ಅಲ್ಪಸಂಖ್ಯಾತರ ಮಕ್ಕಳು ರಫೇಲನ್ನೇ ಬಿಚ್ಚಿ ಜೋಡಿಸಬಲ್ಲರು, ಆದರೆಓದಿದ್ದು ಮರೀತಾರೆ: ರೇವಂತ್

KannadaprabhaNewsNetwork |  
Published : Aug 15, 2026, 04:15 AM IST
Revanth Reddy

ಸಾರಾಂಶ

ಅಲ್ಪಸಂಖ್ಯಾತ (ಮುಸ್ಲಿಂ) ವಿದ್ಯಾರ್ಥಿಗಳು ರಫೇಲ್ ಯುದ್ಧ ವಿಮಾನವನ್ನೇ ಬಿಚ್ಚಿ ಮತ್ತೆ ಯಶಸ್ವಿಯಾಗಿ ಜೋಡಿಸುವಷ್ಟು ಪ್ರಾವೀಣ್ಯ ಹೊಂದಿದ್ದಾರೆ. ಆದರೆ, ಪುಸ್ತಕಗಳಲ್ಲಿ ಓದಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹೆಣಗಾಡುತ್ತಾರೆ’ ಎಂದ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ

ಹೈದರಾಬಾದ್: ‘ಅಲ್ಪಸಂಖ್ಯಾತ (ಮುಸ್ಲಿಂ) ವಿದ್ಯಾರ್ಥಿಗಳು ರಫೇಲ್ ಯುದ್ಧ ವಿಮಾನವನ್ನೇ ಬಿಚ್ಚಿ ಮತ್ತೆ ಯಶಸ್ವಿಯಾಗಿ ಜೋಡಿಸುವಷ್ಟು ಪ್ರಾವೀಣ್ಯ ಹೊಂದಿದ್ದಾರೆ. ಆದರೆ, ಪುಸ್ತಕಗಳಲ್ಲಿ ಓದಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹೆಣಗಾಡುತ್ತಾರೆ’ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೇಳಿದ್ದಾರೆ. ಇದು ಅಲ್ಪಸಂಖ್ಯಾತರ ತುಷ್ಟೀಕರಣ ಎಂದು ಬಿಜೆಪಿ ಕಿಡಿ ಕಾರಿದೆ.

ಅಲ್ಪಸಂಖ್ಯಾತರ ಶ್ರೇಷ್ಠತಾ ಸಮಾವೇಶ

ಹೈದರಾಬಾದ್‌ನಲ್ಲಿ ಗುರುವಾರ ನಡೆದ ಅಲ್ಪಸಂಖ್ಯಾತರ ಶ್ರೇಷ್ಠತಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಲ್ಪಸಂಖ್ಯಾತ ಯುವಕರು ಅತ್ಯಂತ ನುರಿತ ಕೌಶಲ ಹೊಂದಿರುವ ಕಾರ್ಮಿಕರಾಗಿದ್ದಾರೆ. ಅವರು ಬಯಸಿದರೆ ರಫೇಲ್ ಯುದ್ಧ ವಿಮಾನವನ್ನೇ ಬಿಚ್ಚಿ ಮತ್ತೆ ಯಶಸ್ವಿಯಾಗಿ ಜೋಡಿಸಬಲ್ಲರು. ಆದರೆ, ಪುಸ್ತಕಗಳಲ್ಲಿ ತಾವು ಓದಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹೆಣಗಾಡುತ್ತಾರೆ ಅಥವಾ ಮರೆತುಬಿಡುತ್ತಾರೆ’ ಎಂದಿದ್ದಾರೆ.

ವಿದ್ಯುತ್ ಕಳ್ಳತನ ಮಾಡುತ್ತಾರೆ ಎಂದು ದೂರು

‘ಅಲ್ಪಸಂಖ್ಯಾತ ಸಮುದಾಯದವರು ವಿದ್ಯುತ್ ಕಳ್ಳತನ ಮಾಡುತ್ತಾರೆ ಮತ್ತು ಬಿಲ್‌ಗಳನ್ನು ಪಾವತಿಸುವುದಿಲ್ಲ ಎಂದು ಶಾಸಕರು ಸೇರಿದಂತೆ ಅನೇಕರು ಆಗಾಗ್ಗೆ ದೂರು ನೀಡುತ್ತಾರೆ. ಆದರೆ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವು ಉಚಿತವಾಗಿ ನೀಡುತ್ತಿರುವ 200 ಯೂನಿಟ್ ವಿದ್ಯುತ್ ನಮ್ಮ ಅಲ್ಪಸಂಖ್ಯಾತ ಸಮುದಾಯದ ಸಹೋದರ-ಸಹೋದರಿಯರಿಗೆ ಹೆಚ್ಚು ಉಪಯುಕ್ತವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜನಗಣತಿಯಲ್ಲಿ ಕೇಳ್ತಾರೆ 40 ಪ್ರಶ್ನೆ: ಮೊದಲ ಸಲ ಜಾತಿಗಣತಿ
ಕೆಂಪುಕೋಟೆಯಲ್ಲಿಂದು ಮೋದಿ 13ನೇ ಸಲ ಧ್ವಜಾರೋಹರಣ