ತಿರುವನಂತಪುರಂ: ಕೇರಳದ ಪ್ರಸಿದ್ಧ ಪದ್ಮನಾಭಸ್ವಾಮಿ ದೇಗುಲದಲ್ಲಿ 270 ವರ್ಷಗಳ ಬಳಿಕ ಅದ್ಧೂರಿಯಾಗಿ ಭಾನುವಾರ ಮಹಾ ಕುಂಭಾಭಿಷೇಕ ನಡೆದಿದ್ದು, 2 ಶತಮಾನಕ್ಕೂ ಅಧಿಕ ವರ್ಷದ ಬಳಿಕ ನಡೆದ ಅಷ್ಟಬಂಧ ಕಲಶ ಧಾರ್ಮಿಕ ಆಚರಣೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಸಾಮಾನ್ಯವಾಗಿ 12 ವರ್ಷಕ್ಕೊಮ್ಮೆ ಕುಂಭಾಬಿಷೇಕ ಮತ್ತು 100 ವರ್ಷಕ್ಕೊಮ್ಮೆ ಅಷ್ಟಬಂಧ ನಡೆಸಲಾಗುತ್ತದೆ. ಆದರೆ ಇತ್ತೀಚಿನ ಪರಿಶೀಲನೆ ವೇಳೆ ದೇಗುಲದ ಹಲವು ಮೂರ್ತಿಗಳು ಭಗ್ನಗೊಂಡಿದ್ದು ಕಂಡುಬಂದಿತ್ತು. ಹೀಗಾಗಿ ಹೊಸದಾಗಿ ಅಷ್ಟಬಂಧ ನಡೆಸಿ, ಕುಂಭಾಬಿಷೇಕ ನಡೆಸಲು ಉದ್ದೇಶಿಸಲಾಗಿತ್ತು. ಇಂಥ ಪ್ರಕ್ರಿಯೆ ಈ ಹಿಂದೆ 270 ವರ್ಷಗಳ ಹಿಂದೆ ನಡೆದಿತ್ತು. ಇದೀಗ ಹಲವು ಹೊಸ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿ ಬಳಿಕ ಕುಂಭಾಬಿಷೇಕ ನಡೆಸಲಾಗಿದೆ.
ಬಕ್ರೀದ್ ದಿನ ಅಲ್ಲಾಗಾಗಿ ಕತ್ತು ಸೀಳಿಕೊಂಡು ಯುಪಿ ವ್ಯಕ್ತಿ ಪ್ರಾಣತ್ಯಾಗ
ದೇವರಿಯಾ (ಉತ್ತರ ಪ್ರದೇಶ): ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅಲ್ಲಾ ಮತ್ತು ಪ್ರವಾದಿ ಮೊಹಮ್ಮದ್ ಪೈಗಂಬರರಿಗಾಗಿ ಪ್ರಾಣತ್ಯಾಗ ಮಾಡುವುದಕ್ಕಾಗಿ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ 60 ವರ್ಷದ ವ್ಯಕ್ತಿಯೊಬ್ಬ ಚಾಕುವಿನಿಂದ ತನ್ನ ಕತ್ತನ್ನು ಸೀಳಿಕೊಂಡು ಜೀವಬಿಟ್ಟ ದಾರುಣ ಘಟನೆ ಶನಿವಾರ ನಡೆದಿದೆ. ಅಲ್ಲಾ ಮತ್ತು ಪ್ರವಾದಿ ಪೈಗಂಬರರಿಗಾಗಿ ಪ್ರಾಣತ್ಯಾಗ ಮಾಡುತ್ತಿರುವುದಾಗಿ ಹೇಳಿ ಆತ ಪ್ರಾಣ ಬಿಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಆ ಬಗ್ಗೆ ಯಾವುದೇ ದಾಖಲೆ ದೊರೆತಿಲ್ಲ. ಮನೆಯ ಸಮೀಪದ ಗುಡಿಸಲಿನಲ್ಲಿ ಚಾಕುವಿನಿಂದ ಕತ್ತನ್ನು ಸೀಳಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಶನಿವಾರ ಬೆಳಿಗ್ಗೆ 10 ಗಂಟೆಗೆ ಸುಲ್ತಾನ್ ಸೈಯದ್ ಮಖ್ದೂಮ್ ಅಶ್ರಫ್ ಷಾ ಅವರ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಮನೆಗೆ ವಾಪಸಾದರು. ಮನೆಗೆ ಬಂದ ತಕ್ಷಣ ಪಕ್ಕದ ಗುಡಿಸಲಿಗೆ ಹೋದರು. ಆ ಬಳಿಕ ಅವರು ಕೂಗಾಟ ಕೇಳಿತು. ಹೋಗಿ ನೋಡುವಷ್ಟರಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದರು’ ಎಂದು ಮೃತನ ಪತ್ನಿ ತಿಳಿಸಿದ್ದಾರೆ.
==
==
==
ಮಾತೃಭಾಷೆ ಶಿಕ್ಷಣಕ್ಕೆ ತೆಲಂಗಾಣ ಸಿಬಿಎಸ್‌ಇ ಶಾಲೆಗಳ ವಿರೋಧಹೈದರಾಬಾದ್: ಪೂರ್ವ ಪ್ರಾಥಮಿಕ ಹಂತದಿಂದ 2ನೇ ತರಗತಿವರೆಗೆ ಮಾತೃಭಾಷೆ ಶಿಕ್ಷಣ ಕಡ್ಡಾಯ ಎಂಬ ಸಿಬಿಎಸ್‌ಇ ಮಂಡಳಿಯ ನಿರ್ಧಾರಕ್ಕೆ ಆಂಧ್ರಪ್ರದೇಶದ ಹಲವು ಸಿಬಿಎಸ್‌ಸಿ ಶಾಲೆಗಳು ಅಪಸ್ವರ ಎತ್ತಿವೆ. ರಾಜ್ಯದ ಶಾಲೆಗಳಲ್ಲಿ ಬಹುಭಾಷಾ ಮಕ್ಕಳು ಹೆಚ್ಚಾಗಿದ್ದು, ಅವರಿಗೆ ಒಂದೇ ಬಾರಿ ಒಂದು ಭಾಷೆಯಿಂದ ಕಲಿಕೆ ಆರಂಭಿಸಿದರೆ ತುಂಬಾ ಕಷ್ಟವಾಗುತ್ತದೆ. ಜೊತೆಗೆ ಒಂದೇ ಭಾಷೆಯಲ್ಲಿ ಶಿಕ್ಷಣವು ಶಿಕ್ಷಕರಿಗೂ ಸಹ ಕ್ಲಿಷ್ಟಕರವಾಗಿದ್ದು, ಅದಕ್ಕಾಗಿ ನುರಿತ ಬೋಧಕರ ಕೊರತೆ ಕಾಣಿಸಲಿದೆ. ಪಠ್ಯಗಳು ಸಂಪೂರ್ಣವಾಗಿ ಬದಲಾಗಬೇಕಿದ್ದು, ಇದಕ್ಕೆ ಶಿಕ್ಷಕರು ಒಗ್ಗಿಕೊಳ್ಳುವುದು ಕಷ್ಟವಾಗಲಿದೆ. ಮತ್ತೊಂದೆಡೆ ತೆಲುಗು ಮಾತನಾಡುವವ ಪೋಷಕರಿಗೂ ಇದು ಬಿಸಿತುಪ್ಪವಾಗಿ ಪರಿಣಮಿಸಿದ್ದು, ಹೆಚ್ಚಿನವರು ಇಂಗ್ಲಿಷ್ ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೈದರಾಬಾದ್‌ನ ಶಾಲೆಯೊಂದರ ಪ್ರಾಂಶುಪಾಲರು ಹೇಳಿದ್ದಾರೆ. ಜೊತೆಗೆ ಮಾತೃಭಾಷೆ ಶಿಕ್ಷಣವು ಆಯ್ಕೆಯಾಗಿರಬೇಕೆ ಹೊರತು ಕಡ್ಡಾಯವಾಗಿ ಅಲ್ಲ. ಅಧ್ಯಯನವು ಮಕ್ಕಳಿಗೆ ಸರಿಯಾಗಿ ಅರ್ಥವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.