2035ರ ವೇಳೆಗೆ ಇಸ್ಲಾಂ ಧರ್ಮವು ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಲಿದೆ ಎಂದು ಪ್ಯೂ ಸಂಶೋಧನಾ ಕೇಂದ್ರವು ಬುಧವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.
ನ್ಯೂಯಾರ್ಕ್: 2035ರ ವೇಳೆಗೆ ಇಸ್ಲಾಂ ಧರ್ಮವು ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಲಿದೆ ಎಂದು ಪ್ಯೂ ಸಂಶೋಧನಾ ಕೇಂದ್ರವು ಬುಧವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.
2020 ಮತ್ತು 2070ರ ನಡುವೆ ವಿಶ್ವದ ಒಟ್ಟು ಜನಸಂಖ್ಯೆಯು ಶೇ.29ರಷ್ಟು ಹೆಚ್ಚಾಗುವ ನಿರೀಕ್ಷೆ
2020 ಮತ್ತು 2070ರ ನಡುವೆ ವಿಶ್ವದ ಒಟ್ಟು ಜನಸಂಖ್ಯೆಯು ಶೇ.29ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಮುಸ್ಲಿಮರು ಮತ್ತು ಕ್ರೈಸ್ತರು ಮಾತ್ರ ಜನಸಂಖ್ಯಾ ಬೆಳವಣಿಗೆಗೆ ತಕ್ಕಂತೆ ವೃದ್ಧಿಯಾಗಲಿದ್ದಾರೆ. ಈ ಅವಧಿಯಲ್ಲಿ ಕ್ರೈಸ್ತರು ಶೇ.30ರಷ್ಟು ಮತ್ತು ಮುಸ್ಲಿಮರು ಶೇ.80ರಷ್ಟು ಬೆಳವಣಿಗೆ ಕಾಣಲಿದ್ದಾರೆ. ಹಿಂದೂಗಳು ಮತ್ತು ಯಹೂದಿಗಳ ಒಟ್ಟು ಸಂಖ್ಯೆ ಹೆಚ್ಚಾಗುತ್ತಿದ್ದರೂ, ಜಾಗತಿಕ ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಅವರ ಪಾಲು ಕಡಿಮೆಯಾಗಲಿದೆ ಎಂದು ಪ್ಯೂ ವಿಶ್ಲೇಷಿಸಿದೆ.
ಫಲವತ್ತತೆ ದರವೇ ಈ ಬೆಳವಣಿಗೆಗೆ ಮುಖ್ಯ ಕಾರಣ
ಮತಾಂತರಕ್ಕಿಂತ ಹೆಚ್ಚಾಗಿ ಫಲವತ್ತತೆ ದರವೇ ಈ ಬೆಳವಣಿಗೆಗೆ ಮುಖ್ಯ ಕಾರಣ. 2020-2025ರ ಅವಧಿಯಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆ ದರ 3.1ರಷ್ಟಿದ್ದರೆ, ಕ್ರೈಸ್ತ ಮಹಿಳೆಯರ ದರ 2.5ರಷ್ಟಿತ್ತು. ಉಳಿದ ಎಲ್ಲಾ ಧರ್ಮಗಳ ಮಹಿಳೆಯರ ಸರಾಸರಿ ಫಲವತ್ತತೆ ದರ 1.6ರಷ್ಟಿದ್ದು, ಇದು ಜನಸಂಖ್ಯೆಯ ಸಮತೋಲನ ಕಾಯ್ದುಕೊಳ್ಳಲು ಅಗತ್ಯವಿರುವ 2.1 ಕ್ಕಿಂತ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
