ಟೆಲಿಕಾಂ ಕಂಪನಿಯ ಮೊಬೈಲ್‌ ನೆಟ್ವರ್ಕ್‌ ಜಪ್ತಿಗೆ ಕೇಂದ್ರಕ್ಕೆ ಅಧಿಕಾರ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

1.ಇಬ್ಬರು ವ್ಯಕ್ತಿಗಳ ನಡುವಿನ ಸಂದೇಶ ಓದುವುದಕ್ಕೂ ಅಧಿಕಾರ2. ಆದರೆ ಪತ್ರಕರ್ತರು ಕಳಿಸಿದ ಸಂದೇಶ ಸರ್ಕಾರ ಓದುವಂತಿಲ್ಲ3. ಕದ್ದಾಲಿಕೆಗೆ 3 ವರ್ಷ ಜೈಲು, 2 ಕೋಟಿ ರು. ದಂಡ4. ಸಿಮ್‌ ಕಾರ್ಡ್‌ ಪಡೆಯಲು ಬಯೋಮೆಟ್ರಿಕ್‌ ಕಡ್ಡಾಯ5. ಹಳೆಯ 3 ಟೆಲಿಕಾಂ ಕಾಯ್ದೆ ರದ್ದು: ಹೊಸ ಮಸೂದೆ ಮಂಡನೆ

ಇಬ್ಬರು ವ್ಯಕ್ತಿಗಳ ನಡುವಿನ ಸಂದೇಶ ಓದುವುದಕ್ಕೂ ಅಧಿಕಾರ

ಆದರೆ ಪತ್ರಕರ್ತರು ಕಳಿಸಿದ ಸಂದೇಶ ಸರ್ಕಾರ ಓದುವಂತಿಲ್ಲಕದ್ದಾಲಿಕೆಗೆ 3 ವರ್ಷ ಜೈಲು, 2 ಕೋಟಿ ರು. ದಂಡ

ಸಿಮ್‌ ಕಾರ್ಡ್‌ ಪಡೆಯಲು ಬಯೋಮೆಟ್ರಿಕ್‌ ಕಡ್ಡಾಯಹಳೆಯ 3 ಟೆಲಿಕಾಂ ಕಾಯ್ದೆ ರದ್ದು: ಹೊಸ ಮಸೂದೆ ಮಂಡನೆನವದೆಹಲಿ: ತುರ್ತು ಸಂದರ್ಭ ಅಥವಾ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಸಂದರ್ಭದಲ್ಲಿ ಯಾವುದೇ ಟೆಲಿಕಾಂ ಕಂಪನಿಯ ಮೊಬೈಲ್‌ ನೆಟ್‌ವರ್ಕನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಕ್ಕೆ ನೀಡುವ ನೂತನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.ಟೆಲಿಕಮ್ಯುನಿಕೇಷನ್ಸ್‌ ಮಸೂದೆ-2023ನ್ನು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಲೋಕಸಭೆಯಲ್ಲಿ ಸೋಮವಾರ ಮಂಡಿಸಿದರು. ಅದರಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರು ಪ್ರಕಟಣೆಯ ಉದ್ದೇಶದಿಂದ ಕಳುಹಿಸುವ ಸಂದೇಶಗಳನ್ನು ಕದ್ದು ಓದುವುದನ್ನು ಶಿಕ್ಷಾರ್ಹ ಅಪರಾಧವಾಗಿಸಲಾಗಿದೆ. ಹಳೆಯ ಟೆಲಿಗ್ರಾಫ್‌ ಕಾಯ್ದೆ, ಇಂಡಿಯನ್‌ ವೈರ್‌ಲೆಸ್‌ ಟೆಲಿಗ್ರಾಫಿ ಕಾಯ್ದೆ ಹಾಗೂ ಟೆಲಿಗ್ರಾಫ್‌ ವೈರ್ಸ್‌ ಕಾಯ್ದೆಯನ್ನು ರದ್ದುಪಡಿಸಿ ಈ ಹೊಸ ಮಸೂದೆ ಸಿದ್ಧತಪಡಿಸಲಾಗಿದೆ.ಹೊಸ ಮಸೂದೆಯ ಪ್ರಮುಖಾಂಶ:1. ತುರ್ತು ಸಂದರ್ಭ, ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಸಂದರ್ಭ, ರಕ್ಷಣಾ ಉದ್ದೇಶಕ್ಕೆ, ದೇಶದ ಸಾರ್ವಭೌಮತೆ ಕಾಪಾಡುವ ಉದ್ದೇಶಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸರ್ಕಾರದಿಂದ ಈ ಉದ್ದೇಶಕ್ಕೆ ನೇಮಿಸಲ್ಪಟ್ಟ ಅಧಿಕಾರಿಯ ಆದೇಶದೊಂದಿಗೆ ಯಾವುದೇ ಟೆಲಿಕಾಂ ಕಂಪನಿಯ ಮೊಬೈಲ್‌ ನೆಟ್‌ವರ್ಕನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯಬಹುದು.2. ಮೇಲೆ ಹೇಳಿದ ಉದ್ದೇಶಕ್ಕಾಗಿ ಇಬ್ಬರು ವ್ಯಕ್ತಿಗಳು ಅಥವಾ ಕಂಪನಿಗಳು ಅಥವಾ ಯಾವುದೇ ಉಪಕರಣಗಳ ನಡುವೆ ವಿನಿಮಯವಾಗುವ ಸಂದೇಶವನ್ನು ಸರ್ಕಾರ ತಡೆಹಿಡಿಯಬಹುದು ಅಥವಾ ಓದಬಹುದು.3. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ (ಅಕ್ರೆಡಿಟೆಡ್‌) ಪತ್ರಕರ್ತರು ಪ್ರಕಟಣೆಯ ಉದ್ದೇಶದಿಂದ ಕಳುಹಿಸುವ ಸಂದೇಶವನ್ನು ಯಾರೂ ಕದ್ದು ನೋಡುವಂತಿಲ್ಲ ಅತವಾ ತಡೆಹಿಡಿಯುವಂತಿಲ್ಲ. ರಾಷ್ಟ್ರೀಯ ಭದ್ರತೆಯ ಕಾರಣಕ್ಕೆ ಇಂತಹ ಸಂದೇಶಗಳ ವಿನಿಮಯವನ್ನು ನಿಷೇಧಿಸಿದ್ದರೆ ಮಾತ್ರ ಸರ್ಕಾರ ಪತ್ರಕರ್ತರ ಸಂದೇಶ ವೀಕ್ಷಿಸಬಹುದು.4. ಸಂದೇಶಗಳನ್ನು ಅಕ್ರಮವಾಗಿ ಓದಿದರೆ ಅಥವಾ ಕರೆಗಳನ್ನು ಕದ್ದಾಲಿಕೆ ಮಾಡಿದರೆ 3 ವರ್ಷದವರೆಗೆ ಜೈಲುಶಿಕ್ಷೆ, 2 ಕೋಟಿ ರು.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.5. ಟೆಲಿಕಾಂ ಸಂಬಂಧಿ ವ್ಯಾಜ್ಯಗಳ ಇತ್ಯರ್ಥಕ್ಕೆ ನ್ಯಾಯಮಂಡಳಿ ರಚಿಸುವುದು.

6. ಸಿಮ್‌ ಪಡೆಯಲು ಬಯೋಮೆಟ್ರಿಕ್‌ ಕಡ್ಡಾಯ

Share this article