ಅತ್ಯಾಚಾರದಂತಹ ಪ್ರಕರಣಗಳಲ್ಲಿ ವಿಳಂಬ ತೀರ್ಪು ಸಲ್ಲದು : ರಾಷ್ಟ್ರಪತಿ ದ್ರೌಪದಿ ಮುರ್ಮು

KannadaprabhaNewsNetwork |  
Published : Sep 02, 2024, 02:09 AM ISTUpdated : Sep 02, 2024, 05:19 AM IST
ದ್ರೌಪದಿ ಮುರ್ಮು | Kannada Prabha

ಸಾರಾಂಶ

ನ್ಯಾಯಾಲಯದ ತೀರ್ಪು ತಡವಾದಾಗ ಜನರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ನ್ಯಾಯಾಲಯಗಳು ಪ್ರಕರಣಗಳ ವಿಚಾರಣೆಯನ್ನು ಅನಗತ್ಯವಾಗಿ ಮುಂದೂಡುವುದನ್ನು ಬದಲಾಯಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನವದೆಹಲಿ: ಅತ್ಯಾಚಾರದಂತಹ ಪ್ರಕರಣಗಳಲ್ಲಿ ಒಂದು ತಲೆಮಾರಿನ ಬಳಿಕ ನ್ಯಾಯಾಲಯದ ತೀರ್ಪು ಬಂದಾಗ ಜನರಿಗೆ ನ್ಯಾಯಾಂಗ ವ್ಯವಸ್ಥೆಯು ಸೂಕ್ಷ್ಮತೆಯನ್ನು ಕಳೆದುಕಂಡಿದೆ ಎಂದು ಅನಿಸುತ್ತದೆ. ಇದು ನ್ಯಾಯಾಂಗಕ್ಕೆ ದೊಡ್ಡ ಸವಾಲಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ದೆಹಲಿಯಲ್ಲಿ ನ್ಯಾಯಾಂಗದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಭಾರತದ ಹಳ್ಳಿಗಳಲ್ಲಿ ನ್ಯಾಯಾಲಯಗಳನ್ನು ದೇಗುಲವೆಂದು ನೋಡುತ್ತಾರೆ. ದೇಗುಲದಲ್ಲಿ ನ್ಯಾಯ ತಡವಾಗಬಹುದು, ಆದರೆ ಅನ್ಯಾಯ ಆಗುವುದಿಲ್ಲ ಎಂದು ನಂಬುತ್ತಾರೆ. ಆದರೆ ಎಷ್ಟು ಕಾಲ ಆ ವಿಳಂಬ? ಇನ್ನೆಷ್ಟು ಸಮಯ ಜನ ಕಾಯಬೇಕು ಎಂದರು. ಅದೆಷ್ಟೋ ಪ್ರಕರಣಗಳಲ್ಲಿ ನ್ಯಾಯ ಸಿಗುವಾಗ ಸಂತ್ರಸ್ಥರ ಮುಖದಲ್ಲಿ ಸಂತಸವೇ ಹೋಗಿರುತ್ತದೆ. ಮತ್ತೊಂದಷ್ಟು ಪ್ರಕರಣಗಳಲ್ಲಿ ತೀರ್ಪು ಬರುವಾಗ ನೊಂದವರೇ ಇರುವುದಿಲ್ಲ. ಇದನ್ನು ನಾವೆಲ್ಲರೂ ತುಂಬಾ ಆಳವಾಗಿ ಆಲೋಚಿಸಬೇಕು ಎಂದರು.

ವಿಚಾರಣೆ ಮುಂದೂಡುವ ಪ್ರವೃತ್ತಿ ಬದಲಾಗಬೇಕು:

ನ್ಯಾಯಾಲಯಗಳು ಪ್ರಕರಣಗಳ ವಿಚಾರಣೆಯನ್ನು ವಿನಾಕಾರಣ ಮುಂದೂಡುವ ಪ್ರವೃತ್ತಿಯನ್ನು ಬದಲಾಯಿಸಿಕೊಳ್ಳಬೇಕು. ಆಗ ಮಾತ್ರ ನ್ಯಾಯ ವೇಗ ಪಡೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಸಮಾಜ ಹೇಗಿದೆ ಎಂದರೆ, ತಪ್ಪು ಮಾಡಿದವ ರಾಜಾರೋಷದಿಂದ ತಿರುಗಾಡುತ್ತಿರುತ್ತಾನೆ. ಅದೇ ತೊಂದರೆಗೆ ಒಳಗಾದವ ಭಯದಿಂದ ಬದುಕುತ್ತಿರುತ್ತಾನೆ. ಅದರಲ್ಲಿಯೂ ಮಹಿಳೆಯಾದರೆ ಇನ್ನು ಕಷ್ಟ. ಸಮಾಜ ಸಹ ಆಕೆಯನ್ನು ಒಪ್ಪುವುದಿಲ್ಲ ಎಂದು ರಾಷ್ಟ್ರಪತಿ ವಿಷಾದ ವ್ಯಕ್ತಪಡಿಸಿದರು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ