ಸಿಖ್‌ ಧರ್ಮಗ್ರಂಥ ಅವಮಾನಕ್ಕೆ 25 ಲಕ್ಷ ದಂಡ, ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Apr 14, 2026, 02:00 AM IST
Sikh

ಸಾರಾಂಶ

ಸಿಖ್ಖರ ಧರ್ಮಗ್ರಂಥವಾಗಿರುವ ಗುರು ಗ್ರಂಥ್‌ ಸಾಹಿಬ್‌ನ ಘನತೆಗೆ ಚ್ಯುತಿ ಬರೆದಂತೆ ತಡೆಯುವ ಉದ್ದೇಶದಿಂದ ಪಂಜಾಬ್‌ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ.  

ಚಂಡೀಗಢ: ಸಿಖ್ಖರ ಧರ್ಮಗ್ರಂಥವಾಗಿರುವ ಗುರು ಗ್ರಂಥ್‌ ಸಾಹಿಬ್‌ನ ಘನತೆಗೆ ಚ್ಯುತಿ ಬರೆದಂತೆ ತಡೆಯುವ ಉದ್ದೇಶದಿಂದ ಪಂಜಾಬ್‌ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ. ಇದರ ಪ್ರಕಾರ ಇನ್ನು ಗ್ರಂಥಕ್ಕೆ ಅವಮಾನಿಸಿದರೆ ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆ ಮತ್ತು ಕನಿಷ್ಠ 5 ಲಕ್ಷ, ಗರಿಷ್ಠ 25 ಲಕ್ಷ ರು.ದಂಡ ವಿಧಿಸಲಾಗುವುದು. 

ಜಾಗತ್ ಜೋತ್ ಶ್ರೀ ಗುರು ಗ್ರಂಥ ಸಾಹಿಬ್ ಸತ್ಕಾರ್‌  ಮಸೂದೆ

ತಾವು ಮಂಡಿಸಿದ ಜಾಗತ್ ಜೋತ್ ಶ್ರೀ ಗುರು ಗ್ರಂಥ ಸಾಹಿಬ್ ಸತ್ಕಾರ್‌ (ತಿದ್ದುಪಡಿ) ಮಸೂದೆ ಅಂಗೀಕಾರವಾಗಿದ್ದಕ್ಕೆ ಸಿಎಂ ಭಗವಂತ್‌ ಮಾನ್‌ ಸಂತಸ ವ್ಯಕ್ತಪಡಿಸಿದ್ದು, ‘ಇದು ಧರ್ಮನಿಂದನೆ ಕೃತ್ಯಗಳ ವಿರುದ್ಧ ಬಲವಾದ ಪ್ರತಿಬಂಧಕವಾಗಿ ಕೆಲಸ ಮಾಡುತ್ತದೆ’ ಎಂದರು. ಇದು ರಾಜ್ಯ ಮಸೂದೆಯಾದ ಕಾರಣ ರಾಷ್ಟ್ರಪತಿಗಳ ಅಂಕಿತದ ಅಗತ್ಯ ಇರುವುದಿಲ್ಲ. ರಾಜ್ಯಪಾಲರ ಒಪ್ಪಿಯಿಂದ ಕಾಯ್ದೆಯಾಗುವುದು.

ಗ್ರಂಥಕ್ಕೆ ಅಪಚಾರವೆಸಗಿ ಕೋಮು ಸೌಹಾರ್ದತೆಯನ್ನು ಕದಡುವ ಘಟನೆ

ಇತ್ತೀಚೆಗೆ ರಾಜ್ಯದಲ್ಲಿ ಆ ಗ್ರಂಥಕ್ಕೆ ಅಪಚಾರವೆಸಗಿ ಕೋಮು ಸೌಹಾರ್ದತೆಯನ್ನು ಕದಡುವ ಘಟನೆಗಳು ತಡೆದಿದ್ದವು. ಅವು ಮರುಕಳಿಸದಂತೆ ತಡೆಯಲು ಈ ಮಸೂದೆಯನ್ನು ಪರಿಚಯಿಸಲಾಗಿದೆ. ಬೇರಾವ ಧರ್ಮಗ್ರಂಥಗಳಿಗೂ ಇದು ಅನ್ವಯವಾಗದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಸ್ರೇಲ್‌-ಲೆಬನಾನ್‌ ಕದನಕ್ಕೆ 10 ದಿನ ವಿರಾಮ : ಟ್ರಂಪ್‌
ದಿಲ್ಲಿ ಏರ್ಪೋರ್ಟ್‌ನಲ್ಲಿ 2 ವಿಮಾನಗಳ ಡಿಕ್ಕಿ : ತಪ್ಪಿದ ಅನಾಹುತ