ಜೈಲಲ್ಲೇ ಇಮ್ರಾನ್‌ ಸಾವು ಎಂದ ಪತ್ರಕರ್ತ: ಪಾಕ್‌ನಲ್ಲಿ ಸಂಚಲನ

KannadaprabhaNewsNetwork |  
Published : Aug 13, 2026, 04:15 AM IST
Imran Khan

ಸಾರಾಂಶ

ಅಡಿಯಾಲ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಜೈಲಿನಲ್ಲಿಯೇ ಸತ್ತಿರಬಹುದು ಎಂದು ಅಲ್ಲಿನ ಹಿರಿಯ ಪತ್ರಕರ್ತ ವಜಾಹತ್ ಖಾನ್ ಬಾಂಬ್‌ ಸಿಡಿಸಿದ್ದಾರೆ. ಇದು ಪಾಕಿಸ್ತಾನದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಇಸ್ಲಾಮಾಬಾದ್‌: ಅಡಿಯಾಲ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಜೈಲಿನಲ್ಲಿಯೇ ಸತ್ತಿರಬಹುದು ಎಂದು ಅಲ್ಲಿನ ಹಿರಿಯ ಪತ್ರಕರ್ತ ವಜಾಹತ್ ಖಾನ್ ಬಾಂಬ್‌ ಸಿಡಿಸಿದ್ದಾರೆ.

ಇಮ್ರಾನ್‌ ಅಲ್ಲಿಯೇ ಸಾವನ್ನಪ್ಪಿರಬಹುದು

ಇದು ಪಾಕಿಸ್ತಾನದಲ್ಲಿ ಸಂಚಲನಕ್ಕೆ ಕಾರಣವಾಗಿದೆ.ಆ.10ರಂದು ವಜಾಹತ್ ವ್ಲಾಗ್‌ನಲ್ಲಿ ‘ಪಾಕಿಸ್ತಾನದ ಮೂವರು ಹಿರಿಯ ಸೇನಾಧಿಕಾರಿಗಳು ಅಡಿಯಾಲ ಜೈಲಿನಲ್ಲಿರುವ ಇಮ್ರಾನ್‌ ಅಲ್ಲಿಯೇ ಸಾವನ್ನಪ್ಪಿರಬಹುದು ಎಂದಿದ್ದಾರೆ. ಅದೇ ಕಾರಣಕ್ಕೆ ಅವರ ಭೇಟಿಗೆ ಅಧಿಕಾರಿಗಳು ಬೇರೆಯವರಿಗೆ ಅವಕಾಶ ನೀಡುತ್ತಿಲ್ಲ’ ಎಂದಿದ್ದರು. ಈ ಮಧ್ಯೆ ಇಮ್ರಾನ್‌ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಇಮ್ರಾನ್‌ ವಿರುದ್ಧ ಬಾಕಿ ಇರುವ ಪ್ರಕರಣಗಳಲ್ಲಿನ ವಿಳಂಬ ಖಂಡಿಸಿ ಪಿಟಿಐ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ ಹೊರಗೆ ಪ್ರತಿಭಟಿಸಿದ್ದಾರೆ. ಜತೆಗೆ ಸರ್ಕಾರದಿಂದ ತಮಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೇನೆ ಸ್ಪಷ್ಟನೆ:

ಈ ಬೆನ್ನಲ್ಲೇ ಪಾಕಿಸ್ತಾನ ಸೇನೆಯೂ ಸ್ಪಷ್ಟನೆ ನೀಡಿದ್ದು, ‘ಈ ವರದಿ ಸುಳ್ಳು’ ಎಂದಿದೆ. ವಿವಾದಕ್ಕೆ ಕಾರಣವಾಗುತ್ತಿದ್ದಂತೆ ವಜಾಹತ್ ಮಾತು ಬದಲಿಸಿದ್ದು, ‘ಇಮ್ರಾನ್‌ ಸತ್ತಿದ್ದಾರೆ ಎಂದು ನನಗೆ ಯಾವುದೇ ಮೂಲಗಳು ದೃಢಪಡಿಸಿಲ್ಲ’ ಎಂದು ಉಲ್ಟಾ ಹೊಡೆದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಾವಡ ಯಾತ್ರೆ : ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್‌ ಕಸದ ರಾಶಿ!
ರಾಜಕೀಯ ಲಾಭಕ್ಕೆ ಬಳಸಿದಾಗ ಅಯೋಧ್ಯೆ ರಾಜ್ಯದ ವಿಷಯ ಆಗಿರಲಿಲ್ಲವೇ?: ಪ್ರಿಯಾಂಕಾ