ಕೇರಳದಲ್ಲಿ ಈ ಬಾರಿ ಕಮಲ ಅರಳಲಿದೆ: ಮೋದಿ

KannadaprabhaNewsNetwork | Updated : Mar 16 2024, 07:30 AM IST

ಸಾರಾಂಶ

ಬಿಜೆಪಿ ಗೆದ್ದರೆ ಚರ್ಚ್‌, ಪಾದ್ರಿಗಳ ಮೇಲಿನ ದಾಳಿ ತಡೆಗೆ ನೆರವು ನೀಡುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಪಟ್ಟಣಂತಿಟ್ಟ: ಲೋಕಸಭೆ ಚುನಾವಣೆಯಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿಯೊಂದಿಗೆ ನಾಲ್ಕು ದಿನಗಳ ಪ್ರವಾಸ ಆರಂಭಿಸಿರುವ ಪ್ರಧಾನಿ ಮೋದಿ, ಕೇರಳದಲ್ಲಿ ಎರಡಂಕಿ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ದಿನ ಬಹಳ ದೂರವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಶುಕ್ರವಾರ ಇಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾರ್ದ ಪ್ರಧಾನಿ ಮೋದಿ, ‘ಕಳೆದ ಬಾರಿ ನಿಮ್ಮೆಲ್ಲರ ಪರಿಶ್ರಮದಿಂದ ಪಕ್ಷಕ್ಕೆ ಎರಡಂಕಿಯ ಶೇಕಡಾವಾರು ಮತಗಳು ಬಿದ್ದಿವೆ. 

ಇದೇ ರೀತಿ ಪರಿಶ್ರಮ ಪಟ್ಟಲ್ಲಿ ರಾಜ್ಯದಲ್ಲಿ ನಾವು ಎರಡಂಕಿ ಸ್ಥಾನಗಳನ್ನು ಗೆಲ್ಲುವ ಕಾಲ ದೂರವಿಲ್ಲ. ಸದ್ಯದಲ್ಲೇ ಕೇರಳದಲ್ಲಿ ಕಮಲ ಅರಳಲಿದೆ’ ಎಂದು ಹುರಿದುಂಬಿಸಿದರು.

ಪಾದ್ರಿಯ ಮೇಲಿನ ದಾಳಿಗೆ ಖಂಡನೆ: ಈ ವೇಳೆ ಮಾತನಾಡುತ್ತಾ, ‘ಕೇರಳದಲ್ಲಿ ಚರ್ಚ್‌ರ್ಗಳು ಮತ್ತು ಪಾದ್ರಿಗಳೂ ಹಿಂಸಾಚಾರದಿಂದ ಮುಕ್ತವಾಗಿಲ್ಲ ಎಂಬುದು ಇತ್ತೀಚೆಗೆ ನಡೆದ ಅಪಘಾತದಿಂದ ತಿಳಿಯುತ್ತದೆ. 

ಈ ಹಿನ್ನೆಲೆಯಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರೆ ಇಲ್ಲಿನ ಎಡಪಕ್ಷಗಳ ಅಟ್ಟಹಾಸ ಕಿತ್ತೊಗೆಯುವ ಮೂಲಕ ಕೇರಳಿಗರು ಎಲ್ಲಿದ್ದರೂ ಮತ್ತು ಯಾವ ಪರಿಸ್ಥಿತಿಯಲ್ಲಿದ್ದರೂ ಅವರನ್ನು ಕಾಪಾಡುವುದಾಗಿ ಮೋದಿ ಗ್ಯಾರಂಟಿ ನೀಡುತ್ತಾರೆ’ ಎಮದು ತಿಳಿಸಿದರು.

Share this article