ತನ್ನ ಮೇಲೆ ತಾನೇ ಎಫ್‌ಐಆರ್‌ ದಾಖಲಿಸಿದ ಪರೇಶ್‌ ‘ದೋಷಿ’!

KannadaprabhaNewsNetwork |  
Published : Feb 07, 2024, 01:49 AM ISTUpdated : Feb 07, 2024, 08:35 AM IST
FIR

ಸಾರಾಂಶ

ನಾಯಿ ಉಳಿಸಲು ಹೋಗಿ ಪತ್ನಿಯ ಸಾವುಂಟಾದ ಹಿನ್ನೆಲೆಯಲ್ಲಿ ತನ್ನ ಮೇಲೆ ತಾನೆ ಪರೇಶ್‌ ದೋಷಿ ಎಂಬ ವ್ಯಕ್ತಿ ಎಫ್‌ಐಆರ್‌ ಹಾಕಿಕೊಂಡಿದ್ದಾನೆ.

ನರ್ಮದಾ: ವಾಹನ ಚಲಾಯಿಸುವ ವೇಳೆ ಅಡ್ಡಬಂದ ಬೀದಿನಾಯಿಯನ್ನು ರಕ್ಷಿಸಲು ಮುಂದಾದಾಗ ಸಂಭವಿಸಿದ ವಾಹನ ಅಪಘಾತದಲ್ಲಿ ಪತ್ನಿ ಸಾವನ್ನಪ್ಪಿದ್ದಕ್ಕೆ ಬೇಸರಗೊಂಡ ವ್ಯಕ್ತಿಯೊಬ್ಬ ತನ್ನ ಮೇಲೆ ತಾನೇ ಎಫ್‌ಐಆರ್‌ ದಾಖಲಿಸಿಕೊಂಡ ಘಟನೆ ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಡೆದಿದೆ.

ಪರೇಶ್‌ ದೋಷಿ ತನ್ನ ಪತ್ನಿ ಅಮೃತಾರೊಂದಿಗೆ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ನರ್ಮದಾ ಜಿಲ್ಲೆಯ ದಾನ್‌ ಮಹುಡಿ ಗ್ರಾಮದ ಬಳಿ ವಾಹನದ ಎದುರಿಗೆ ಬೀದಿನಾಯಿಯೊಂದು ಅಡ್ಡಬಂದಿದೆ. 

ಆಗ ನಾಯಿಯನ್ನು ಉಳಿಸುವ ಉದ್ದೇಶದಿಂದ ಕಾರನ್ನು ನಿಯಂತ್ರಿಸಿದಾಗ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಆಗ ಅದು ಕಿಟಕಿಯನ್ನು ಸೀಳಿ ಅಮೃತಾ ಅವರಿಗೆ ತಿವಿದ ಪರಿಣಾಮ ಅವರಿಗೆ ತೀವ್ರ ಗಾಯಗಳಾದವು. 

ನಂತರ ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಸಾವನ್ನಪ್ಪಿದ್ದಳು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾನೆ.

PREV

Recommended Stories

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭೂಕುಸಿತ
₹200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ