ಭಾರತದ ಟ್ಯಾಂಕರ್‌ನಿಂದಲೂ ಪಾಕ್‌ ಮೇಲೆ ದಾಳಿ

KannadaprabhaNewsNetwork |  
Published : May 20, 2025 1:01 AM ISTUpdated : May 20, 2025 5:09 AM IST
ಭಾರತ ಏಟು | Kannada Prabha

ಸಾರಾಂಶ

ಪಾಕಿಸ್ತಾನದ ಉಗ್ರಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯ ಕುರಿತು ಒಂದೊಂದೇ ಅಚ್ಚರಿಯ ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಭಾರತದ ಟ್ಯಾಂಕರ್‌ಗಳು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಿಂತು ದಾಳಿ ಮಾಡಿದ್ದವು ಎಂದು ಭಾರತೀಯ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ನವದೆಹಲಿ: ಪಾಕಿಸ್ತಾನದ ಉಗ್ರಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯ ಕುರಿತು ಒಂದೊಂದೇ ಅಚ್ಚರಿಯ ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಭಾರತದ ಟ್ಯಾಂಕರ್‌ಗಳು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಿಂತು ದಾಳಿ ಮಾಡಿದ್ದವು ಎಂದು ಭಾರತೀಯ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಎನ್‌ಡಿಟಿವಿ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಟಿ-72 ಟ್ಯಾಂಕ್‌ಗಳನ್ನು ಎಲ್‌ಒಸಿಯಲ್ಲಿ ನಿಲ್ಲಿಸಲಾಗಿತ್ತು. ಅವುಗಳ ಕಾರ್ಯ, ಉಗ್ರರು ಭಾರತದೊಳಗೆ ನುಸುಳುವ ಮಾರ್ಗಗಳು ಮತ್ತು ನುಸುಳುಕೋರರಿಗೆ ನೆರವಾಗುವ ಪಾಕ್‌ ಪೋಸ್ಟ್‌ಗಳನ್ನು ಧ್ವಂಸ ಮಾಡುವುದು. 

ಅವುಗಳಿಗೆ 125 ಎಂ.ಎಂ. ಗನ್‌ಗಳು ಮತ್ತು 4000 ಮೀ. ರೇಂಜ್‌ನ ಕ್ಷಿಪಣಿಗಳನ್ನು ಅಳವಡಿಸಲಾಗಿತ್ತು’ ಎಂದು ತಿಳಿಸಿದ್ದಾರೆ. ಅಂತೆಯೇ, ಕದನವಿರಾಮ ಉಲ್ಲಂಘನೆಗೆ ತಿರುಗೇಟು ನೀಡಲು ಕೆಲ ಅಸ್ತ್ರಗಳನ್ನು ಮಾತ್ರ ಬಳಸಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ಮತ್ತಿಬ್ಬರು ಶಂಕಿತ ಐಎಸ್‌ಐ ಏಜೆಂಟರ ಬಂಧನ

ರಾಂಪುರ/ಪಾಣಿಪತ್: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ)ಗಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಏಜೆಂಟರನ್ನು ಉತ್ತರ ಪ್ರದೇಶದ ರಾಂಪುರ ಮತ್ತು ಹರ್ಯಾಣದ ನೂಹ್‌ನಲ್ಲಿ ಬಂಧಿಸಲಾಗಿದೆ.

ಹರ್ಯಾಣದ ಪಾಣಿಪತ್‌ನಲ್ಲಿ ಬಂಧನಕ್ಕೊಳಗಾದ ಆರೋಪಿ ನೌಮನ್ ಇಲಾಹಿ (24) ಉತ್ತರ ಪ್ರದೇಶದ ಕೈರಾನಾ ಜಿಲ್ಲೆಯವನು. ಈತ ಐಎಸ್‌ಐನೊಂದಿಗೆ ಸಂಪರ್ಕದಲ್ಲಿದ್ದ. ಪಾಕಿಸ್ತಾನಕ್ಕೆ ಹಲವು ಬಾರಿ ಭೇಟಿ ನೀಡಿದ್ದ ಈತ, ಪಾಕಿಸ್ತಾನಿ ಅಧಿಕಾರಿಗಳಿಗೆ ಸಿಮ್ ಕಾರ್ಡ್‌ಗಳನ್ನು ಒದಗಿಸುತ್ತಿದ್ದ. ಅವರಿಂದ ಹಣವನ್ನು ಪಡೆದು ಭಾರತದ ಸೂಕ್ಷ್ಮ ಮಾಹಿತಿಗಳನ್ನು ಒದಗಿಸುತ್ತಿದ್ದ ಎಂದು ಬಂಧನದ ಬಳಿಕ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾನೆ.

ಇನ್ನು, ಉತ್ತರ ಪ್ರದೇಶದ ರಾಂಪುರದ ತಾಂಡಾ ಪಟ್ಟಣದಲ್ಲಿ ಬಂಧಿತನಾದ ಆರೋಪಿಯನ್ನು ಶಹಜಾದ್ ಎಂದು ಗುರುತಿಸಲಾಗಿದ್ದು, ಈತ ಐಎಸ್‌ಐ ಪರವಾಗಿ ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಜತೆಗೆ, ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಐಎಸ್‌ಐಗೆ ರವಾನಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದುವರೆಗೆ, ಕಳೆದ 2 ವಾರಗಳಲ್ಲಿ ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಒಟ್ಟು 12 ಮಂದಿಯನ್ನು ಬಂಧಿಸಿದಂತಾಗಿದೆ.

PREV
Read more Articles on