3ನೇ ದಿನವೂ ಸೂಚ್ಯಂಕ ಏರಿಕೆ: ಇಂದು ಸೆನ್ಸೆಕ್ಸ್‌ 70000ಕ್ಕೆ,ನಿಫ್ಟಿ 21000ಕ್ಕೆ?

KannadaprabhaNewsNetwork |  
Published : Dec 07, 2023, 01:15 AM IST
ಸೂಚ್ಯಂಕ | Kannada Prabha

ಸಾರಾಂಶ

ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಸತತ 2 ದಿನ ಏರಿಕೆ ಕಂಡಿದ್ದ ಷೇರುಪೇಟೆ ಬುಧವಾರ ಕೂಡಾ ಏರಿಕೆ ಕಂಡಿದೆ.

ಮುಂಬೈ: ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಸತತ 2 ದಿನ ಏರಿಕೆ ಕಂಡಿದ್ದ ಷೇರುಪೇಟೆ ಬುಧವಾರ ಕೂಡಾ ಏರಿಕೆ ಕಂಡಿದೆ. ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಬುಧವಾರ 357 ಅಂಕ ಏರಿಕೆ 69653 ಅಂಕಗಳಲ್ಲಿ ಮುಕ್ತಾಯವಾಗಿದ್ದರೆ, ನಿಫ್ಟಿ 82 ಅಂಕ ಏರಿಕೆ ಕಂಡು 20937 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಎರಡೂ ಸೂಚ್ಯಂಕಗಳ ಗರಿಷ್ಠ ಪ್ರಮಾಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿರುವುದು ಮತ್ತು ಜಾಗತಿಕ ಷೇರುಪೇಟೆ ಏರಿಕೆ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆಗೆ ಕಾರಣವಾಗಿದೆ. ಗುರುವಾರ ಸೆನ್ಸೆಕ್ಸ್‌ 70000 ಅಂಕಗಳ ಮತ್ತು ನಿಫ್ಟಿ 21000 ಅಂಕಗಳ ಗಡಿ ದಾಟುವ ನಿರೀಕ್ಷೆ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಬೈನಲ್ಲಿ 8 ದಿನ ಅಗತ್ಯದಷ್ಟು ಮಾತ್ರ ಆಹಾರ ದಾಸ್ತಾನು
ಕೇಂದ್ರದಿಂದ ಜಿ ರಾಮ್‌ ಜಿ ಲೋಗೋ ವಿನ್ಯಾಸ ಸ್ಪರ್ಧೆ