48 ಗಂಟೆಗಳಲ್ಲಿ ಭಾರತ ಮಣಿಸಲು ಹೊರಟಿದ್ದ ಪಾಕ್‌ 8 ಗಂಟೆಗೇ ಚಿತ್‌!

KannadaprabhaNewsNetwork |  
Published : Jun 04, 2025, 12:52 AM IST
ಪಾಕ್ | Kannada Prabha

ಸಾರಾಂಶ

ನಲ್ವತ್ತೆಂಟು ಗಂಟೆಗಳಲ್ಲಿ ಭಾರತದ ಹೆಡೆಮುರಿಕಟ್ಟಬೇಕೆಂದು ಯೋಜಿಸಿ ಭಾರತ ದಾಳಿ ನಡೆಸಿತ್ತು. ಆದರೆ ಭಾರತದ ದಾಳಿಗೆ ಬೆದರಿ ಕೇವಲ 8 ಗಂಟೆಗಳಲ್ಲಿ ಕದನ ವಿರಾಮದ ಪ್ರಸ್ತಾಪ ಮುಂದಿಟ್ಟಿತು ಎಂದು ಸೇನಾಪಡೆಗಳ ಮುಖ್ಯಸ್ಥ ಜ.ಅನಿಲ್‌ ಚೌಹಾಣ್‌ ಹೇಳಿದ್ದಾರೆ.

ಭಾರೀ ಹಾನಿಯ ಭಯದಿಂದ ಮಾತುಕತೆಗೆ ಮುಂದಾದ್ರು

ಸೇನಾಪಡೆಗಳ ಮುಖ್ಯಸ್ಥ ಜ.ಅನಿಲ್‌ ಚೌಹಾಣ್‌ ಬಹಿರಂಗ

==

ಪುಣೆ: ನಲ್ವತ್ತೆಂಟು ಗಂಟೆಗಳಲ್ಲಿ ಭಾರತದ ಹೆಡೆಮುರಿಕಟ್ಟಬೇಕೆಂದು ಯೋಜಿಸಿ ಭಾರತ ದಾಳಿ ನಡೆಸಿತ್ತು. ಆದರೆ ಭಾರತದ ದಾಳಿಗೆ ಬೆದರಿ ಕೇವಲ 8 ಗಂಟೆಗಳಲ್ಲಿ ಕದನ ವಿರಾಮದ ಪ್ರಸ್ತಾಪ ಮುಂದಿಟ್ಟಿತು ಎಂದು ಸೇನಾಪಡೆಗಳ ಮುಖ್ಯಸ್ಥ ಜ.ಅನಿಲ್‌ ಚೌಹಾಣ್‌ ಹೇಳಿದ್ದಾರೆ. ಮಂಗಳವಾರ ಇಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಾಕ್‌ ದಾಳಿಯಿಂದಾದ ನಷ್ಟಗಳ ಕುರಿತು ಪರೋಕ್ಷವಾಗಿ ಪ್ರತಿಕ್ರಿಯಿಸಿದರು.

ಮೇ 10ರ ಮುಂಜಾನೆ 1 ಗಂಟೆಗೆ ಭಾರತವನ್ನು 48 ಗಂಟೆಗಳಲ್ಲಿ ಮೊಣಕಾಲೂರುವಂತೆ ಮಾಡುವ ಉದ್ದೇಶ ಇಟ್ಟುಕೊಂಡು ಪಾಕಿಸ್ತಾನವು ತನ್ನ ದಾಳಿ ಆರಂಭಿಸಿತು. ಆದರೆ, ನಾವು 8 ಗಂಟೆಗೇ ಅವರು ಗಂಟುಮೂಟೆ ಕಟ್ಟುವಂತೆ ಮಾಡಿದೆವು. ಬಳಿಕ ನಿಮ್ಮೊಂದಿಗೆ ಮಾತನಾಡಬೇಕಿದೆ ಎಂದು ಕದನ ವಿರಾಮ ಪ್ರಸ್ತಾಪ ಮುಂದಿಟ್ಟರು. ಅವರು ಮುಂದಿಟ್ಟ ಕದನವಿರಾಮದ ಪ್ರಸ್ತಾಪವನ್ನು ನಾವು ಒಪ್ಪಿದೆವು. ಒಂದು ವೇಳೆ ಯುದ್ಧ ಇದೇ ರೀತಿ ಮುಂದುವರಿದರೆ ಭಾರೀ ಹಾನಿಯಾಗುವ ಆತಂಕದಿಂದ ಅವರು ಇಂಥ ಪ್ರಸ್ತಾಪ ಇಟ್ಟಿದ್ದರು ಎಂದು ಜ.ಚೌಹಾಣ್‌ ಹೇಳಿದರು.

ಯುದ್ಧನಷ್ಟದ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಯುದ್ಧದ ಸಂದರ್ಭದಲ್ಲಿನ ತಾತ್ಕಾಲಿಕ ನಷ್ಟಗಳು ವೃತ್ತಿಪರ ಸೇನೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಂಥ ತಾತ್ಕಾಲಿಕ ಹಿನ್ನಡೆಗಳಿಗಿಂತ ಒಟ್ಟಾರೆ ಫಲಿತಾಂಶವೇ ಸೇನೆಗೆ ಮುಖ್ಯವಾಗುತ್ತದೆ. ನಷ್ಟ ಮತ್ತು ಅಂಕಿ-ಸಂಖ್ಯೆಗಳ ಕುರಿತು ಮಾತನಾಡಲು ನಾನು ಸರಿಯಾದ ವ್ಯಕ್ತಿಯಲ್ಲ ಎಂದರು.

==

ಭಾರತಕ್ಕೆ ಚೀನಾ ಬ್ರಹ್ಮಪುತ್ರ ನೀರು ನಿಲ್ಲಿಸಿದ್ರೆ ಏನಾಗುತ್ತೆ?

ಭಾರತ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ ಪ್ರಶ್ನೆ

ನೀರು ನಿಲ್ಲಿಸಿದ್ರೆ ಪ್ರವಾಹ ನಿಲ್ಲುತ್ತೆ: ಅಸ್ಸಾಂ ಸಿಎಂ

ಗುವಾಹಟಿ: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಸ್ಥಗಿತ ಉಭಯ ದೇಶಗಳ ನಡುವೆ ಕಲಹಕ್ಕೆ ಕಾರಣವಾಗಿರುವ ನಡುವೆಯೇ ಪಾಕ್ ಇದೀಗ ಬ್ರಹ್ಮಪುತ್ರ ನದಿ ವಿಚಾರದಲ್ಲಿ ಭಾರತದ ತಂಟೆಗೆ ಬಂದಿದ್ದು ‘ ಚೀನಾ ಭಾರತಕ್ಕೆ ಬ್ರಹ್ಮಪುತ್ರ ನದಿ ನಿಲ್ಲಿಸಿದರೆ ಏನಾಗಬಹುದು?’ ಎಂದು ಬೆದರಿಕೆಯೊಡ್ಡಿದೆ. ಈ ಗೊಡ್ಡು ಬೆದರಿಕೆಗೆ ತಿರುಗೇಟು ನೀಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ನೀರು ಸಲ್ಲಿಸಿದರೆ ಅಸ್ಸಾಂನಲ್ಲಿ ಪ್ರವಾಹ ಕಾಣಿಸಿಕೊಳ್ಳುವುದು ನಿಲ್ಲುತ್ತದೆ ಎಂದಿದ್ದಾರೆ.ಭಾರತ ಸಿಂಧೂ ನದಿ ಒಪ್ಪಂದ ಸ್ಥಗಿತಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಷ್‌ರ ವಿಶೇಷ ಸಹಾಯಕ ‘ ಭಾರತವು ಪಾಕಿಸ್ತಾನಕ್ಕೆ ಸಿಂಧೂ ನದಿ ನೀರನ್ನು ಸ್ಥಗಿತಗೊಳಿಸಿದೆ. ಇದೇ ರೀತಿ ಚೀನಾ ಬ್ರಹ್ಮಪುತ್ರ ನದಿ ವಿಚಾರದಲ್ಲಿ ಇದೇ ರೀತಿ ಭಾರತಕ್ಕೆ ಮಾಡಬಹುದು’ ಎಂದು ಬೆದರಿಕೆ ಹಾಕಿದ್ದಾರೆ.

ಇದರ ಬೆನ್ನಲ್ಲೇ ಚೀನಾದ ಹಿರಿಯ ನೀತಿ ಸಲಹೆಗಾರ ವಿಕ್ಟರ್‌ ಝಿಕಾಯ್‌ ಗಾವೊ ‘ನಿಮಗೆ ಇತರರು ಏನು ಮಾಡಬಾರದು ಎಂದು ನೀವು ಬಯಸುತ್ತೀರೋ, ಅದನ್ನು ನೀವು ಇತರರಿಗೆ ಮಾಡಬೇಡಿ’ ಎಂದು ಪರೋಕ್ಷವಾಗಿ ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ಸಿಂಧೂ ನೀರು ನಿಲ್ಲಿಸಿದ ಭಾರತವನ್ನು ಎಚ್ಚರಿಸಿದ್ದಾರೆ.

==

ಪಾಕ್‌ ವಿರುದ್ಧ ಭಾರತಕ್ಕೆ ‘ಇನ್ನಿಂಗ್ಸ್‌ ಜಯ’: ಚೌಹಾಣ್‌

ಪುಣೆ: ಭಾರತೀಯ ಪಡೆಗಳು ನಡೆಸಿದ ಆಪರೇಷನ್‌ ಸಿಂದೂರದ ವಿಜಯವನ್ನು ಸಿಡಿಎಸ್‌ ಅನಿಲ್‌ ಚವಾಣ್‌ ಅವರು ಕ್ರಿಕೆಟ್‌ ವಿಜಯದ ರೀತಿ ಹೋಲಿಸಿದ್ದಾರೆ. ಸಿಂದೂರದ ವಿಜಯವು ಪಾಕಿಸ್ತಾನದ ವಿರುದ್ಧ ಇನ್ನಿಂಗ್ಸ್‌ ಗೆಲುವು ಸಾಧಿಸಿದೆ ಎಂದು ಗುಣಗಾನ ಮಾಡಿದ್ದಾರೆ.ಪುಣೆಯಲ್ಲಿ ಮಾತನಾಡಿದ ಅವರು, ‘ಆಪರೇಷನ್‌ ಸಿಂದೂರ ಇನ್ನು ನಿಂತಿಲ್ಲ. ಇದು ಕೇವಲ ಕದನವಿರಾಮವಷ್ಟೇ. ಬಳಿಕ ನಾನೇ ವಿವರವಾದ ಉತ್ತರ ನೀಡುತ್ತೇನೆ. ಇದೇ ವೇಳೆ ಕ್ರಿಕೆಟ್‌ನ ಟೆಸ್ಟ್‌ ಪಂದ್ಯಕ್ಕೆ ಹೋಲಿಸಿದರೆ ಇನ್ನಿಂಗ್ಸ್‌ನಿಂದ ಗೆದ್ದಾಗ, ಅದರಲ್ಲಿ ಎಷ್ಟು ವಿಕೆಟ್‌, ಬಾಲ್ಸ್‌ ಉಳಿಕೆ ಇತ್ಯಾದಿ ಪ್ರಶ್ನೆಗಳು ಬರುವುದಿಲ್ಲ ಎಂದು ಹೇಳಿದರು.

==

ಇಂದು ಮೋದಿ ಮಂತ್ರಿ ಪರಿಷತ್ ಸಭೆ

ಆಪರೇಶನ್‌ ಸಿಂದೂರದ ಬಗ್ಗೆ ಚರ್ಚೆ ಸಂಭವ

ಸಚಿವ ಜೈಶಂಕರ್‌ರಿಂದ ವಿವರಣೆ ಸಾಧ್ಯತೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಮಂತ್ರಿ ಪರಿಷತ್‌ ಸಭೆ ಬುಧವಾರ ಆಯೋಜನೆಗೊಂಡಿದೆ. ಪಾಕಿಸ್ತಾನದ ಮೇಲಿನದ ಭಾರತದ ಆಪರೇಷನ್ ಸಿಂದೂರದ ಬಳಿಕ ಮೊದಲ ಸಭೆ ಇದಾಗಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಂಪುಟ ಸಹದ್ಯೋಗಿಗಳಿಗೆ ಆಪರೇಷನ್ ಸಿಂದೂರ ಕುರಿತು ಸಭೆಯಲ್ಲಿ ವಿವರಣೆ ನೀಡುವ ಸಾಧ್ಯತೆ ಇದೆ. ಇದೇ ವೇಳೆ, ಮೋದಿ-3 ಸರ್ಕಾರಕ್ಕೆ ಜೂ.9ರಂದು 1 ವರ್ಷವಾಗಲಿದ್ದು, ಈ ವೇಳೆ ವರ್ಷಾಚರಣೆ ಬಗ್ಗೆ ಕಾರ್ಯತಂತ್ರ ಹೆಣೆಯುವ ಬಗ್ಗೆಯೂಚರ್ಚೆ ನಡೆಯುವ ಸಂಭವವಿದೆ.

PREV

Recommended Stories

ಇನ್ನೂ 20 ವರ್ಷ ನೀವು ವಿಪಕ್ಷದಲ್ಲಿ: ಕಾಂಗ್ರೆಸ್‌ಗೆ ಶಾ ಟಾಂಗ್
ಭಾರತಕ್ಕೆ ಸೇನೆಯೇ ಬೇಡ ಎಂದು ನೆಹರು ಹೇಳಿದ್ದರು : ಸಂಸದ ತೇಜಸ್ವಿ ಸೂರ್ಯ