ಅನಾಥಾಶ್ರಮವೊಂದಲ್ಲಿ ಶಿಕ್ಷೆಯ ನೆಪದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ತಲೆಕೆಳಗಾಗಿ ನೇತು ಹಾಕುವುದು ಹಾಗೂ ಮೆಣಸಿನ ಹೊಗೆ ಹಾಕುವುದು ಸೇರಿದಂತೆ ಅನಾಗರಿಕ ಕೃತ್ಯಗಳ ಮೂಲಕ ಅತ್ಯಂತ ಕ್ರೂರವಾಗಿ ಹಿಂಸಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಇಂದೋರ್: ಅನಾಥಾಶ್ರಮವೊಂದಲ್ಲಿ ಶಿಕ್ಷೆಯ ನೆಪದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ತಲೆಕೆಳಗಾಗಿ ನೇತು ಹಾಕುವುದು ಹಾಗೂ ಮೆಣಸಿನ ಹೊಗೆ ಹಾಕುವುದು ಸೇರಿದಂತೆ ಅನಾಗರಿಕ ಕೃತ್ಯಗಳ ಮೂಲಕ ಅತ್ಯಂತ ಕ್ರೂರವಾಗಿ ಹಿಂಸಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಶಿಕ್ಷೆಯ ನೆಪದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಅನಾಥಾಶ್ರಮದಲ್ಲಿ ಮೆಣಸಿನ ಹೊಗೆ ಹಾಕಿ ಹಿಂಸೆ ಮಾಡಿದ ಘಟನೆ ಮ.ಪ್ರ.ದ ಇಂದೋರಲ್ಲಿ ನಡೆದಿದೆ. ಈ ಘಟನೆಯ ಸಂಬಂಧ ಐವರ ವಿರುದ್ಧ ಕೇಸು ದಾಖಲಾಗಿದೆ.
ನಾಲ್ಕೈದು ವರ್ಷದ ಪುಟ್ಟ ಹೆಣ್ಣುಮಕ್ಕಳಿಗೆ ಹಾಸ್ಟೆಲ್‌ನ ಐವರು ಮಹಿಳೆಯರಿಂದಲೇ ದುಷ್ಟ ಕೃತ್ಯ ಎಸಗಿದ್ದಾರೆ. ಬಡ ಹೆಣ್ಣುಮಕ್ಕಳನ್ನು ಆಶ್ರಮಕ್ಕೆ ಸೇರಿಸಿಕೊಂಡು ಹಿಂಸೆ ನೀಡಲಾಗಿದೆ.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಐವರು ಮಹಿಳೆಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇಂದೋರ್ ನಗರದಲ್ಲಿರುವ ‘ವಾತ್ಸಲ್ಯಪುರಂ’ ಎಂಬ ಚಿಕ್ಕ ಹೆಣ್ಣುಮಕ್ಕಳ ಅನಾಥಾಶ್ರಮವನ್ನು ಜೈನ್ ವೆಲ್‌ಫೇರ್ ಎಂಬ ಎನ್‌ಜಿಒ ಸಂಸ್ಥೆ ನಡೆಸುತ್ತಿದೆ.
ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ಹೆಣ್ಣುಮಕ್ಕಳನ್ನು ವಾರ್ಷಿಕ ಕೇವಲ 5 ರು. ಹಣ ಶುಲ್ಕ ಪಡೆದುಕೊಂಡು ಇಲ್ಲಿ ನೋಡಿಕೊಳ್ಳಲಾಗುತ್ತಿದೆ.
ಆದರೆ ಇಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಮಕ್ಕಳಿಗೆ ನಾನಾ ರೀತಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ಆರೋಪವನ್ನು ಜೈನ್ ಸಂಸ್ಥೆ ತಳ್ಳಿಹಾಕಿದೆ.
ಏನೇನು ಕ್ರೌರ್ಯ?:
ಕೊಳಕು ಬಟ್ಟೆ ಧರಿಸಿದ್ದ ಕಾರಣಕ್ಕೆ ನಾಲ್ಕು ವರ್ಷದ ಬಾಲಕಿಗೆ ಥಳಿಸಿ, ಬಾತ್‌ರೂಮಲ್ಲಿ ಕೂಡಿ ಹಾಕಲಾಗಿತ್ತು.
ಅಲ್ಲದೇ ಆಕೆಗೆ 2 ದಿನಗಳ ಕಾಲ ಊಟ ನೀಡಿಲ್ಲ. ಮೆಣಸಿನ ಹೊಗೆ ಹಾಕುವುದು, ತಲೆಕೆಳಗಾಗಿ ನೇತುಹಾಕುವ ಶಿಕ್ಷೆ ನೀಡಿದ್ದಾರೆ ಎಂದು ಬಾಲಕಿಯರು ಆರೋಪಿಸಿದ್ದಾರೆ.