ಪೇಟಿಎಂ ಯುಪಿಐ ಸೇವೆಗೆ ನೆರವಾಗಿ: ಎನ್‌ಸಿಪಿಐಗೆ ಆರ್‌ಬಿಐ ಸೂಚನೆ

KannadaprabhaNewsNetwork |  
Published : Feb 24, 2024, 02:31 AM ISTUpdated : Feb 24, 2024, 08:40 AM IST
ಪೇಟಿಎಂ | Kannada Prabha

ಸಾರಾಂಶ

ಅನ್ಯ ಬ್ಯಾಂಕ್‌ ಮೂಲಕ ಪೇಟಿಎಂ ವಹಿವಾಟಿಗೆ ಅನುಮತಿಸಿ ಎಂದು ಎನ್‌ಪಿಸಿಐಗೆ ಆರ್‌ಬಿಐ ಸೂಚನೆ ನೀಡಿದೆ.

ಮುಂಬೈ: ಮಾ.15ರ ನಂತರ ಗ್ರಾಹಕರ ಖಾತೆಗಳು ಹಾಗೂ ವ್ಯಾಲೆಟ್‌ಗಳಿಗೆ ಹಣ ಸ್ವೀಕರಿಸದಂತೆ ಪೇಟಿಎಂ ಬ್ಯಾಂಕ್‌ಗೆ ನಿರ್ಬಂಧ ಹೇರಿರುವ ರಿಸರ್ವ್‌ ಬ್ಯಾಂಕ್, ಪೇಟಿಎಂ ಆ್ಯಪ್‌ನ ಮೂಲಕ ಯುಪಿಐ ಸೇವೆ ಮುಂದುವರಿಕೆಯಾಗುವಂತೆ ನೋಡಿಕೊಳ್ಳಲು ನೆರವಾಗುವಂತೆ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೆಷನ್‌ (ಎನ್‌ಪಿಸಿಐ)ಗೆ ಸೂಚಿಸಿದೆ.

ಇತರ 4-5 ಬ್ಯಾಂಕ್‌ಗಳ ಜತೆ ಪೇಟಿಎಂ ಖಾತೆದಾರರ ಖಾತೆಗಳನ್ನು ಲಿಂಕ್‌ ಮಾಡಿ ಸೇವೆ ಮುಂದುವರಿಸಲು ಅನುವು ಮಾಡಿಕೊಡಬೇಕು. 

ಯುಪಿಐ ಗ್ರಾಹಕರು ತಡೆರಹಿತ ಸೇವೆಯನ್ನು ಪಡೆಯುವ ಸಲುವಾಗಿ ‘ಥರ್ಡ್ ಪಾರ್ಟಿ ಅಪ್ಲಿಕೇಷನ್‌ ಪ್ರೊವೈಡರ್‌’ ಆಗುವ ಬೇಡಿಕೆಯನ್ನು ಪರಿಶೀಲಿಸಬೇಕು ಎಂದು ರಿಸರ್ವ್‌ ಬ್ಯಾಂಕ್‌ ನಿರ್ದೇಶಿಸಿದೆ.

ಈ ಸಂಬಂಧ ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್ಸ್‌ ಲಿಮಿಟೆಡ್‌ನಿಂದಲೇ ಕೋರಿಕೆ ಬಂದಿತ್ತು ಎಂದಿದೆ.

ಈವರೆಗೂ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಮೂಲಕ ಪೇಟಿಎಂ ಯುಪಿಐ ಬಳಕೆದಾರರ ವಹಿವಾಟು ನಡೆಯುತ್ತಿತ್ತು. 

ಆದರೆ ಪೇಮೆಂಟ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ಹೇರಿರುವ ಕಾರಣ ಯುಪಿಐ ಬಳಕೆದಾರರಿಗೆ ಇತರ ಬ್ಯಾಂಕ್‌ಗಳ ಮೂಲಕ ವಹಿವಾಟು ಅನಿವಾರ್ಯವಾಗಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ
ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ