ವಿದೇಶಿಗರಿಗೆ ಆ್ಯಂಥ್ರೋಪಿಕ್‌ನ 2 ಟೂಲ್‌ ಕೊಡ್ಬೇಡಿ : ಟ್ರಂಪ್‌ ಆದೇಶ

KannadaprabhaNewsNetwork |  
Published : Jun 14, 2026, 02:00 AM IST
Anthropic

ಸಾರಾಂಶ

ಅತ್ಯಾಧುನಿಕ ಕ್ಲಾಡ್‌ ಎಐ ಮೂಲಕ ಸುದ್ದಿಯಾಗಿದ್ದ ಅಮೆರಿಕದ ಖ್ಯಾತ ಎಐ ಕಂಪನಿಯಾಗಿರುವ ಆ್ಯಂಥ್ರೋಪಿಕ್‌ನ 2 ಸೇವೆಗಳನ್ನು ಭಾರತೀಯರು ಸೇರಿದಂತೆ ವಿದೇಶಿಗರಿಗೆ ನೀಡದಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಆದೇಶಿಸಿದೆ.  

 ವಾಷಿಂಗ್ಟನ್‌: ಅತ್ಯಾಧುನಿಕ ಕ್ಲಾಡ್‌ ಎಐ ಮೂಲಕ ಸುದ್ದಿಯಾಗಿದ್ದ ಅಮೆರಿಕದ ಖ್ಯಾತ ಎಐ ಕಂಪನಿಯಾಗಿರುವ ಆ್ಯಂಥ್ರೋಪಿಕ್‌ನ 2 ಸೇವೆಗಳನ್ನು ಭಾರತೀಯರು ಸೇರಿದಂತೆ ವಿದೇಶಿಗರಿಗೆ ನೀಡದಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಆದೇಶಿಸಿದೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಫಾಬಲ್‌ 5 ಮತ್ತು ಮಿಥೋಸ್‌ 5 ಸೇವೆಗಳನ್ನು ಅಮೆರಿಕನ್ನರನ್ನು ಹೊರತುಪಡಿಸಿ ಬೇರಾರಿಗೂ ಕೊಡುವುದಿಲ್ಲ ಎಂದು ಕಂಪನಿ ಹೇಳಿದೆ.

ಯಾಕೆ ಈ ಕ್ರಮ?:

ಇತ್ತೀಚೆಗಷ್ಟೇ ಕಂಪನಿಯೊಂದು, ಮೀಥೋಸ್‌ನ ಜೈಲ್‌ಬ್ರೇಕ್‌ (ಯಾವ ಕೆಲಸವನ್ನು ಮಾಡಬಾರದೆಂದು ತರಬೇತಿ ನೀಡಲಾಗಿರುತ್ತದೆಯೋ ಅದನ್ನು ಮಾಡಿಸುವುದು) ಮಾಡಬಲ್ಲೆವು ಎಂದು ಹೇಳಿಕೊಂಡಿತ್ತು. ಹೀಗಿರುವಾಗ ಒಂದೊಮ್ಮೆ ಈ ತಂತ್ರಜ್ಞಾನ ಬೇರೆ ದೇಶಗಳ ಕೈಗೆ ಸಿಕ್ಕಿ ಅಮೆರಿಕದ ವಿರುದ್ಧವೇ ಬಳಕೆಯಾದೀತು ಎಂಬುದು ಸರ್ಕಾರದ ಆತಂಕ. ಹೀಗಾಗಿಯೇ ವಿದೇಶಗಳಿಗಷ್ಟೇ ಅಲ್ಲ, ಅಮೆರಿಕದಲ್ಲಿರುವ ವಿದೇಶಿಯರಿಗೂ ಆ್ಯಂಥ್ರೋಪಿಕ್‌ನ 2 ಟೂಲ್‌ಗಳು ಸಿಗದಂತೆ ನಿರ್ಬಂಧಿಸಲಾಗಿದೆ.

ವಿದೇಶಿಗರ ಬಳಕೆಗೆ ಬ್ರೇಕ್‌ ಹಾಕಲಾಗಿದೆ.

ಈ ಮೊದಲು ಸರ್ಕಾರವು ಮೀಥೋಸ್‌ಅನ್ನು ಬಿಡುಗಡೆಯೇ ಮಾಡದಂತೆ ಆ್ಯಂಥ್ರೋಪಿಕ್‌ ಬಳಿ ಮನವಿ ಮಾಡಿತ್ತಾದರೂ ಕಂಪನಿ ಅದನ್ನು ಒಪ್ಪಿರಲಿಲ್ಲ. ಹಾಗಾಗಿ ಈಗ ವಿದೇಶಿಗರ ಬಳಕೆಗೆ ಬ್ರೇಕ್‌ ಹಾಕಲಾಗಿದೆ. ದೇಶಕ್ಕೆ ಎದುರಾಗಬಹುದಾದ ತೊಂದರೆಯನ್ನು ತಡೆಯಲು ಅಮೆರಿಕದ ಭದ್ರತಾ ಸಂಸ್ಥೆಗಳು ಶಕ್ತವಾಗುವ ವರೆಗೆ ಈ ನಿರ್ಬಂಧವು ಮುಂದುವರಿಯಲಿದೆ.

ವರ್ಷಾರಂಭದಲ್ಲಿ ವೆನಿಜುವೆಲಾದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ, ಮಾಹಿತಿ ಸಂಗ್ರಹ ಮತ್ತು ವಿಶ್ಲೇಷಣೆಗೆ ಆ್ಯಂಥ್ರೋಪಿಕ್‌ನ ಕ್ಲಾಡ್‌ ಎಐಅನ್ನು ಬಳಸಲಾಗಿತ್ತು. ತಮ್ಮ ಮೇಲೆ ಇದೇ ಅಸ್ತ್ರ ಪ್ರಯೋಗವಾಗಬಹುದು ಎಂಬ ಆತಂಕವೂ ಅಮೆರಿಕಕ್ಕಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ನಡುರಾತ್ರಿ ವಿಡಿಯೋ ಮಾಡಿದ್ದು, ಭಾಗವತ್‌ ಚರ್ಚೆಗೆ ಬಂದಿದ್ದ ನಮ್ಮಿಂದ: ದೀಪ್ಕೆ
ಬೆಂಗಳೂರಿನಲ್ಲಿ ಆ.9 ‘ತುಳುನಾಡ ಆಟಿ’ ಸಂಭ್ರಮ