ಮೂರೂ ಸೇನಾ ಮುಖ್ಯಸ್ಥರ ಜೊತೆಗೆ ಪ್ರಧಾನಿ ಮೋದಿ ಚರ್ಚೆ

KannadaprabhaNewsNetwork | Updated : May 10 2025, 04:22 AM IST

ಪಾಕ್ ಜೊತೆಗಿನ ಸಂಘರ್ಷ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮೂರು ಸೇನಾ ಮುಖ್ಯಸ್ಥರನ್ನು ಭೇಟಿಯಾದರು. ಇದೇ ವೇಳೆ ಸೇನಾ ಪಡೆಯ ಮಾಜಿ ಮುಖ್ಯಸ್ಥರು ಮತ್ತು ಸೈನಿಕರ ಜೊತೆಗೆ ಸಂವಾದ ನಡೆಸಿದರು.

ನವದೆಹಲಿ: ಪಾಕ್ ಜೊತೆಗಿನ ಸಂಘರ್ಷ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮೂರು ಸೇನಾ ಮುಖ್ಯಸ್ಥರನ್ನು ಭೇಟಿಯಾದರು. ಇದೇ ವೇಳೆ ಸೇನಾ ಪಡೆಯ ಮಾಜಿ ಮುಖ್ಯಸ್ಥರು ಮತ್ತು ಸೈನಿಕರ ಜೊತೆಗೆ ಸಂವಾದ ನಡೆಸಿದರು. 

ಪ್ರಧಾನಿ ನರೇಂದ್ರ ಮೋದಿಯವರು ನೌಕಾ ಸೇನೆ, ವಾಯು ಸೇನೆ ಮತ್ತು ಸಶಸ್ತ್ರ ಸೇನೆಯ ಮುಖ್ಯಸ್ಥರನ್ನು ಭೇಟಿಯಾಗಿ ಪರಿಸ್ಥಿತಿ ಬಗ್ಗೆ ಚರ್ಚಿಸಿದರು ಅವಲೋಕಿಸಿದರು. ಆ ಬಳಿಕ ಪ್ರಧಾನಿ ಸಶಸ್ತ್ರ ಪಡೆ, ವಾಯು ಸೇನೆ ಮತ್ತು ನೌಕಾ ಸೇನೆಯ ಮಾಜಿ ಮುಖ್ಯಸ್ಥರು, ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಯೋಧರ ಜೊತೆಗೆ ಸಂವಾದ ನಡೆಸಿದರು.

ದಿಲ್ಲಿ, ಕಾಶ್ಮೀರದಲ್ಲಿ ಆನ್‌ಲೈನ್‌ ಕ್ಲಾಸ್‌, ಲಡಾಖ್‌ನಲ್ಲಿ ಶಾಲೆಗಳು ಬಂದ್‌

ನವದೆಹಲಿ/ಶ್ರೀನಗರ/ಲೇಹ್‌: ಭಾರತ ಹಾಗೂ ಪಾಕಿಸ್ತಾನ ಸೇನೆಗಳ ನಡುವೆ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲೇ ದೆಹಲಿ, ಲಡಾಖ್‌ ಮತ್ತು ಜಮ್ಮು-ಕಾಶ್ಮೀರದಲ್ಲಿ ಶಾಲೆಗಳನ್ನು ಬಂದ್‌ ಮಾಡಲಾಗಿದೆ.ಉಭಯ ದೇಶಗಳ ಪ್ರಕ್ಷುಬ್ಧತೆಯ ಹಿನ್ನೆಲೆ ಲೇಹ್‌ ಜಿಲ್ಲೆಯ ಎಲ್ಲ ಶಾಲೆಗಳು ಮೇ 9, 10ರಂದು ಬಂದ್‌ ಆಗಲಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದೆಹಲಿಯಲ್ಲಿ ಶಾಲೆಗಳನ್ನು ಬಂದ್‌ ಮಾಡಲಾಗಿದ್ದು ಮಕ್ಕಳಿಗೆ ಆನ್‌ಲೈನ್‌ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಜಮ್ಮು-ಕಾಶ್ಮೀರದಲ್ಲಿಯೂ ಸಹ ಮೇ 7ರಿಂದಲೂ ಶಾಲೆಗಳನ್ನು ಬಂದ್‌ ಮಾಡಲಾಗಿದ್ದು ಮಕ್ಕಳಿಗಾಗಿ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತಿದೆ.

ಮೇ 15ರ ತನಕ ದೇಶದ 24 ವಿಮಾನ ನಿಲ್ದಾಣಗಳು ಬಂದ್‌

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಉಲ್ಬಣ ಹಿನ್ನೆಲೆಯಲ್ಲಿ ದೇಶದ ಹಲವೆಡೆ ವಿಮಾನ ಸಂಚಾರ ಸ್ಥಬ್ಧಗೊಂಡಿದ್ದು, ಅದರ ಭಾಗವಾಗಿ ಶ್ರೀನಗರ, ಚಂಡೀಗಢ ಸೇರಿದಂತೆ ದೇಶದ 24 ವಿಮಾನ ನಿಲ್ದಾಣಗಳಲ್ಲಿ ಮೇ 15ರ ವಿಮಾನ ಸಂಚಾರಗಳನ್ನು ರದ್ದು ಪಡಿಸಲು ವಿಮಾನಯಾನ ಸಂಸ್ಥೆಗಳು ನಿರ್ಧರಿಸಿವೆ.

ಸಂಘರ್ಷ ಹಿನ್ನೆಲೆಯಲ್ಲಿ 24 ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟವನ್ನು ಮೇ 10ರ ತನಕ ಬಂದ್‌ ಮಾಡಲು ವಿಮಾನಯಾನ ಸಂಸ್ಥೆಗಳು ನಿರ್ಧರಿಸಿದ್ದವವು. ಆದರೆ ಇದೀಗ ಅವಧಿ ವಿಸ್ತರಿಸಲಾಗಿದೆ.

ಮೂಲಗಳ ಪ್ರಕಾರ ಚಂಡೀಗಢ , ಶ್ರೀನಗರ, ಅಮೃತಸರ, ಪಟಿಯಾಲ , ಶಿಮ್ಲಾ, ಧರ್ಮಶಾಲಾ, ಜೈಸಲ್ಮೇರ್‌, ಲೇಹ್ , ಜಮ್ಮು, ಪಠಾಣ್‌ಕೋಟ್‌ ಸೇರಿದಂತೆ 24 ವಿಮಾನಗಳನ್ನು ಗುರುವಾರದ ತನಕ ಬಂದ್‌ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಏರಿಂಡಿಯಾ, ಇಂಡಿಗೋ ಸಂಸ್ಥೆಗಳು ಆ ಅವಧಿಯನ್ನು ವಿಸ್ತರಿಸಿರುವುದಾಗಿ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿವೆ.

ಹೆಚ್ಚುವರಿ ರೈಲು ಆರಂಭ:

ಇನ್ನು ಜಮ್ಮು ಕಾಶ್ಮೀರದಲ್ಲಿ ವಿಮಾನ ಸಂಚಾರ ವ್ಯತ್ಯಯ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲುಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಕಾಶ್ಮೀರದ ಉತ್ತರ ರೈಲ್ವೆಯು ಶುಕ್ರವಾರ ಜಮ್ಮು ಮತ್ತು ಉಧಂಪುರ ಮಾರ್ಗದಿಂದ ದೆಹಲಿಗೆ ಹೆಚ್ಚುವರಿಯಾಗಿ ಮೂರು ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ