ಶೀಘ್ರವೇ ಏಕ ಚುನಾವಣಾ ವರದಿ ಸಲ್ಲಿಸಲಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ

KannadaprabhaNewsNetwork |  
Published : Mar 09, 2024, 01:34 AM ISTUpdated : Mar 09, 2024, 09:24 AM IST
Ramnath Kovind

ಸಾರಾಂಶ

ಸಂವಿಧಾನದ 5 ವಿಧಿಗಳ ಬದಲಾವಣೆಗೆ ಶಿಫಾರಸು ಮಾಡುವ ಮೂಲಕ 2029ರಿಂದ ಒಂದು ದೇಶ ಒಂದು ಚುನಾವಣೆ ಜಾರಿ ಮಾಡಬಹುದು ಎಂಬುದಾಗಿ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎನ್ನಲಾಗಿದೆ.

ನವದೆಹಲಿ: ಒಂದು ದೇಶ ಒಂದು ಚುನಾವಣೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ ತನ್ನ ವರದಿಯನ್ನು ತಯಾರಿಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದೆ ಎಂಬುದಾಗಿ ತಿಳಿದುಬಂದಿದೆ. 

ವರದಿಯಲ್ಲಿ ಪ್ರಮುಖವಾಗಿ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯನ್ನು ತಯಾರಿಸುವುದು, ಸರ್ಕಾರ ಅಲ್ಪಮತಕ್ಕೆ ಕುಸಿದಾಗ ಏಕತಾ ಸರ್ಕಾರವನ್ನು ರಚಿಸುವುದು, ರಾಷ್ಟ್ರಪತಿ ಆಡಳಿತಕ್ಕೆ ಸಂಬಂಧಿಸಿದಂತೆ ಸಂವಿಧಾನದ ಐದು ವಿಧಿಗಳನ್ನು ತಿದ್ದುಪಡಿ ಮಾಡಬೇಕೆಂದು ವರದಿಯಲ್ಲಿ ಉಲ್ಲೇಖಿಸಿದೆ ಎಂಬುದಾಗಿ ತಿಳಿದುಬಂದಿದೆ. 

ಇದೇ ರೀತಿಯಲ್ಲಿ ಕೇಂದ್ರ ಕಾನೂನು ಆಯೋಗ ಕೂಡ ತನ್ನ ವರದಿಯನ್ನು ಬಹುತೇಕ ಸಮಾನ ಅಂಶಗಳೊಂದಿಗೆ ತಯಾರಿಸಿದ್ದು, ಈ ಸಂಬಂಧ ಸಂವಿಧಾನದಲ್ಲಿ ಹೊಸ ಪರಿಚ್ಛೇದವನ್ನು ಅಳವಡಿಕೆ ಮಾಡುವ ಕುರಿತು ಮಾಡಿರುವ ಶಿಫಾರಸುಗಳನ್ನು ಸರ್ಕಾರಕ್ಕೆ ಶೀಘ್ರದಲ್ಲೇ ಸಲ್ಲಿಸಲು ಅಂತಿಮ ತಯಾರಿ ನಡೆಸುತ್ತಿದೆ ಎಂಬುದಾಗಿ ತಿಳಿದುಬಂದಿದೆ. 

ಬದಲಾಗಬೇಕಿರುವ ವಿಧಿಗಳು83 - ರಾಷ್ಟ್ರೀಯ ಸದನಗಳ ಅವಧಿ85 - ರಾಷ್ಟ್ರಪತಿಗಳಿಂದ ಲೋಕಸಭೆಯ ವಿಸರ್ಜನೆ172 - ರಾಜ್ಯ ಸದನಗಳ ಅವಧಿ174 - ರಾಜ್ಯ ಸದನಗಳ ವಿಸರ್ಜನೆ356 - ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತರಾಷ್ಟ್ರಪತಿ ನೇತೃತ್ವದಲ್ಲಿ ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಮಾಡಲು ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಷ್ಯಾದ ಯಾಕುಟಿಯಾದಲ್ಲಿ- 56 ಡಿ.ಸೆ. ತಾಪ ದಾಖಲು
ಹಾರುವ ಮೊದಲೇ ಕೇರಳದ ವಿಮಾನ ಸಂಸ್ಥೆ ಸಂಕಷ್ಟದಲ್ಲಿ