ನಾಳೆಯಿಂದ ಮೋದಿ 2 ದಿನ ಕಾಶ್ಮೀರಕ್ಕೆ: ಯೋಗ ದಿನದಲ್ಲಿ ಭಾಗಿ

KannadaprabhaNewsNetwork |  
Published : Jun 19, 2024, 01:06 AM IST
ಮೋದಿ | Kannada Prabha

ಸಾರಾಂಶ

3ನೇ ಬಾರಿ ಪ್ರಧಾನಿ ಆದ ನಂತರ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೂ.20 ಹಾಗೂ 21ರಂದು ಕಾಶ್ಮೀರ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ನಡುವೆ ಜೂ.21ರಂದು ಮೋದಿ ಶ್ರೀನಗರದ ಶೇರ್‌-ಎ-ಕಾಶ್ಮೀರ್ ಅಂತರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ.

20ರಂದು ಸಂಜೆ 6 ಗಂಟೆಗೆ ಶ್ರೀನಗರದಲ್ಲಿ ಅವರು ಯುವಕರಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಬಳಿಕ 21ರಂದು ಯೋಗ ದಿನದಲ್ಲಿ ಪಾಲ್ಗೊಳ್ಳಲಿದ್ದಾರೆ. ''''ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ವಿಷಯದ ಅಡಿಯಲ್ಲಿ ಈ ವರ್ಷದ ಯೋಗ ದಿನವನ್ನು ಆಚರಿಸಲಾಗತ್ತಿದೆ.

3ನೇ ಬಾರಿ ಪ್ರಧಾನಿ ಆದ ನಂತರ ಮೋದಿ ಅವರ ಮೊದಲ ಕಾಶ್ಮೀರ ಪ್ರವಾಸ ಇದಾಗಿದೆ. ಉಗ್ರವಾದದಿಂದ ಬಳಲಿರುವ ಈ ರಾಜ್ಯಕ್ಕೆ ಮೋದಿ ಅವರ ಭೇಟಿ ಸಾಕಷ್ಟು ರಾಜಕೀಯ ಹಾಗೂ ರಾಜತಾಂತ್ರಿಕ ಸಂದೇಶ ರವಾನಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ
ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ