ಮತಗಳವು ವಿರುದ್ಧ ರಾಗಾ ‘ಲಾಪತಾ ವೋಟ್’ ವಿಡಿಯೋ

KannadaprabhaNewsNetwork |  
Published : Aug 17, 2025, 01:40 AM ISTUpdated : Aug 17, 2025, 06:22 AM IST
Congress MP Rahul Gandhi addresses a press conference

ಸಾರಾಂಶ

ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಆರೋಪಕ್ಕೆ ಪೂರಕವಾಗಿ ಶನಿವಾರ ಲಾಪತಾ ವೋಟ್ (ಕಾಣೆಯಾದ ಮತ) ಎಂಬ ಶೀರ್ಷಿಕೆಯಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

 ನವದೆಹಲಿ :  ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಆರೋಪಕ್ಕೆ ಪೂರಕವಾಗಿ ಶನಿವಾರ ಲಾಪತಾ ವೋಟ್ (ಕಾಣೆಯಾದ ಮತ) ಎಂಬ ಶೀರ್ಷಿಕೆಯಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ವೀಡಿಯೋದಲ್ಲಿ, ಪೊಲೀಸ್ ಠಾಣೆಗೆ ತೆರಳಿದ ಒಬ್ಬ ಬಡ ವ್ಯಕ್ತಿಯೊಬ್ಬ, ‘ನನ್ನ ಮತ ಕಳವಾಗಿದೆ. ಅಷ್ಟೇ ಅಲ್ಲ ಲಕ್ಷಾಂತರ ಮತಗಳು ಕಳವಾಗಿವೆ’ ಎಂದು ದೈನ್ಯವಾಗಿ ಹೇಳಿಕೊಳ್ಳುತ್ತಾನೆ. ಇದನ್ನು ಕೇಳಿ ಚಕಿತರಾಗುವ ಪೊಲೀಸರು, ‘ನಮ್ಮ ಮತವೂ ಕಳವಾಗಿದೆಯೇ?’ ಎಂದು ಕೇಳುತ್ತಾರೆ.

ಈ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ‘ಗುಟ್ಟಾಗಿ ಕಳ್ಳತನ ಇನ್ನು ಸಾಧ್ಯವಿಲ್ಲ. ಸಾರ್ವಜನಿಕರು ಎಚ್ಚರಗೊಂಡಿದ್ದಾರೆ’ ಎಂದಿದ್ದಾರೆ.

ಅವರ ಪೋಸ್ಟ್‌ ಅನ್ನು ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ‘ನಿಮ್ಮ ಮತದ ಕಳ್ಳತನ ನಿಮ್ಮ ಹಕ್ಕಿನ ಕಳ್ಳತನವೂ ಆಗಿದೆ. ಮತಗಳವಿನ ವಿರುದ್ಧ ಒಟ್ಟಾಗಿ ಧ್ವನಿ ಎತ್ತೋಣ ಮತ್ತು ನಮ್ಮ ಹಕ್ಕುಗಳನ್ನು ರಕ್ಷಿಸೋಣ’ ಎಂದು ಕರೆ ನೀಡಿದೆ.

ಇಂದಿನಿಂದ ರಾಹುಲ್‌ ‘ಮತ ಅಧಿಕಾರ ಯಾತ್ರೆ’

 ಪಟನಾ : ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ಆಯೋಜಿಸಿರುವ 15 ದಿನಗಳ ‘ಮತ ಅಧಿಕಾರ ಯಾತ್ರೆ’ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದ ಸಾಸಾರಾಂನಲ್ಲಿ ಭಾನುವಾರ ಚಾಲನೆ ನೀಡಲಿದ್ದಾರೆ.ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ‘ಭಾನುವಾರ ರಾಹುಲ್ ಗಾಂಧಿ ಸಾಸಾರಾಂನಲ್ಲಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. 

ಬಿಹಾರದ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹಾಗೂ ಇಂಡಿಯಾ ಕೂಟದ ಹಲವು ನಾಯಕರು ಭಾಗವಹಿಸಲಿದ್ದಾರೆ. ಯಾತ್ರೆಯು ಸೆ.1ರಂದು ಮುಕ್ತಾಯವಾಗಲಿದೆ. ಯಾತ್ರೆಯ 15 ದಿನವೂ ರಾಹುಲ್ ಬಿಹಾರದಲ್ಲೇ ವಾಸ್ತವ್ಯ ಹೂಡುವ ನಿರೀಕ್ಷೆ ಇದೆ. ಯಾತ್ರೆಯು ರಾಜ್ಯದ 25 ಜಿಲ್ಲೆಗಳನ್ನು ಒಳಗೊಳ್ಳಲಿದೆ’ ಎಂದರು.

ಬಿಹಾರದಲ್ಲಿ ಮತದಾರ ಪಟ್ಟಿಯನ್ನು ಚುನಾವನಾ ಆಯೋಗ ಪರಿಷ್ಕರಿಸಿ 65 ಲಕ್ಷ ‘ಅನರ್ಹ’ ಮತದಾರರನ್ನು ಈವರೆಗೆ ತೆಗೆದು ಹಾಕಿದೆ. ಆದರೆ ಇದು ಬಿಜೆಪಿ ವಿರೋಧಿ ಮತದಾರರನ್ನು ತೆಗೆದುಹಾಕುವ ಕುತಂತ್ರ ಎಂಬುದು ವಿಪಕ್ಷಗಳ ಆರೋಪ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ