5 ವರ್ಷದಲ್ಲಿ ಸಶಸ್ತ್ರ ಪಡೆಯ46930 ಸಿಬ್ಬಂದಿ ಸ್ವಯಂನಿವೃತ್ತಿ ಸ್ವೀಕಾರ: ಕೇಂದ್ರ

KannadaprabhaNewsNetwork |  
Published : Dec 07, 2023, 01:15 AM IST
ಸೇನೆ | Kannada Prabha

ಸಾರಾಂಶ

ಕಳೆದ 5 ವರ್ಷಗಳಲ್ಲಿ ದೇಶದ 5 ಸಶಸ್ತ್ರ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್‌ನ 46930 ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ನವದೆಹಲಿ: ಕಳೆದ 5 ವರ್ಷಗಳಲ್ಲಿ ದೇಶದ 5 ಸಶಸ್ತ್ರ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್‌ನ 46930 ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಈ ಕುರಿಉತ ಮಾಹಿತಿ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌, ‘ ಗಡಿ ಭದ್ರತಾ ಪಡೆ (ಬಿಎಸ್ಎಫ್‌)ನಲ್ಲಿ ಅತಿ ಹೆಚ್ಚು 21,860, ಕೇಂದ್ರ ಮೀಸಲು ಪೊಲೀಸ್‌ ಪಡೆಯಿಂದ (ಸಿಆರ್‌ಪಿಎಫ್‌) 12,893, ಅಸ್ಸಾಂ ರೈಫಲ್ಸ್‌ನಿಂದ 5,146, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದ (ಸಿಐಎಸ್‌ಎಫ್‌) 3,012, ಭಾರತ ಟಿಬೆಟ್‌ ಗಡಿ ಪೊಲೀಸರಿಂದ 2,281 ಹಾಗೂ ಸಶಸ್ತ್ರ ಸೀಮಾ ಬಲ್‌ನಿಂದ 1738 ಸಿಬ್ಬಂದಿಗಳು ಸ್ವಯಂ ನಿವೃತ್ತಿ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಬೈನಲ್ಲಿ 8 ದಿನ ಅಗತ್ಯದಷ್ಟು ಮಾತ್ರ ಆಹಾರ ದಾಸ್ತಾನು
ಕೇಂದ್ರದಿಂದ ಜಿ ರಾಮ್‌ ಜಿ ಲೋಗೋ ವಿನ್ಯಾಸ ಸ್ಪರ್ಧೆ