಿಂತ ಕಮ್ಮಿ ಬೆಲೆಯ ಇ-ಕಾರುಗಳು ತೆರಿಗೆ ಮುಕ್ತ ಆಗಲಿವೆ.

ಇದೇ ವೇಳೆ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ₹30,000, ವಿದ್ಯುತ್ ಆಟೋರಿಕ್ಷಾಗಳಿಗೆ ₹50,000 ಮತ್ತು ಎನ್‌1 ವಿದ್ಯುತ್ ಟ್ರಕ್‌ಗಳಿಗೆ ₹1 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹ ದೊರೆಯಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಜಂಟಿ ಸಮಿತಿ
ನಮ್ಮ ಸಂಪರ್ಕಕ್ಕೆ ಜ್ಞಾನೇಶ್ ಯತ್ನ : ರಾಹುಲ್‌ ಬಾಂಬ್