ಇಂದಿನಿಂದ 2 ದಿನ ಕೇಂದ್ರ ಸಚಿವರ ‘ಚಿಂತನ ಶಿಬಿರ’

KannadaprabhaNewsNetwork |  
Published : Sep 23, 2026, 02:00 AM IST
ಮೋದಿ  | Kannada Prabha

ಸಾರಾಂಶ

ಸರ್ಕಾರಿ ಕೆಲಸಗಳ ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಿ ಭವಿಷ್ಯದ ಯೋಜನೆಗಳನ್ನು ರೂಪಿಸಲು, ಕೇಂದ್ರ ಸಚಿವರ 2 ದಿನಗಳ ಚಿಂತನ ಶಿಬಿರವು ಬುಧವಾರದಿಂದ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಈ ಕಾರ್ಯಕ್ರಮವು ಅವರ ನಿವಾಸವಾದ ಸೇವಾತೀರ್ಥದಲ್ಲೇ ನಡೆಯಲಿದೆ.

ನವದೆಹಲಿ: ಸರ್ಕಾರಿ ಕೆಲಸಗಳ ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಿ ಭವಿಷ್ಯದ ಯೋಜನೆಗಳನ್ನು ರೂಪಿಸಲು, ಕೇಂದ್ರ ಸಚಿವರ 2 ದಿನಗಳ ಚಿಂತನ ಶಿಬಿರವು ಬುಧವಾರದಿಂದ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಈ ಕಾರ್ಯಕ್ರಮವು ಅವರ ನಿವಾಸವಾದ ಸೇವಾತೀರ್ಥದಲ್ಲೇ ನಡೆಯಲಿದೆ.

ಎಲ್ಲಾ ಸಚಿವರು ಭಾಗವಹಿಸಲಿರುವ ಈ ಶಿಬಿರದಲ್ಲಿ ಸರ್ಕಾರಿ ಯೋಜನೆಗಳ ಪ್ರಗತಿ, ನೀತಿಗಳ ಅನುಷ್ಠಾನ, ಸಮಯ ನಿರ್ವಹಣೆ, ಸಚಿವಾಲಯಗಳ ನಡುವಿನ ಸಮನ್ವಯ, ಸಾರ್ವಜನಿಕ ಸೇವೆಗಳ ವಿತರಣೆ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು. ಜತೆಗೆ 2047ರ ವೇಳೆಗೆ ವಿಕಸಿತ ಭಾರತದ ಗುರಿ ತಲುಪಲು ಅಗತ್ಯವಾದ ಸುಧಾರಣೆಗಳ ಬಗ್ಗೆ ಚಿಂತನೆ ಮಾಡಲಾಗುವುದು. ಇದಕ್ಕೆ ಅನುಗುಣವಾಗಿ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಮಾರ್ಗಸೂಚಿ ಸಿದ್ಧಪಡಿಸಲಾಗುವುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಡಿಮೆ ಗುಣಮಟ್ಟದ ಮೊಬೈಲ್‌ ಸ್ಕ್ರೀನ್‌ ಗಾರ್ಡ್‌ ನಿಷೇಧ
ಖಾಸಗಿಗೆ ಸಡ್ಡು, ಟ್ರಂಪ್ ಟೀವಿಆರಂಭಿಸಿದ ಅಮೆರಿಕ ಅಧ್ಯಕ್ಷ!- ತಮ್ಮ ಕಾರ್‍ಯಕ್ರಮ ಪ್ರಸಾರ ಮಾಡದ್ದಕ್ಕೆ ಕಿಡಿ- ಟ್ವೀಟರ್‌ ಬದ್ಲು ಟ್ರುತ್‌ ಆರಂಭಿಸಿದಂತೆ ಸೆಡ್ಡು