ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ

KannadaprabhaNewsNetwork |  
Published : Dec 19, 2025, 02:15 AM IST
Nuclear Power Plant

ಸಾರಾಂಶ

ಪರಮಾಣು ಇಂಧನ ಕ್ಷೇತ್ರವನ್ನು ಖಾಸಗಿಯವರಿಗೂ ತೆರೆಯುವ ‘ಶಾಂತಿ’ ಮಸೂದೆಗೆ ಸಂಸತ್ತಿನ ಅನುಮೋದನೆ ಲಭಿಸಿದೆ. ಬುಧವಾರ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಈ ಬಿಲ್‌ಗೆ ಗುರುವಾರ ರಾಜ್ಯಸಭೆಯಲ್ಲೂ ಧ್ವನಿಮತದ ಮೂಲಕ ಹಸಿರುನಿಶಾನೆ ತೋರಲಾಗಿದೆ. ರಾಷ್ಟ್ರಪತಿಯ ಅಂಕಿತದಿಂದಿಗೆ ಅದು ಕಾಯ್ದೆಯಾಗುವುದಷ್ಟೇ ಬಾಕಿ ಇದೆ.

ನವದೆಹಲಿ: ಪರಮಾಣು ಇಂಧನ ಕ್ಷೇತ್ರವನ್ನು ಖಾಸಗಿಯವರಿಗೂ ತೆರೆಯುವ ‘ಶಾಂತಿ’ ಮಸೂದೆಗೆ ಸಂಸತ್ತಿನ ಅನುಮೋದನೆ ಲಭಿಸಿದೆ. ಬುಧವಾರ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಈ ಬಿಲ್‌ಗೆ ಗುರುವಾರ ರಾಜ್ಯಸಭೆಯಲ್ಲೂ ಧ್ವನಿಮತದ ಮೂಲಕ ಹಸಿರುನಿಶಾನೆ ತೋರಲಾಗಿದೆ. ರಾಷ್ಟ್ರಪತಿಯ ಅಂಕಿತದಿಂದಿಗೆ ಅದು ಕಾಯ್ದೆಯಾಗುವುದಷ್ಟೇ ಬಾಕಿ ಇದೆ.

ಏನಿದು ಮಸೂದೆ?:

ಪ್ರಸ್ತುತ ಇಂಧನ, ಶಸ್ತ್ರಾಸ್ತ್ರ ಸೇರಿದಂತೆ ಅಣುಶಕ್ತಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ಸರ್ಕಾರದ ಅಡಿಯಲ್ಲೇ ನಡೆಯುತ್ತಿದೆ. ಇದೀಗ ಅಂಗೀಕಾರವಾಗಿರುವ ಭಾರತವನ್ನು ಪರಿವರ್ತಿಸಲು ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ (ಶಾಂತಿ) ಮಸೂದೆಯು ಕಾಯ್ದೆಯಾದಲ್ಲಿ, ಖಾಸಗಿ ಕಂಪನಿಗಳು ಕೂಡ ಅಣುಸ್ಥಾವರಗಳನ್ನು ಸ್ಥಾಪಿಸಿ ನಿರ್ವಹಿಸುವ ಸ್ವಾತಂತ್ರ ಪಡೆಯಲಿವೆ. ಇದು ದೇಶದ ಪರಮಾಣು ಕ್ಷೇತ್ರದಲ್ಲಿ ಭಾರೀ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ.

ಅಣು ಯೋಜನೆಗಳತ್ತ ಸೆಳೆಯುವ ಉದ್ದೇಶ

ಹೂಡಿಕೆ, ಆಧುನಿಕ ತಂತ್ರಜ್ಞಾನ ಮತ್ತು ಪರಿಣಿತರನ್ನು ದೇಶದ ಅಣು ಯೋಜನೆಗಳತ್ತ ಸೆಳೆಯುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಜತೆಗೆ, ಪರಮಾಣುವಿನಿಂದ ಸಂಭವಿಸುವ ಅವಘಡಗಳ ಸಂತ್ರಸ್ತರಿಗೆ ಸಿಗುವ ಪರಿಹಾರದಲ್ಲೂ ಇದು ಕೆಲ ಸುಧಾರಣೆಗಳನ್ನು ತರಲು ಉದ್ದೇಶಿಸಿದೆ.

2015ರಲ್ಲಿ, ಎನ್‌ಡಿಎ ಸರ್ಕಾರವು ಅಣು ಕ್ಷೇತ್ರವನ್ನು ಮೊದಲ ಬಾರಿ ಸಹಕಾರಕ್ಕೆ ತೆರೆದಿತ್ತು. ಆದರೆ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಮಾತ್ರ ಇದು ಸೀಮಿತವಾಗಿತ್ತು. ಇದೀಗ, ಇದನ್ನು ಖಾಸಗಿಯವರಿಗೂ ವಿಸ್ತರಿಸಲಾಗಿದೆ. ಜತೆಗೆ, ಅಣು ಯೋಜನೆಗಳಲ್ಲಿ ಖಾಸಗಿಯವರು ಶೇ.49ರಷ್ಟು ಹೂಡಿಕೆ ಮಾಡಲೂ ಅನುವು ಮಾಡಿಕೊಡುತ್ತದೆ. ಆದರೆ ಪರಮಾಣು ವಸ್ತುಗಳ ಉತ್ಪಾದನೆ, ಅಣು ರಿಯಾಕ್ಟರ್‌ಗಳಲ್ಲಿ ಬಳಸಲಾಗುವ ಡ್ಯೂಟೇರಿಯಮ್ ಆಕ್ಸೈಡ್ ಉತ್ಪಾದನೆ ಮತ್ತು ವಿಕಿರಣಶೀಲ ತ್ಯಾಜ್ಯ ನಿರ್ವಹಣೆಯಂತಹ ಕಾರ್ಯಗಳು ಪರಮಾಣು ಇಂಧನ ಇಲಾಖೆಯ ನಿಯಂತ್ರಣದಲ್ಲಿ ಉಳಿಯುತ್ತವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!