ಇಸ್ರೋದ 2ನೇ ಸ್ಪೇಸ್‌ಪೋರ್ಟ್‌ಗೆ ಫೆ.29ರಂದು ಮೋದಿ ಶಿಲಾನ್ಯಾಸ

KannadaprabhaNewsNetwork |  
Published : Feb 24, 2024, 02:36 AM ISTUpdated : Feb 24, 2024, 08:24 AM IST
ಮೋದಿ ಶಿಲಾನ್ಯಾಸ | Kannada Prabha

ಸಾರಾಂಶ

2 ವರ್ಷದಲ್ಲಿ ಹೊಸ ಸ್ಪೇಸ್‌ಪೋರ್ಟ್‌ ನಿರ್ಮಾಣವಾಗಲಿದ್ದು, ತಮಿಳುನಾಡಿನ ಕುಲಶೇಖರಪಟ್ಟಿಣಂನಲ್ಲಿ ನಿರ್ಮಾಣ ಮಾಡಲಾಗುವುದು. ಚಿಕ್ಕ ಉಪಗ್ರಹಗಳ ಉಡಾವಣೆಗೆ ಇದರ ಬಳಕೆ ಮಾಡಲಾಗುತ್ತದೆ.

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ 2ನೇ ಸ್ಪೇಸ್‌ಪೋರ್ಟನ್ನು ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದೆ. 

ಫೆ.28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. 

ಸಣ್ಣಗಾತ್ರದ ಉಪಗ್ರಹ ಉಡಾವಣಾ ವಾಹಕಗಳನ್ನು ಉಡಾವಣೆ ಮಾಡುವುದಕ್ಕಾಗಿ ಈ ಹೊಸ ಸ್ಪೇಸ್‌ಪೋರ್ಟನ್ನು ಬಳಕೆ ಮಾಡಲಾಗುತ್ತದೆ. 

ಇದು ಮುಂದಿನ 2 ವರ್ಷದಲ್ಲಿ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂ ಮತ್ತು ಸಥಾನುಕುಲಂ ತಾಲೂಕುಗಳ ಪಡುಕಪಟ್ಟು, ಪಲ್ಲಕುರಿಚಿ ಮತ್ತು ಮಾತವಾನ್‌ ಕುರಿಚಿ ಗ್ರಾಮಗಳಿಗೆ ಸೇರಿದ 2,233 ಎಕರೆ ಪ್ರದೇಶದಲ್ಲಿ ಹೊಸ ಲಾಂಚ್‌ಪ್ಯಾಡ್‌ ನಿರ್ಮಾಣ ಮಾಡಲಾಗುತ್ತಿದೆ. 

ಅಲ್ಲದೇ ಇದಕ್ಕೆ ಪೂರಕವಾಗಿ 2 ಸಾವಿರ ಎಕರೆ ಪ್ರದೇಶದಲ್ಲಿ ತಮಿಳುನಾಡು ಸರ್ಕಾರ ಸ್ಪೇಸ್ ಕೈಗಾರಿಕೆ ಮತ್ತು ಪ್ರೊಪಲ್ಲೆಂಟ್‌ ಪಾರ್ಕ್‌ ನಿರ್ಮಾಣ ಮಾಡುತ್ತಿದೆ. 

ಇಂಧನ ಉಳಿತಾಯ: ತಮಿಳುನಾಡಿನಲ್ಲಿ ಲಾಂಚ್‌ಪ್ಯಾಡ್‌ ನಿರ್ಮಾಣ ಮಾಡುವುದರಿಂದ ರಾಕೆಟ್‌ ಇಂಧನದಲ್ಲಿ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ಇಲ್ಲಿಂದ ರಾಕೆಟ್‌ ನೇರವಾಗಿ ದಕ್ಷಿಣದತ್ತ ಪ್ರಯಾಣಿಸಲಿದೆ. 

ಶ್ರೀಹರಿಕೋಟಾದಿಂದ ಉಡಾವಣೆಯಾದರೆ ಮೊದಲಿಗೆ ಆಗ್ನೇಯದತ್ತ ರಾಕೆಟ್‌ ಪ್ರಯಾಣಿಸಿ, ಬಳಿಕ ದಕ್ಷಿಣದತ್ತ ತಿರುಗಿಸಬೇಕಿತ್ತು. 

ಶ್ರೀಲಂಕಾದ ಮೇಲೆ ರಾಕೆಟ್‌ ಹಾದುಹೋಗುವುದನ್ನು ತಪ್ಪಿಸಲು ಈ ಕ್ರಮ ಅನುಸರಿಸಲಾಗುತ್ತಿತ್ತು ಎಂದು ಇಸ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಈಗಾಗಲೇ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಇಸ್ರೋ ಸ್ಪೇಸ್‌ಪೋರ್ಟ್‌ ಹೊಂದಿದ್ದು, ಇಲ್ಲಿ 2 ಲಾಂಚ್‌ಪ್ಯಾಡ್‌ಗಳಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅನಿಲ ಹೊತ್ತ ನಂದಾದೇವಿ, ತೈಲ ತುಂಬಿದ ಜಗ್‌ ಲಾಡ್ಕಿ ಗುಜರಾತ್‌ಗೆ
ಯುದ್ಧದ ಕಾರಣ ಎಲ್‌ಪಿಜಿ ಪೂರೈಕೆ : ಕೇಂದ್ರ ಸರ್ಕಾರದಿಂದ ದೊಡ್ಡ ವಾರ್ನಿಂಗ್