ಪ್ಯಾಸೆಂಜರ್‌ ರೈಲು ಟಿಕೆಟ್‌ ಕನಿಷ್ಠ ದರ ಶೇ.50ರಷ್ಟು ಇಳಿಕೆ

KannadaprabhaNewsNetwork |  
Published : Feb 28, 2024, 02:34 AM ISTUpdated : Feb 28, 2024, 08:55 AM IST
ಭಾರತೀಯ ರೈಲ್ವೆ | Kannada Prabha

ಸಾರಾಂಶ

ಕೋವಿಡ್‌ ಸಾಂಕ್ರಾಮಿಕದ ವೇಳೆ ಏರಿಕೆ ಮಾಡಲಾಗಿದ್ದ ಹಲವು ಪ್ಯಾಸೆಂಜರ್ ರೈಲುಗಳ ಕನಿಷ್ಠ ದರವನ್ನು ಭಾರತೀಯ ರೈಲ್ವೆ ಮಂಗಳವಾರದಿಂದ ಇಳಿಕೆ ಮಾಡಿದೆ.

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದ ವೇಳೆ ಏರಿಕೆ ಮಾಡಲಾಗಿದ್ದ ಹಲವು ಪ್ಯಾಸೆಂಜರ್ ರೈಲುಗಳ ಕನಿಷ್ಠ ದರವನ್ನು ಭಾರತೀಯ ರೈಲ್ವೆ ಮಂಗಳವಾರದಿಂದ ಇಳಿಕೆ ಮಾಡಿದೆ.

ಹೀಗಾಗಿ ಸಾಮಾನ್ಯ ರೈಲಿನ ಸೆಕೆಂಡ್ ಕ್ಲಾಸ್‌ ಕನಿಷ್ಠ ಟಿಕೆಟ್‌ ದರದಲ್ಲಿ ಶೇ.50ರಷ್ಟು ಕಡಿಮೆಯಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಕೋವಿಡ್‌ ಸಾಂಕ್ರಾಮಿಕದ ಲಾಕ್‌ಡೌನ್ ತೆರವು ನಂತರ ಹಲವು ಪ್ಯಾಸೆಂಜರ್‌ ರೈಲುಗಳ ಹೆಸರನ್ನು ಎಕ್ಸ್‌ಪ್ರೆಸ್‌ ಸ್ಪೆಷಲ್‌ ಅಥವಾ ಮೆಮು/ಡೆಮು ಎಕ್ಸ್‌ಪ್ರೆಸ್‌ ಎಂದು ಬದಲಾವಣೆ ಮಾಡಲಾಗಿತ್ತು. ಕನಿಷ್ಠ ಟಿಕೆಟ್‌ ದರವನ್ನು 10 ರು.ನಿಂದ 30 ರು.ವರೆಗೆ ಏರಿಕೆ ಮಾಡಲಾಗಿತ್ತು.

ಆದರೆ ರೈಲ್ವೆಯ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪ್ಯಾಸೆಂಜರ್‌ ರೈಲಿಗೆ ಕೇವಲ ತೋರಿಕೆಗೆ ಎಕ್ಸ್‌ಪ್ರೆಸ್‌ ಎಂದು ಹೆಸರು ಬದಲಿಸಿ, ಎಕ್ಸ್‌ಪ್ರೆಸ್‌ಗೆ ಸಮನಾದ ರೈಲು ದರ ಪೀಕುವುದು ಸರಿಯೇ. ಜನಸಾಮಾನ್ಯರು ದುಬಾರಿ ದರ ತೆತ್ತು ಹೇಗೆ ಸಂಚರಿಸಬೇಕು ಎಂದು ಜನರು ಪ್ರಶ್ನೆ ಮಾಡಿದ್ದರು.

ಇದರ ನಡುವೆ ಫೆಬ್ರವರಿ 26ರಂದು ನಡೆದ ರೈಲ್ವೆ ಮಂಡಳಿಯ ಸಭೆಯಲ್ಲಿ, ಎರಡನೇ ದರ್ಜೆಯ ಸಾಮಾನ್ಯ ಟಿಕೆಟ್‌ಗಳ ಕನಿಷ್ಠ ದರವನ್ನು ಮೊದಲಿನಂತೆ ಇಳಿಸಲಾಗಿದೆ. 

ಈ ಬಗ್ಗೆ ಮುಖ್ಯ ಬುಕಿಂಗ್ ಮೀಸಲಾತಿ ಮೇಲ್ವಿಚಾರಕರಿಗೆ ತಿಳಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಪ್ಯಾಸೆಂಜರ್‌ ರೈಲಿನ ಸ್ಲೀಪರ್ ಕ್ಲಾಸ್‌ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ.

ಸಾಮಾನ್ಯ ರೈಲುಗಳಲ್ಲಿ ಮಂಗಳವಾರದಿಂದಲೇ ಹಳೆ ದರ ಅನ್ವಯವಾಗಲಿದೆ. ಶೀಘ್ರದಲ್ಲೇ ಕಾಯ್ದಿರಿಸದ ಟಿಕೆಟ್‌ ಬುಕಿಂಗ್‌ ಆ್ಯಪ್‌ನಲ್ಲೂ ಶೀಘ್ರ ದರ ಪರಿಷ್ಕರಣೆ ಮಾಡಲಾವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

PREV

Recommended Stories

ಬೆಂಗಳೂರು : ಕೆರೆ ಜಾಗದಲ್ಲಿ ಕಟ್ಟಿದ್ದ 20 ಮನೆ ನೆಲಸಮ
ಬೆಳ್ಳಿ ಬೆಲೆ ₹ 1.35 ಲಕ್ಷ, ಚಿನ್ನದ ಬೆಲೆ ಕೈ ಸುಡುತ್ತೆ !