ಭಾರತ ಕೈ ಬಿಟ್ಟಿದ್ದ ಪ್ಲಾಸ್ಟಿಕ್‌ ನೋಟು ಬಳಕೆಗೆ ಪಾಕ್‌ ಸರ್ಕಾರ ತಯಾರಿ! ಹೊಸ ಭದ್ರತಾ ವೈಶಿಷ್ಟ್ಯ

KannadaprabhaNewsNetwork |  
Published : Aug 25, 2024, 01:47 AM ISTUpdated : Aug 25, 2024, 05:06 AM IST
ಪ್ಲಾಸ್ಟಿಕ್‌ ನೋಟ್‌ | Kannada Prabha

ಸಾರಾಂಶ

ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್‌, ದೇಶದಲ್ಲಿ ಪ್ಲಾಸ್ಟಿಕ್‌ ನೋಟುಗಳನ್ನು ಜನರ ಬಳಕೆಗೆ ಬಿಡುಗಡೆ ಮಾಡಲು ಮುಂದಾಗಿದೆ.

ಕರಾಚಿ: ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್‌, ದೇಶದಲ್ಲಿ ಪ್ಲಾಸ್ಟಿಕ್‌ ನೋಟುಗಳನ್ನು ಜನರ ಬಳಕೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಸಂಸದೀಯ ಸಮಿತಿಯೊಂದಕ್ಕೆ ಬ್ಯಾಂಕ್‌ನ ಗವರ್ನರ್‌ ಜಮೀಲ್‌ ಅಹ್ಮದ್‌ ಈ ಕುರಿತು ಮಾಹಿತಿ ನೀಡಿದ್ದಾರೆ. ಜೊತೆಗೆ ಪ್ರಸ್ತುತ ಬಳಕೆಯಲ್ಲಿರುವ ನೋಟುಗಳನ್ನು ಹೊಸ ಭದ್ರತಾ ವೈಶಿಷ್ಟ್ಯಗಳನ್ನು ಹೊಂದುವಂತೆ ಮರುವಿನ್ಯಾಸಗೊಳಿಸಲಾಗುವುದು ಎಂದಿದ್ದಾರೆ.

10,50,100,500, 1000 ಮತ್ತು 5000 ಬೆಲೆಯ ನೋಟುಗಳನ್ನು ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ. ಈ ಬದಲಾವಣೆ ಪ್ರಕ್ರಿಯೆಯನ್ನು ಗೊಂದಲ ರಹಿತವಾಗಿ ಇರಿಸುವ ಸಲುವಾಗಿ, ಹಾಲಿ ಬಳಕೆಯಲ್ಲಿರುವ ಪೇಪರ್‌ ನೋಟುಗಳನ್ನು ಮುಂದಿನ 5 ವರ್ಷಗಳ ಕಾಲ ಚಲಾವಣೆಯಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಅಹ್ಮದ್‌ ತಿಳಿಸಿದ್ದಾರೆ.

1998ರಲ್ಲಿ ಪಾಲಿಮರ್‌ ನೋಟುಗಳನ್ನು ಪರಿಚಯಿಸಿದ ಮೊದಲ ದೇಶ ಆಸ್ಟ್ರೇಲಿಯಾ ಆಗಿದ್ದು, ಪ್ರಸ್ತುತ 40 ದೇಶಗಳು ಪ್ಲಾಸ್ಟಿಕ್‌ ನೋಟುಗಳನ್ನು ಬಳಸುತ್ತಿವೆ.

ದಶಕಗಳ ಹಿಂದೆ ಭಾರತದ 5 ನಗರಗಳಾದ ಮೈಸೂರು, ಕೊಚ್ಚಿ, ಭುವನೇಶ್ವರ, ಶಿಮ್ಲಾ, ಜೈಪುರದಲ್ಲಿ 10 ರು. ಮುಖಬೆಲೆಯ ಪ್ಲಾಸ್ಟಿಕ್‌ ನೋಟುಗಳನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಬಳಿಕ ಸರ್ಕಾರ ಯೋಜನೆ ಕೈಬಿಟ್ಟಿತ್ತು.

ಪ್ಲಾಸ್ಟಿಕ್ ನೋಟು ಬಳಕೆ ಏಕೆ?

ಹೆಚ್ಚು ಕಾಲ ಬಾಳಿಕೆ. ನಕಲು ಮಾಡುವುದು ಕಷ್ಟ. ನಿರ್ವಹಣಾ ವೆಚ್ಚ ಕಡಿಮೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ಬರ್ಬರ ಹತ್ಯೆ
370ನೇ ವಿಧಿ ರದ್ದತಿ ಬಿಜೆಪಿಯ ಹೆಮ್ಮೆ: ಪ್ರಧಾನಿ ಮೋದಿ ಹರ್ಷ