ಭಾರತವನ್ನು ಡ್ರಗ್ಸ್ ಮುಕ್ತ ಮಾಡುವಲ್ಲಿ ಕುಟುಂಬ ವ್ಯವಸ್ಥೆಯ ಪಾತ್ರ ಪ್ರಮುಖವಾಗಿದ್ದು, ಕುಟುಂಬದಲ್ಲಿ ಪರಸ್ಪರರು ಸುದುಃಖಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಂಡಾಗ ಯುವಜನತೆ ಡ್ರಗ್ಸ್‌ನತ್ತ ಆಕರ್ಷಿತರಾಗುವುದನ್ನು ತಡೆಯಬಹುದು ಎಂದು ತಿಳಿಸಿದ್ದಾರೆ.
ನವದೆಹಲಿ: ಭಾರತವನ್ನು ಡ್ರಗ್ಸ್ ಮುಕ್ತ ರಾಷ್ಟ್ರವಾಗಿಸಲು ಕುಟುಂಬದ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ದೆಹಲಿಯಲ್ಲಿ ಗಾಯಿತ್ರಿ ಪರಿವಾರದಿಂದ ಆಯೋಜಿಸಲಾಗಿರುವ ಅಶ್ವಮೇಧ ಯಜ್ಞದ ಹಿನ್ನೆಲೆಯಲ್ಲಿ ಸಂದೇಶ ನೀಡಿರುವ ಪ್ರಧಾನಿ ಮೋದಿ, ‘ಭಾರತವನ್ನು ಡ್ರಗ್ಸ್ ಮುಕ್ತವಾಗಿಸಲು ನಾವೆಲ್ಲರೂ ಪಣತೊಡಬೇಕಿದೆ.
ಇದನ್ನು ತೊಲಗಿಸುವಲ್ಲಿ ಕುಟುಂಬ ವ್ಯವಸ್ಥೆಯ ಪಾತ್ರ ಅತ್ಯಂತ ಮಹತ್ವದ್ದು. ಕುಟುಂಬಸ್ಥರು ಒಂದೆಡೆ ಕೂಡಿ ಪರಸ್ಪರ ಸುಖ-ದುಃಖಗಳನ್ನು ಮುಕ್ತ ಮನಸ್ಸಿನಿಂದ ಸದಾ ಕಾಲ ಹಂಚಿಕೊಳ್ಳುವಂತಾದರೆ ಯುವಜನರು ಡ್ರಗ್ಸ್‌ನಂತಹ ದುಶ್ಚಟಗಳಿಂದ ಹೊರಬಂದು ಹಲವು ವಿಕಸನ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ’ ಎಂದು ತಿಳಿಸಿದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.