ಹಿಂದೂ ಮಹಾಸಾಗರದಲ್ಲಿ ಹಲವು ವಿದೇಶಿ ಹಡಗುಗಳನ್ನು ರಕ್ಷಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವ ಭಾರತೀಯ ನೌಕಾಪಡೆಗೆ ಐಎನ್‌ಎಸ್ ಸಂಧಾಯಕ್ ಸೇರ್ಪಡೆಯಾಗಿದೆ.
ವಿಶಾಖಪಟ್ಟಣ: ಹಿಂದೂ ಮಹಾಸಾಗರದಲ್ಲಿ ಹಲವು ವಿದೇಶಿ ಹಡಗುಗಳನ್ನು ರಕ್ಷಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವ ಭಾರತೀಯ ನೌಕಾಪಡೆಗೆ ಐಎನ್‌ಎಸ್ ಸಂಧಾಯಕ್ ಸೇರ್ಪಡೆಯಾಗಿದೆ.
ಈ ಹಡಗು ಪ್ರಮುಖವಾಗಿ ಜಲ ಮಾರ್ಗಗಳಲ್ಲಿ ಸಮೀಕ್ಷೆ ನಡೆಸಿ ಸುರಕ್ಷಿತ ನೌಕಾ ನಕ್ಷೆಯನ್ನು ತಯಾರಿಸಲು ನೆರವಾಗುತ್ತದೆ.
ಇದನ್ನು ಶೇ.80ರಷ್ಟು ಸ್ವದೇಶಿ ವಸ್ತುಗಳಿಂದ ತಯಾರಿಸಿದ್ದು, ಶೀಘ್ರದಲ್ಲೇ ಇದೇ ತೆರನಾದ 3 ಹಡಗುಗಳನ್ನು ಸಂಸ್ಥೆ ನೌಕಾಪಡೆಗೆ ಹಸ್ತಾಂತರಿಸಲಿದೆ.
ಇದನ್ನು ಉದ್ಘಾಟಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಭಾರತೀಯ ನೌಕಾಪಡೆ ಬಲಿಷ್ಠಗೊಂಡಿದ್ದು, ಕಡಲ್ಗಳ್ಳರ ಕುರಿತು ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ಎಚ್ಚರಿಸಿದರು.