ಮಮತಾ ಸೋದರಳಿಯ ಅಭಿಷೇಕ್‌ ಮನೆ ಮೇಲೆ ರಾತ್ರಿ 2 ಗಂಟೆಗೆ ದಾಳಿ

KannadaprabhaNewsNetwork |  
Published : Jun 14, 2026, 02:00 AM IST
Abhishek

ಸಾರಾಂಶ

ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಅವರ ಕಾಳಿಘಾಟ್‌ನ ಮನೆಯ ಮೇಲೆ ಶುಕ್ರವಾರ ರಾತ್ರಿ 2 ಗಂಟೆ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಅಭಿಷೇಕ್‌ರ ಆಪ್ತ ಕಾರ್ಯದರ್ಶಿ ಸುಮಿತ್ ರಾಯ್‌ ವಿರುದ್ಧದ ಸುಲಿಗೆ ಪ್ರಕರಣ ಸಂಬಂಧ ಈ ದಾಳಿ ನಡೆಸಲಾಗಿದೆ.

 ಕೋಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಅವರ ಕಾಳಿಘಾಟ್‌ನ ಮನೆಯ ಮೇಲೆ ಶುಕ್ರವಾರ ರಾತ್ರಿ 2 ಗಂಟೆ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ.  

ಬಾಗಿಲು ಮುರಿದು ಒಳನುಗ್ಗಿದರು

ಅಭಿಷೇಕ್‌ರ ಆಪ್ತ ಕಾರ್ಯದರ್ಶಿ ಸುಮಿತ್ ರಾಯ್‌ ವಿರುದ್ಧದ ಸುಲಿಗೆ ಪ್ರಕರಣ ಸಂಬಂಧ ಈ ದಾಳಿ ನಡೆಸಲಾಗಿದೆ. ದಾಳಿ ಸುದ್ದಿ ತಿಳಿಯುತ್ತಲೇ ಮಮತಾ, ಸೋದರಳಿಯನ ನಿವಾಸಕ್ಕೆ ದೌಡಾಯಿಸಿದ್ದು, ಕೆಲಕಾಲ ಹೈಡ್ರಾಮಾ ಸೃಷ್ಟಿಯಾಗಿತ್ತು. ರಾತ್ರೋರಾತ್ರಿ ಬಂದ ಪೊಲೀಸರನ್ನು 4 ತಾಸು ಕಾಯಿಸಲಾಗಿದ್ದರಿಂದ ಕೊನೆಗೆ ಅವರು ಬಾಗಿಲು ಮುರಿದು ಒಳನುಗ್ಗಿದರು ಎನ್ನಲಾಗಿದೆ. 

ಆ ವೇಳೆ ಬ್ಯಾನರ್ಜಿ ಅವರ ಭದ್ರತಾ ಪಡೆ ಸಿಬ್ಬಂದಿ ತಡೆದರಾದರೂ, ಶೋಧ ಮುಂದುವರಿಯಿತು. ರಾಯ್‌ ಸಿಗದ ಕಾರಣ ಪೊಲೀಸರು ಬೆಳಗ್ಗೆ 7.30ಕ್ಕೆ ಹೊರಟ ಬಳಿಕ ಮಮತಾ ಕೂಡ ಅಲ್ಲಿಂದ ತೆರಳಿದರು.

ರಾಜಕೀಯ ದ್ವೇಷದ ನಡೆ - ಟಿಎಂಸಿ

 ಇದನ್ನು ಟಿಎಂಸಿ ರಾಜಕೀಯ ದ್ವೇಷದ ನಡೆ ಎಂದು ಕರೆದಿದೆ. ಈ ಬಗ್ಗೆ ಅಭಿಷೇಕ್‌ರನ್ನು ಪ್ರಶ್ನಿಸಿದಾಗ, ‘ತನಿಖಾ ಸಂಸ್ಥೆಗಳನ್ನೇ ಕೇಳಿ. ನಾನು ಅವರ ವಕ್ತಾರನಲ್ಲ’ ಎಂಬ ಖಾರವಾದ ಪ್ರತಿಕ್ರಿಯೆ ಬಂದಿದೆ. ಇವರು, ಸಂಸದರ ನಕಲಿ ಸಹಿ ಮಾಡಿದ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ನಡುರಾತ್ರಿ ವಿಡಿಯೋ ಮಾಡಿದ್ದು, ಭಾಗವತ್‌ ಚರ್ಚೆಗೆ ಬಂದಿದ್ದ ನಮ್ಮಿಂದ: ದೀಪ್ಕೆ
ಬೆಂಗಳೂರಿನಲ್ಲಿ ಆ.9 ‘ತುಳುನಾಡ ಆಟಿ’ ಸಂಭ್ರಮ