ತಿರುವನಂತಪುರಂ: ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ತೆರೆಕಂಡ ಬೆನ್ನಲ್ಲೇ ಜನರ ಗಮನವನ್ನು ತನ್ನತ್ತ ಸೆಳೆದಿರುವ ಕೇರಳದ ಚಡಯಮಂಗಳಂನಲ್ಲಿರುವ ‘ಜಟಾಯು ಅರ್ಥ್ ಸೆಂಟರ್’ಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರ ಭೇಟಿ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಸುಳಿವು ನೀಡಿದ್ದಾರೆ.
ರಾಮಾಯಣ ಗಳಿಕೆ 1547 ಕೋಟಿಗೆ:
ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ‘ರಾಮಾಯಣ’ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಶುಕ್ರವಾರವರೆಗೆ 1547 ಕೋಟಿ ರು. ಸಂಪಾದಿಸಿದೆ.++‘ಜಟಾಯುನ ನಿರ್ಮಾತೃ ರಾಜೀವ್ ಆಂಚಲ್ ಜತೆ 2 ದಿನಗಳ ಹಿಂದೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಭೆ ನಡೆಸಿ, ದೆಹಲಿಯಲ್ಲಿ ಆ ಶಿಲ್ಪವನ್ನು ಪ್ರದರ್ಶಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಈ ಪ್ರಸ್ತಾವನೆಯನ್ನು ಮೋದಿಯವರ ಗಮನಕ್ಕೂ ತರಲಾಗಿದೆ’ ಎಂದು ಸುರೇಶ್ ಗೋಪಿ ಹೇಳಿದ್ದಾರೆ. ಇದೇ ವೇಳೆ, ಜಟಾಯುಗೆ ಶೆಖಾವತ್ ಭೇಟಿಯ ಬಳಿಕ ಮೋದಿಯವರೂ ಭೇಟಿ ನೀಡುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.===