ಜಾಗತಿಕ ಆರ್ಥಿಕ ಮಾರುಕಟ್ಟೆ ಅಸ್ಥಿರವಾಗಿ, ಚಿನ್ನದ ಬೆಲೆ 3ನೇ ಒಂದರಷ್ಟು ಏರಿಕೆ ಕಂಡಿರುವ ಈ ಹೊತ್ತಿನಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 57.5 ಟನ್ ಚಿನ್ನವನ್ನು ಖರೀದಿಸಿದೆ.
ನವದೆಹಲಿ: ಜಾಗತಿಕ ಆರ್ಥಿಕ ಮಾರುಕಟ್ಟೆ ಅಸ್ಥಿರವಾಗಿ, ಚಿನ್ನದ ಬೆಲೆ 3ನೇ ಒಂದರಷ್ಟು ಏರಿಕೆ ಕಂಡಿರುವ ಈ ಹೊತ್ತಿನಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 57.5 ಟನ್ ಚಿನ್ನವನ್ನು ಖರೀದಿಸಿದೆ.
2025ನೇ ಹಣಕಾಸು ವರ್ಷದಲ್ಲಿ ಮಾಡಿದ ಖರೀದಿಯು, ಕಳೆದ 7 ವರ್ಷಗಳಲ್ಲೇ 2ನೇ ಗರಿಷ್ಠವಾಗಿದೆ. ಜಾಗತಿಕ ರಾಜಕಾರಣ ಅಸ್ಥಿರತೆ, ಡಾಲರ್ ಮೌಲ್ಯದಲ್ಲಿ ಏರಿಳಿತ, ಅಮೆರಿಕದ ಸರ್ಕಾರಿ ಬಾಂಡ್‌ಗಳಿಗೆ ಸಂಬಂಧಿಸಿದ ಕಳವಳಗಳ ನಡುವೆ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ ದಾಸ್ತಾನನ್ನು ಹೆಚ್ಚಿಸಿಕೊಳ್ಳುತ್ತಿವೆ. ಆರ್‌ಬಿಐ ಕೂಡ ಇದೇ ಹಾದಿ ಹಿಡಿದಿದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಆರ್‌ಬಿಐ ಬಳಿ ಇರುವ ಒಟ್ಟು ಚಿನ್ನ 2025ರ ಮಾರ್ಚ್ ವೇಳೆಗೆ 879.6 ಟನ್ ತಲುಪಿತ್ತು. ಕಳೆದ ವರ್ಷ ಇದು 822.1 ಟನ್‌ನಷ್ಟು ಇತ್ತು.
ತೆರಿಗೆ ಸಮರ: ಅಮೆರಿಕ ಜತೆ ಒಪ್ಪಂದ ಮಾಡುವ ಮೊದಲ ದೇಶ ಭಾರತ?
ವಾಷಿಂಗ್ಟನ್: ಅಮೆರಿಕದ ಪ್ರತಿತೆರಿಗೆ ಹೇರಿಕೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 90 ದಿನಗಳ ಕಾಲಾವಕಾಶ ನೀಡಿದ್ದು, ಈ ವೇಳೆ ಅಮೆರಿಕದ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೊದಲ ದೇಶ ಭಾರತ ಆಗುವ ಸಾಧ್ಯತೆ ಇದೆ ಎಂದು ಅಮೆರಿಕ ಹಣಕಾಸು ಸಚಿವ ಸ್ಕಾಟ್ ಬೆಸ್ಸೆಂಟ್ ಹೇಳಿದ್ದಾರೆ.
ಬುಧವಾರ ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಕಾರ್ಯಕ್ರಮದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದ ಬೆಸ್ಸಿಂಟ್, ‘ಭಾರತದೊಂದಿಗೆ ವ್ಯಾಪಾರ ಒಪ್ಪಂದ ಸುಲಭವಾಗಿದೆ. ಅವರು ಹೆಚ್ಚು ತೆರಿಗೆಯೇತರ ಅಡೆತಡೆಗಳನ್ನು ಹಾಕುವುದಿಲ್ಲ. ಕರೆನ್ಸಿ ವಿನಿಮಯವಿಲ್ಲ. ಅತಿ ವಿರಳ ಸರ್ಕಾರಿ ಸಹಾಯಧನವನ್ನು ಭಾರತ ನೀಡುತ್ತದೆ. ಹೀಗಾಗಿ ಇವರ ಜೊತೆಗೆ ವ್ಯಾಪಾರ ಒಪ್ಪಂದವು ಸುಲಭವಾಗಿರಲಿದೆ. ಹೀಗಾಗಿ ಭಾರತವೇ ಮೊದಲು ಒಪ್ಪಂದ ಮಾಡಿಕೊಳ್ಳುವ ದೇಶವಾಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.