ಬೆಂಗಳೂರು ಮನೆ ಧ್ವಂಸ ಬಗ್ಗೆ ಕೇರಳ ಬಳಿಕ ಪಾಕಿಸ್ತಾನ ಕ್ಯಾತೆ

KannadaprabhaNewsNetwork |  
Published : Dec 30, 2025, 01:15 AM IST
ಪಾಕಿಸ್ತಾನ | Kannada Prabha

ಸಾರಾಂಶ

ಬೆಂಗಳೂರಿನ ಯಲಹಂಕದ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮುಸ್ಲಿಮರ 200 ಮನೆಗಳನ್ನು ಕರ್ನಾಟಕ ಸರ್ಕಾರ ನೆಲಸಮ ಮಾಡಿದ್ದಕ್ಕೆ ಕೇರಳ ಸರ್ಕಾರ ಕ್ಯಾತೆ ತೆಗೆದಿತ್ತು. ಇದೀಗ ಕ್ಯಾತೆಯ ಸರದಿ ಭಾರತದ ವೈರಿ ದೇಶ ಪಾಕಿಸ್ತಾನದ್ದಾಗಿದೆ. ಸೋಮವಾರ ಹೇಳಿಕೆ ನೀಡಿರುವ ಪಾಕ್ ವಿದೇಶಾಂಗ ಇಲಾಖೆ, ‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ಕಿರುಕುಳವು ತೀವ್ರ ಕಳವಳದ ವಿಷಯವಾಗಿದೆ. ಅಲ್ಲಿ ಕ್ರಿಸ್‌ಮಸ್‌ ಆಚರಣೆ ಮೇಲೆ ದಾಳಿಗಳು ಆಗಿವೆ. ಸರ್ಕಾರಿ ಪ್ರಾಯೋಜಕತ್ವದಿಂದ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಹಾಗೂ ಮುಸ್ಲಿಮರ ಗುಂಪು ಹತ್ಯೆ ನಡೆದಿವೆ’ ಎಂದು ಆರೋಪಿಸಿದೆ.

ಪಿಣರಾಯಿ ಟೀಕೆಗೆ ಈಗ ಶತ್ರುದೇಶದಿಂದಲೂ ದನಿ

---

- ಸರ್ಕಾರಿ ಪ್ರಾಯೋಜಕತ್ವದಲ್ಲಿ ಮುಸ್ಲಿಮರ ಮನೆಗಳ ನಾಶ: ನೆರೆದೇಶ- ನಮ್ಮತ್ತ ಬೆರಳು ತೋರುವ ಮುನ್ನ ನಿಮ್ಮ ಸ್ಥಿತಿ ನೋಡಿಕೊಳ್ಳಿ: ಭಾರತ

---

ಪಾಕ್‌ ಹೇಳಿದ್ದೇನು?

- ಕ್ರಿಸ್‌ಮಸ್‌ ವೇಳೆ ಭಾರತದಲ್ಲಿ ವಿಧ್ವಂಸಕ ಘಟನೆಗಳು ನಡೆದಿವೆ- ಮುಸ್ಲಿಮರನ್ನೂ ಗುರಿಯಾಗಿಸಿಕೊಂಡು ಅಭಿಯಾನಗಳಾಗಿವೆ- ಸರ್ಕಾರಿ ಪ್ರಾಯೋಜಿತವಾಗಿ ಮುಸ್ಲಿಮರ ಮನೆ ಧ್ವಂಸವಾಗಿವೆ- ಅಖ್ಲಾಕ್‌ ಸೇರಿ ಪದೇ ಪದೇ ಗುಂಪು ಹತ್ಯೆಗಳು ವರದಿಯಾಗಿವೆ- ಅಪರಾಧಿಗಳನ್ನು ಸರ್ಕಾರವೇ ರಕ್ಷಿಸುವ ಕೆಲಸವನ್ನು ಮಾಡಿದೆ- ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರ ತಹೀರ್‌ ಟೀಕೆ

--

ಭಾರತದ ತಿರುಗೇಟು

- ಭಾರತದ ಕುರಿತು ಪಾಕಿಸ್ತಾನ ಹೇಳಿಕೆಗಳು ಕಪೋಲಕಲ್ಪಿತವಾದವು- ಅಲ್ಪಸಂಖ್ಯಾತರ ಮೇಲಿನ ದಾಳಿಯಲ್ಲಿ ಪಾಕ್‌ನದ್ದು ಕಳಪೆ ದಾಖಲೆ- ಆ ದೇಶದ ಹೇಳಿಕೆಗಳನ್ನು ಭಾರತ ಸರ್ಕಾರ ತಿರಸ್ಕಾರ ಮಾಡತ್ತೆ- ಅಲ್ಪಸಂಖ್ಯಾತರನ್ನು ಪಾಕಿಸ್ತಾನ ಭಯಾನಕವಾಗಿ ನಡೆಸಿಕೊಳ್ಳುತ್ತೆ- ಇನ್ನೊಬ್ಬರತ್ತ ಎಷ್ಟೇ ಬೆರಳು ತೋರಿಸಿದರೂ ವಾಸ್ತವ ಬದಲಾಗದು- ಭಾರತದ ವಿದೇಶಾಂಗ ಇಲಾಖೆ ವಕ್ತಾರ ಜೈಸ್ವಾಲ್‌ ತಿರುಗೇಟು--ಇಸ್ಲಾಮಾಬಾದ್‌/ನವದೆಹಲಿ: ಬೆಂಗಳೂರಿನ ಯಲಹಂಕದ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮುಸ್ಲಿಮರ 200 ಮನೆಗಳನ್ನು ಕರ್ನಾಟಕ ಸರ್ಕಾರ ನೆಲಸಮ ಮಾಡಿದ್ದಕ್ಕೆ ಕೇರಳ ಸರ್ಕಾರ ಕ್ಯಾತೆ ತೆಗೆದಿತ್ತು. ಇದೀಗ ಕ್ಯಾತೆಯ ಸರದಿ ಭಾರತದ ವೈರಿ ದೇಶ ಪಾಕಿಸ್ತಾನದ್ದಾಗಿದೆ. ಸೋಮವಾರ ಹೇಳಿಕೆ ನೀಡಿರುವ ಪಾಕ್ ವಿದೇಶಾಂಗ ಇಲಾಖೆ, ‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ಕಿರುಕುಳವು ತೀವ್ರ ಕಳವಳದ ವಿಷಯವಾಗಿದೆ. ಅಲ್ಲಿ ಕ್ರಿಸ್‌ಮಸ್‌ ಆಚರಣೆ ಮೇಲೆ ದಾಳಿಗಳು ಆಗಿವೆ. ಸರ್ಕಾರಿ ಪ್ರಾಯೋಜಕತ್ವದಿಂದ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಹಾಗೂ ಮುಸ್ಲಿಮರ ಗುಂಪು ಹತ್ಯೆ ನಡೆದಿವೆ’ ಎಂದು ಆರೋಪಿಸಿದೆ.

ಬೆಂಗಳೂರು ಘಟನೆಯನ್ನು ಪಾಕಿಸ್ತಾನ ನೇರವಾಗಿ ಪ್ರಸ್ತಾಪಿಸದೇ ಹೋದರೂ ರಾಷ್ಟ್ರ ಮಟ್ಟದಲ್ಲಿ ಕೋಗಿಲು ಬಡಾವಣೆಯ ಅನಧಿಕೃತ ಮನೆ ತೆರವು ಕಾರ್ಯಾಚರಣೆ ಭಾರಿ ಚರ್ಚೆಯಾಗುತ್ತಿದೆ. ಹೀಗಾಗಿ ಇದೇ ಘಟನೆಯನ್ನು ಪಾಕಿಸ್ತಾನ ಪ್ರಸ್ತಾಪಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಇದರ ಬೆನ್ನಲ್ಲೇ ಪಾಕಿಸ್ತಾನದ ಆರೋಪಗಳಿಗೆ ಭಾರತದ ವಿದೇಶಾಂಗ ಇಲಾಖೆ ತಿರುಗೇಟು ನೀಡಿದೆ. ಸೋಮವಾರ ಸಂಜೆ ಹೇಳಿಕೆ ನೀಡಿರುವ ಭಾರತದ ವಿದೇಶಾಂಗ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಪಾಕ್‌ ಹೇಳಿಕೆ ಕಪೋಲಕಲ್ಪಿತ. ಅಲ್ಪಸಂಖ್ಯಾತರ ಮೇಲಿನ ದಾಳಿ ವಿಷಯದಲ್ಲಿ ಅತ್ಯಂತ ಕಳಪೆ ದಾಖಲೆಯನ್ನು ಹೊಂದಿರುವ ಆ ದೇಶದ ಹೇಳಿಕೆಗಳನ್ನು ನಾವು ತಿರಸ್ಕರಿಸುತ್ತೇವೆ. ವಿವಿಧ ಧರ್ಮಗಳ ಅಲ್ಪಸಂಖ್ಯಾತರನ್ನು ಪಾಕಿಸ್ತಾನ ಭಯಾನಕವಾಗಿ ಮತ್ತು ವ್ಯವಸ್ಥಿತವಾಗಿ ಬಲಿಪಶುಗಳನ್ನಾಗಿ ಮಾಡುತ್ತಿರುವುದು ಸ್ಥಾಪಿತ ಸತ್ಯವಾಗಿದೆ. ಅದು ಇನ್ನೊಬ್ಬರತ್ತ ಎಷ್ಟೇ ಬೆರಳು ತೋರಿಸಿದರೂ ವಾಸ್ತವವು ಬದಲಾಗುವುದಿಲ್ಲ’ ಎಂದಿದ್ದಾರೆ.

ಪಾಕ್‌ ತಗಾದೆ ಏನು?:

ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ತಹೀರ್ ಅಂದ್ರಾಬಿ ಹೇಳಿಕೆ ನೀಡಿ, ‘ಭಾರತದಲ್ಲಿ ಕ್ರಿಸ್‌ಮಸ್ ವೇಳೆ ಇತ್ತೀಚೆಗೆ ವಿಧ್ವಂಸಕ ಘಟನೆಗಳು ನಡೆದಿವೆ. ಹಾಗೆಯೇ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸರ್ಕಾರಿ ಪ್ರಾಯೋಜಿತ ಅಭಿಯಾನಗಳು ನಡೆಯುತ್ತಿವೆ. ಅವರ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ ಮತ್ತು ಪದೇ ಪದೇ ಗುಂಪು ಹತ್ಯೆಗಳು ನಡೆದಿವೆ. ವಿಶೇಷವಾಗಿ ಮುಹಮ್ಮದ್ ಅಖ್ಲಾಕ್ ಪ್ರಕರಣ ಇದಕ್ಕೆ ಸಾಕ್ಷಿ. ಇದರಲ್ಲಿ ಸರ್ಕಾರವೇ ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡಿದೆ. ಮುಸ್ಲಿಮರಲ್ಲಿ ಭಯ ಮತ್ತು ಪರಕೀಯತೆಯನ್ನು ಹೆಚ್ಚಿಸಿದೆ’ ಎಂದಿದ್ದಾರೆ.

ಭಾರತದಲ್ಲಿ ಕ್ರಿಸ್‌ಮಸ್‌ ವೇಳೆ ಛತ್ತೀಸ್‌ಗಢ, ಉತ್ತರ ಪ್ರದೇಶ, ಕೇರಳ ಹಾಗೂ ಅಸ್ಸಾಂನಲ್ಲಿ ದಾಳಿ ಆಗಿದ್ದವು. ಮೊಹಮ್ಮದ್‌ ಎಂಬ ವ್ಯಕ್ತಿ ಉತ್ತರ ಪ್ರದೇಶದಲ್ಲಿ 2015ರಲ್ಲಿ ಗುಂಪು ಥಳಿತದಿಂದ ಸಾವನ್ನಪ್ಪಿದ್ದ. ಇತ್ತೀಚೆಗೆ ಆತನ ಹತ್ಯೆ ಆರೋಪಿಗಳ ಮೇಲಿನ ಆರೋಪಗಳನ್ನು ಕೈಬಿಡಲಾಗಿತ್ತು. ಇದನ್ನು ಉದ್ದೇಶಿಸಿ ಪಾಕ್ ಈ ಹೇಳಿಕೆ ನೀಡಿದೆ.

--

ಮನೆಗಳಿದ್ದುದ್ದು ಒತ್ತುವರಿ ಜಾಗದಲ್ಲಿ: ಸಿಎಂ, ಡಿಸಿಎಂ

- ನೋಟಿಸ್‌ ನೀಡಿದರೂ ತೆರವು ಮಾಡದಿದ್ದಕ್ಕೆ ಮನೆ ಧ್ವಂಸ

- ಉಪಗ್ರಹ ಚಿತ್ರದಲ್ಲಿ ಅಕ್ರಮ ಪತ್ತೆ । ಇಬ್ಬರ ವಿರುದ್ಧ ಕೇಸು

---ಕೋಗಿಲು ಸಂತ್ರಸ್ತರಿಗೆ ಹೊಸವರ್ಷಕ್ಕೆ ಹೊಸ ಮನೆ: ಸಿಎಂ

- ಇಂದು, ನಾಳೆ ಅರ್ಹರೆ ಸರ್ವೇ । ಜ.1ಕ್ಕೆ ಮನೆ ವಿತರಣೆಕನ್ನಡಪ್ರಭ ವಾರ್ತೆ ಬೆಂಗಳೂರು

ಕೋಗಿಲು ಬಡಾವಣೆಯ ಸರ್ಕಾರಿ ಜಾಗದಲ್ಲಿ ಅಕ್ರಮ ಶೆಡ್ ಕಟ್ಟಿಕೊಂಡು ವಾಸವಿದ್ದ ಅರ್ಹ ಸಂತ್ರಸ್ತರನ್ನು ಎರಡು ದಿನದಲ್ಲಿ ಪರಿಶೀಲಿಸಿ ಗುರುತಿಸಲಾಗುವುದು. ಅಂತಹ ಅರ್ಹರಿಗೆ ಬೈಯಪ್ಪನಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಿರುವ ಬಹುಮಹಡಿ ವಸತಿ ಸಮುಚ್ಚಯದಲ್ಲಿ ಜ.1ರ ಹೊಸ ವರ್ಷದ ದಿನ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸೋಮವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಜತೆ ಅಧಿಕಾರಿಗಳ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

==ಕನ್ನಡಪ್ರಭ ವಾರ್ತೆ ಬೆಂಗಳೂರುಕೋಗಿಲು ಬಡಾವಣೆ ಬಳಿ ಸರ್ಕಾರಿ ಬಂಡೆ ಹಾಗೂ ಕ್ವಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ಶೆಡ್‌ ನಿರ್ಮಾಣ ಮಾಡಲಾಗಿತ್ತು. ಸರ್ಕಾರ ಜಾಗ ಖಾಲಿ ಮಾಡಲು ನೋಟಿಸ್‌ ನೀಡಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ 167 ಶೆಡ್‌ ತೆರವುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮತ್ತೊಂದೆಡೆ ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ನಮ್ಮ ಬಳಿ ಉಪಗ್ರಹ ಫೋಟೋಗಳಿಗೆ. ಅದರಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಅಕ್ರಮವಾಗಿ ಶೆಡ್‌ ನಿರ್ಮಿಸಿರುವುದಕ್ಕೆ ದಾಖಲೆಗಳಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೂಡಾ ಸ್ಪಷ್ಟಪಡಿಸಿದ್ದಾರೆ.ಅಕ್ರಮ ಶೆಡ್‌

ಅಕ್ರಮವಾಗಿ ಶೆಡ್‌ ನಿರ್ಮಾಣ ಮಾಡಿಕೊಂಡು ಖಾಲಿ ಮಾಡದ ಹಿನ್ನೆಲೆಯಲ್ಲಿ ಡಿ.20 ರಂದು 167 ಶೆಡ್‌ ತೆರವುಗೊಳಿಸಲಾಗಿದೆ. ಇದೀಗ ಮಾನವೀಯತೆ ದೃಷ್ಟಿಯಿಂದ ಅರ್ಹರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.ಅದು ಸರ್ಕಾರಿ ಜಾಗ. 15 ಎಕರೆ ಕಲ್ಲು ಕ್ವಾರಿ, ಬಂಡೆ ಜಾಗವನ್ನು ಕಸ ವಿಲೇವಾರಿಗಾಗಿ ಜಿಲ್ಲಾಧಿಕಾರಿಗಳು ಬಿಬಿಎಂಪಿಗೆ (ಜಿಬಿ) ಹಸ್ತಾಂತರ ಮಾಡಿದ್ದರು. ಪಾಲಿಕೆಯಿಂದ ಕಸವನ್ನೂ ಹಾಕುತ್ತಿದ್ದರು. ಪಾಲಿಕೆಯವರೇ ಸ್ವಾಧೀನದಲ್ಲಿದ್ದರು.

ಆದರೆ, 2020-21 ರಿಂದ ಅಕ್ರಮವಾಗಿ ಶೆಡ್‌ ನಿರ್ಮಾಣ ಶುರುವಾಗಿದ್ದು, 167 ಅನಧಿಕೃತ ಮನೆ ನಿರ್ಮಿಸಿದ್ದರು. ಅವುಗಳಿಗೆ ನೋಟಿಸ್‌ ನೀಡಿ ಖಾಲಿ ಮಾಡಿದ್ದೆವು ಎಂದು ಸಿದ್ದರಾಮಯ್ಯ ಹೇಳಿದರು.ಅರ್ಹರಿಗೆ ಪರ್ಯಾಯ ವ್ಯವಸ್ಥೆ:

ಸೂರು ಕಳೆದುಕೊಂಡವರಿಗೆ ಪುನರ್‌ವಸತಿ ಕಲ್ಪಿಸುವ ಕೂಗು ಬಂದಿದ್ದರಿಂದ ವಸತಿ ಸಚಿವರಾದ ಜಮೀರ್ ಅಹಮದ್‌ಖಾನ್‌, ರಾಜಕೀಯ ಕಾರ್ಯದರ್ಶಿ ನಜೀರ್‌ ಅಹ್ಮದ್‌ ಅವರನ್ನು ಜಾಗಕ್ಕೆ ಕಳುಹಿಸಿದ್ದೆ. ಡಿ.ಕೆ.ಶಿವಕುಮಾರ್‌ ಅವರು ಸಹ ಸೋಮವಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಇದೀಗ ಪರಿಶೀಲಿಸಿ ಅರ್ಹರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ:

ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಒತ್ತುವರಿ ಆಗಿದೆ. ತಹಸೀಲ್ದಾರ್‌, ಶಿರಸ್ತೆದಾರ್‌, ಗ್ರಾಮ ಲೆಕ್ಕಿಗರಿಗೆ ಗೊತ್ತಿಲ್ಲದೆ ನಡೆಯಲು ಸಾಧ್ಯವೇ ಇಲ್ಲ. ಹೀಗಾಗಿ ಆ ಅವಧಿಯಲ್ಲಿ ಸೇವೆಯಲ್ಲಿದ್ದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.ಅಕ್ರಮ ಕಟ್ಟಡಕ್ಕೆ ಅಧಿಕಾರಿಗಳೇ ಹೊಣೆ:

ಈ ರೀತಿ ಕಾನೂನು ಬಾಹಿರ ಒತ್ತುವರಿಯನ್ನು ಮುಂದೆಯೂ ತಡೆಯಬೇಕು ಎಂಬುದು ನಮ್ಮ ಉದ್ದೇಶ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಕ್ರಮವಾಗಿ ಮನೆ ಕಟ್ಟಲು ಅವಕಾಶ ನೀಡಬಾರದು. ಶೆಡ್‌, ಮನೆ ಸೇರಿ ಯಾವುದೇ ರೀತಿಯ ಒತ್ತುವರಿ ಆಗಬಾರದು. ಒಂದು ವೇಳೆ ಒಂದೇ ಒಂದು ಮನೆ ಕಟ್ಟಿದರೂ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ಕೃಷ್ಣ ಬೈರೇಗೌಡ ಅವರೇ ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ್‌ ಕಾರ್ಡ್‌ ಮಾಡಿಕೊಟ್ಟಿದ್ದರೆಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ‘ಕೃಷ್ಣಬೈರೇಗೌಡ ವಿದೇಶದಲ್ಲಿದ್ದಾರೆ. ಅವರು ವಾಪಸಾದ ಬಳಿಕ ಅವರನ್ನೇ ಕೇಳಿ’ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಇದು ಪಾಲಿಕೆಗೆ ನೀಡಿದ್ದ ಜಾಗ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಶೆಡ್‌ ಹಾಕಿದದರು. ಕೆಲವರು ಶೆಡ್ ಹಾಕಿಕೊಳ್ಳಲು ಹಣ ಪಡೆದಿದ್ದರು. ಕೆಲವರು ದಾಖಲೆಗಳನ್ನೂ ತಿರುಚಿದ್ದಾರೆ ಎಂದು ತಿಳಿದುಬಂದಿದೆ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾರತೀಯರ ವರ್ಕ್‌ ಪರ್ಮಿಟ್‌ ರದ್ದು ಮಾಡಿ: ಹದಿ ಬೆಂಬಲಿಗರ ಆಗ್ರಹ
* ಪುಟಿನ್‌ ಮನೆ ಮೇಲೆ ಉಕ್ರೇನ್‌ ದಾಳಿ ಯತ್ನ?