ಇಂದೋರ್: ಚುನಾವಣೆ ಪ್ರಚಾರದ ವೇಳೆ ರಾಜಕಾರಣಿಗಳು ತಮ್ಮ ನಾಯಕರಿಗೆ ತರಹೇವಾರಿ ಉಡುಗೊಡೆಗಳನ್ನು ನೀಡುತ್ತಾರೆ. ಜೊತೆಗೆ ಬಣ್ಣ ಬಣ್ಣದ ಹೂಗಚ್ಛ ನೀಡಿ, ಮಾರುಗಟ್ಟಲೆ ವಿಧವಿಧದ ಹಾರಗಳನ್ನು ಹಾಕಿ ಸ್ವಾಗತಿಸುವುದನ್ನು ನೋಡಿದ್ದೇವೆ. ಆದರೆ ಮಧ್ಯಪ್ರದೇಶದಲ್ಲಿ ಚುನಾವಣೆ ಪ್ರಚಾರಕ್ಕೆಂದು ತೆರಳಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಮುಖಂಡರೊಬ್ಬರು ಖಾಲಿ ಹೂಗುಚ್ಛ ನೀಡಿದ್ದಾರೆ. ಅಂದರೆ ಗುಚ್ಛದಲ್ಲಿ ಕೇವಲ ಎಲೆಗಳಿದ್ದವೇ ವಿನಾ ಹೂವೇ ಇರಲಿಲ್ಲ. ಇದನ್ನು ನೋಡಿ ಪ್ರಿಯಾಂಕಾ ನಕ್ಕು ಸುಸ್ತಾಗಿದ್ದಾರೆ. ಈ ಹಾಸ್ಯ ಸನ್ನಿವೇಶದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕೆಲವರು ಪ್ರಿಯಾಂಕಾ ನಡೆಗೆ ಮೆಚ್ಚುಗೆ ಸೂಚಿಸಿ, ಹೂಗುಚ್ಛ ಸ್ವೀಕರಿಸಿ ಅದನ್ನು ತಿಳಿ ಹಾಸ್ಯ ಮಾಡಿದ್ದಕ್ಕೆ ಮೆಚ್ಚಿದ್ದಾರೆ.