ತೆಲಂಗಾಣ ಸಿಎಂ ಆಗಿ ರೇವಂತ್‌ ಪ್ರಮಾಣವಚನ

KannadaprabhaNewsNetwork | Published : Dec 8, 2023 1:45 AM

ಸಾರಾಂಶ

ನವದೆಹಲಿ: ಗೂಢಚರ್ಯೆ ಆರೋಪದಲ್ಲಿ ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ವಾಯುಪಡೆಗೆ 8 ನಿವೃತ್ತಿ ಸಿಬ್ಬಂದಿಗಳನ್ನು ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಭೇಟಿ ಮಾಡಿದ್ದಾರೆ.

ಒಬ್ಬ ಡಿಸಿಎಂ ಸೇರಿ 11 ಸಚಿವರಿಂದಲೂ ಶಪಥಸೋನಿಯಾ, ಖರ್ಗೆ, ಸಿದ್ದು, ಡಿಕೆಶಿ ಸಮ್ಮುಖದಲ್ಲಿ ಪದಗ್ರಹಣಕೆಲವೇ ಹೊತ್ತಲ್ಲಿ 6 ಗ್ಯಾರಂಟಿ ಕುರಿತ 1 ಕಡತಕ್ಕೆ ಸಹಿಚುನಾವಣಾಪೂರ್ವ ಭರವಸೆಯಂತೆ ಅಂಗವಿಕಲೆಯೊಬ್ಬಳಿಗೆ ನೌಕರಿಸಿಎಂ ಮನೆ ಮುಂದಿದ್ದ ಬ್ಯಾರಿಕೇಡ್ ತೆರವು ಮಾಡಿಸಿದ ರೇವಂತ್‌ಹೈದರಾಬಾದ್: ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ಅನುಮುಲಾ ರೇವಂತ್ ರೆಡ್ಡಿ ಗುರುವಾರ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ವೈಭವೋಪೇತ ರೀತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ 6 ಗ್ಯಾರಂಟಿಗಳನ್ನು ಜಾರಿಗೊಳಿಸುವ ಸಂಬಂಧ ಮೊದಲ ಕಡತಕ್ಕೆ ಅವರು ಸಹಿ ಹಾಕಿದರು,ದಲಿತ ಮುಖಂಡ ಮಲ್ಲು ಭಟ್ಟಿ ವಿಕ್ರಮಾರ್ಕ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ವಿಕ್ರಮಾರ್ಕ ಹಾಗೂ ಪಕ್ಷದ ಪ್ರಮುಖ ನಾಯಕ ಉತ್ತಮ್‌ಕುಮಾರ್‌ ರೆಡ್ಡಿ ಸೇರಿ ಒಟ್ಟು 11 ಜನರು ಸಂಪುಟ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದರು. ಎಲ್‌.ಬಿ. ಸ್ಟೇಡಿಯಂನಲ್ಲಿ ಸಾವಿರಾರು ಜನರು ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.ಮಧ್ಯಾಹ್ನ 1:04ಕ್ಕೆ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದರೂ ಪ್ರಮಾಣ ವಚನ ಸ್ವೀಕಾರ 15 ನಿಮಿಷ ತಡವಾಯಿತು. 54 ವರ್ಷದ ರೆಡ್ಡಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಬೆಂಬಲಿಗರ ಹರ್ಷೋದ್ಗಾರ ಮುಗಿಲು ಮುಟ್ಟಿತು.ಇದಕ್ಕೂ ಮುನ್ನ ಅಲಂಕೃತ ತೆರೆದ ವಾಹನದಲ್ಲಿ ನಿಂತಿದ್ದ ರೇವಂತ್ ರೆಡ್ಡಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮತ್ತು ಇತರ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.ಗ್ಯಾರಂಟಿ ಜಾರಿಗೆ ಸಹಿ, ಇತರ ಕೆಲ ಭರವಸೆ ಈಡೇರಿಕೆ:ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ, ಅವರು ಭರವಸೆ ನೀಡಿದಂತೆ, ಕಾಂಗ್ರೆಸ್ನ ಆರು ಖಾತರಿಗಳಿಗೆ ಬಂಧಿಸಿದ ಮೊದಲ ಕಡತಕ್ಕೆ ಸಹಿ ಮಾಡಿದರು ಮತ್ತು ನಂತರ ಅಂಗವಿಕಲ ಮಹಿಳೆ ಎಂ. ರಜಿನಿ ಎಂಬುವರಿಗೆ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಸರ್ಕಾರಿ ನೌಕರಿಯ ನೇಮಕ ಪತ್ರ ನೀಡಿದರು.ಇದಲ್ಲದೆ, ಜನರು ಹಾಗೂ ಮುಖ್ಯಮಂತ್ರಿಯ ನಡುವೆ ಅಂತರ ಇರಬಾರದು ಎಂಬ ತಮ್ಮ ಚುನಾವಣಾಪೂರ್ವ ಭರವಸೆಯನ್ನು ರೇವಂತ್‌ ಈಡೇರಿಸಿದ್ದು, ತಮ್ಮ ಸಿಎಂ ಅಧಿಕೃತ ನಿವಾಸದ ಮುಂದೆ ಹಾಕಲಾಗಿದ್ದ ಕಬ್ಬಿಣದ ಬ್ಯಾರಿಕೇಡ್‌ ತೆರವುಗೊಳಿಸಿದರು.

Share this article