ಅತ್ಯಾಚಾರದಂತಹ ಘೋರ ಅಪರಾಧ ಎಸಗುವ ಆರೋಪಿಗೆ ಗಲ್ಲು ಶಿಕ್ಷೆ- ಕಾನೂನಿನಲ್ಲಿ ತಿದ್ದುಪಡಿ: ಮೋದಿ

KannadaprabhaNewsNetwork | Updated : Mar 09 2025, 04:37 AM IST

ಸಾರಾಂಶ

‘ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರವು ಮಹಿಳೆಯರ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಮಹಿಳೆಯರ ಮೇಲೆ ಅತ್ಯಾಚಾರದಂತಹ ಘೋರ ಅಪರಾಧಗಳನ್ನುಎಸಗುವ ಆರೋಪಿಗೆ ಗಲ್ಲು ಶಿಕ್ಷೆ ತರುವ ಕಾನೂನುಗಳನ್ನು ತರಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವಸಾರಿ (ಗುಜರಾತ್): ‘ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರವು ಮಹಿಳೆಯರ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಮಹಿಳೆಯರ ಮೇಲೆ ಅತ್ಯಾಚಾರದಂತಹ ಘೋರ ಅಪರಾಧಗಳನ್ನುಎಸಗುವ ಆರೋಪಿಗೆ ಗಲ್ಲು ಶಿಕ್ಷೆ ತರುವ ಕಾನೂನುಗಳನ್ನು ತರಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತಿನ ನವಸಾರಿ ಜಿಲ್ಲೆಯ ವಂಸಿ ಬೋರ್ಸಿ ಗ್ರಾಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಭಾರತವು ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಹಾದಿಯಲ್ಲಿ ನಡೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ನಾವು ಕಾನೂನು ಮತ್ತು ನಿಯಮಗಳನ್ನು ಬದಲಾಯಿಸಿದ್ದೇವೆ’ ಎಂದರು.

‘ಮಹಿಳೆಯರು ಮೇಲಿನ ಅಪರಾಧಗಳನ್ನು ನಿಲ್ಲಿಸಿ. ನಮ್ಮ ಸರ್ಕಾರವು ಅತ್ಯಾಚಾರದಂತಹ ಘೋರ ಅಪರಾಧಗಳಿಗೆ ಮರಣದಂಡನೆಯನ್ನು ಪರಿಚಯಿಸಲು ಕಾನೂನ್ನು ಬದಲಿಸಿದೆ. 

ಸರ್ಕಾರವು ಹೆಣ್ಣು ಮಕ್ಕಳ ಗೌರವ ಮತ್ತು ಸವಲತ್ತುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ’ ಎಂದರು.ಇದೇ ವೇಳೆ ಗ್ರಾಮೀಣ ಭಾಗದ ಮಹಿಳೆಯರು ಅರ್ಥಿಕವಾಗಿ ಸಬಲರಾಗಬೇಕು ಎಂದು ಒತ್ತಿ ಹೇಳಿದ ಪ್ರಧಾನಿ, ‘ ಗಾಂಧೀಜಿಯವರು ದೇಶದ ಆತ್ಮ ಅದರ ಹಳ್ಳಿಗಳಲ್ಲಿದೆ ಎಂದು ಹೇಳುತ್ತಿದ್ದರು. ಮಹಿಳೆಯರು ಗ್ರಾಮೀಣ ಭಾಗದ ಆತ್ಮ. ಗ್ರಾಮೀಣ ಭಾಗದ ಆತ್ಮವು ಮಹಿಳೆಯರ ಸಬಲೀಕರಣದಲ್ಲಿ ನೆಲೆಸಿದೆ. ನಮ್ಮ ಸರ್ಕಾರ ಮಹಿಳೆಯರಿಗಾಗಿ ಕೆಲಸ ಮಾಡುತ್ತಿದೆ. ಸಾವಿರಾರು ಶೌಚಾಲಯಗಳನ್ನು ನಿರ್ಮಿಸಿದ್ದೇನೆ. ಮಹಿಳೆಯರಿಗೆ ಗೌರವ ನೀಡಿದ್ದೇವೆ. ತ್ರಿವಳಿ ತಲಾಖ್ ವಿರುದ್ಧ ಕಠಿಣ ಕಾನೂನುಗಳನ್ನು ತರುವ ಮೂಲಕ ಲಕ್ಷಾಂತರ ಮಹಿಳೆಯರ ಜೀವನ ಹಾಳಾಗದಂತೆ ರಕ್ಷಿಸಿದೆ’ ಎಂದರು.

ಲಖಪತಿ ದೀದಿಗಳ ಜೊತೆ ಸಂವಾದ

ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮದಲ್ಲಿ. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಉತ್ತೇಜಿಸುವ ಲಖಪತಿ ದೀದಿ’ ಯೋಜನೆಗ ಫಲಾನುಭವಿಗಳ ಜೊತೆ ಸಂವಾದ ನಡೆಸಿದರು. ಇದೇ ವೇಳೆ ಮಹಿಳೆಯರು ತಮ್ಮ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪ್ರಧಾನಿಯವರು 25 ಸಾವಿರ ಸ್ವಸಹಾಯ ಸಂಘಗಳ 2.5 ಲಕ್ಷ ಮಹಿಳೆಯರಿಗೆ 450 ಕೋಟಿ ಆರ್ಥಿಕ ನೆರವನ್ನು ವಿತರಿಸಿದರು.

Share this article