ಅಯೋಧ್ಯೆ: 2024ರ ಜ.22ರಂದು ನಡೆಯಲಿರುವ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ದಿನ ಸನ್ನಿಹಿತವಾಗುತ್ತಿದ್ದಂತೆ ಅಯೋಧ್ಯೆಯ ಹೋಟೆಲ್ ಬಾಡಿಗೆ ದರ 4-5 ಪಟ್ಟು ಹೆಚ್ಚಳವಾಗಿ ಗಗನಕ್ಕೇರಿ ಕುಳಿತಿದೆ. ಆದರೂ ಜ.15ರಿಂದ ಜ.30ರವರೆಗೆ ನಗರದ ಬಹುತೇಕ ಹೋಟೆಲ್‌ಗಳ ರೂಂಗಳು ಈಗಲೇ ಬುಕ್ ಆಗಿಬಿಟ್ಟಿವೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವ ಐಷಾರಾಮಿ ‘ರಾಮಾಯಣ ಹೋಟೆಲ್’ನಲ್ಲಿ ಹಾಲಿ 7726 ರು. ಇರುವ ಕೊಠಡಿ ಶುಲ್ಕ ಜನವರಿಯಲ್ಲಿ 40 ಸಾವಿರ ರು. ತೋರಿಸುತ್ತಿದೆ. ಇದೇ ಹೋಟೆಲ್ ಲಕ್ಷುರಿ ಕೊಠಡಿ ಶುಲ್ಕ 23,600 ರು.ನಿಂದ 76 ಸಾವಿರ ರು.ವರೆಗೂ ಹೆಚ್ಚಳಗೊಂಡಿದೆ.ಕೆಲ ಹೋಟೆಲ್‌ಗಳು ಬೇಡಿಕೆ ಇನ್ನೂ ಹೆಚ್ಚಾಗಬಹುದು. ಆಗ ಜನರಿಂದ ಹೆಚ್ಚಿಗೆ ಹಣ ‘ವಸೂಲಿ’ ಮಾಡಬಹುದು ಎನ್ನುವ ಕಾರಣಕ್ಕಾಗಿ ಈಗಲೇ ಮುಂಗಡ ಬುಕ್ಕಿಂಗ್ ಅನ್ನೇ ನೀಡುತ್ತಿಲ್ಲ ಎನ್ನಲಾಗಿದೆ.ಅಯೋಧ್ಯೆಯಲ್ಲಿ 175 ಹೋಟೆಲ್‌ಗಳು, 72 ಗೆಸ್ಟ್‌ಹೌಸ್, 50 ಧರ್ಮಶಾಲೆ, 400ಕ್ಕಿಂತ ಹೆಚ್ಚು ಪೇಯಿಂಗ್ ಗೆಸ್ಟ್ ಲಭ್ಯತೆ ಇದೆ. ಆದರೆ ಏಕಕಾಲಕ್ಕೆ ಲಕ್ಷಾಂತರ ಜನ ಅಯೋಧ್ಯೆಗೆ ಕಡೆಗೆ ಮುಖ ಮಾಡಿರುವ ಹಿನ್ನೆಲೆಯಲ್ಲಿ ಎಷ್ಟು ಕೊಠಡಿಗಳಿದ್ದರೂ ಸಾಲದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.