ಇರಾನ್‌ ಅನುಚಿತವಾಗಿ ವರ್ತಿಸಿದರೆ ಮತ್ತೆ ಯುದ್ಧ : ಟ್ರಂಪ್‌

KannadaprabhaNewsNetwork |  
Published : May 04, 2026, 01:45 AM IST
Donald Trump

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷ ನಿವಾರಣೆಗೆ ಸಂಬಂಧಿಸಿ ಇರಾನ್‌ ಆಡಳಿತ ಸಲ್ಲಿಸಿರುವ 14 ಅಂಶಗಳ ಹೊಸ ಸಂಧಾನ ಪ್ರಸ್ತಾಪವನ್ನು ಪರಿಶೀಲಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.ಆದರೆ, ‘ಒಂದು ವೇಳೆ ಇರಾನ್‌ ಆಡಳಿತ ಕೆಟ್ಟದಾಗಿ ಅಥವಾ ಅನುಚಿತವಾಗಿ ವರ್ತಿಸಿದರೆ ಅವರ ವಿರುದ್ಧ ಮತ್ತೆ ಮಿಲಿಟರಿ ಕಾರ್ಯಾಚರಣೆ ಆರಂಭಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.

 ವಾಷಿಂಗ್ಟನ್‌: ಮಧ್ಯಪ್ರಾಚ್ಯ ಸಂಘರ್ಷ ನಿವಾರಣೆಗೆ ಸಂಬಂಧಿಸಿ ಇರಾನ್‌ ಆಡಳಿತ ಸಲ್ಲಿಸಿರುವ 14 ಅಂಶಗಳ ಹೊಸ ಸಂಧಾನ ಪ್ರಸ್ತಾಪವನ್ನು ಪರಿಶೀಲಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.ಆದರೆ, ‘ಒಂದು ವೇಳೆ ಇರಾನ್‌ ಆಡಳಿತ ಕೆಟ್ಟದಾಗಿ ಅಥವಾ ಅನುಚಿತವಾಗಿ ವರ್ತಿಸಿದರೆ ಅವರ ವಿರುದ್ಧ ಮತ್ತೆ ಮಿಲಿಟರಿ ಕಾರ್ಯಾಚರಣೆ ಆರಂಭಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.

ಹೊಸ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದೇನೆ

ಪಾಮ್‌ ಬೀಚ್‌ನ ಮಿಯಾಮಿಗೆ ತೆರಳುವ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಯುದ್ಧ ಕೊನೆಗೊಳಿಸಲು ಇರಾನ್‌ ಸಲ್ಲಿಸಿದ ಹೊಸ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದೇನೆ. ಮಿಯಾಮಿಗೆ ತೆರಳುವಾಗ ಮಾರ್ಗ ಮಧ್ಯೆ ವಿಮಾನದಲ್ಲೇ ಆ ಪ್ರಸ್ತಾಪ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಆ ಬಳಿಕ ಮುಂದಿನ ವಿಚಾರ ತಿಳಿಸುತ್ತೇನೆ’ ಎಂದರು.

ಒಂದು ವೇಳೆ ಅವರು ಅನುಚಿತವಾಗಿ ವರ್ತಿಸಿದರೆ ಅಥವಾ ಕೆಟ್ಟ ಕೆಲಸ ಮಾಡಿದರೆ ಅಮೆರಿಕದ ದಾಳಿ ಮತ್ತೆ ಆರಂಭವಾಗಲಿದೆ ಎಂದು ಗುಡುಗಿದರು.

ಇದಕ್ಕೂ ಮುನ್ನ ತಮ್ಮ ಸಾಮಾಜಿಕ ಜಾಲತಾಣ ಟ್ರುಥ್‌ ಸೋಷಿಯಲ್‌ನಲ್ಲಿ ಪೋಸ್ಟ್‌ ಹಾಕಿದ್ದ ಅವರು, ‘ಇರಾನ್‌ ಸಲ್ಲಿಸಿದ ಹೊಸ ಪ್ರಸ್ತಾಪ ಕುರಿತು ಶೀಘ್ರದಲ್ಲೇ ಪರಿಶೀಲನೆ ನಡೆಸುತ್ತೇನೆ. ಆದರೆ ನನಗೆ ಇದು ಸ್ವೀಕಾರ್ಹವಾಗಲಿದೆ ಎಂದು ಅನಿಸುತ್ತಿಲ್ಲ. ಏಕೆಂದರೆ ಕಳೆದ 47 ವರ್ಷಗಳಲ್ಲಿ ಮಾನವತೆ ಮತ್ತು ವಿಶ್ವದ ಜತೆಗೆ ಅವರು ಏನೇನು ಮಾಡಿದ್ದಾರೋ ಅದಕ್ಕಾಗಿ ಅವರು ಸೂಕ್ತ ಬೆಲೆ ತೆತ್ತಿಲ್ಲ’ ಎಂದು ತಿಳಿಸಿದ್ದರು.

ಇರಾನ್‌ ಪ್ರಸ್ತಾಪದಲ್ಲೇನಿದೆ?:

ಮೂಲಗಳ ಪ್ರಕಾರ ಇರಾನ್‌ ತನ್ನ ಹೊಸ ಪ್ರಸ್ತಾಪದಲ್ಲಿ ಅಮೆರಿಕಕ್ಕೆ 1 ತಿಂಗಳ ಕಾಲಾವಕಾಶ ನೀಡಿದೆ. ಆ ಅವಧಿಯಲ್ಲಿ ಹೋರ್ಮುಜ್‌ ಜಲಸಂಧಿ ನಿರ್ಬಂಧ ತೆರೆವುಗೊಳಿಸುವುದು ಹಾಗೂ ತನ್ನ ಮತ್ತು ಲೆಬನಾನ್‌ ವಿರುದ್ಧದ ಸಂಘರ್ಷಕ್ಕೆ ಶಾಶ್ವತ ಅಂತ್ಯ ಹಾಡುವುದು ಸೇರಿ ಹಲವು ಪ್ರಸ್ತಾಪಗಳನ್ನು ಮುಂದಿರಿಸಿದೆ.

ಹೋರ್ಮುಜ್‌ ಬಳಿ ಹಡಗು ಮೇಲೆ ದಾಳಿ

ದುಬೈ: ಹೋರ್ಮುಜ್‌ ಜಲಸಂಧಿಯ ಬಳಿ ಬೃಹತ್ ವಾಹಕ ನೌಕೆಯೊಂದರ ಮೇಲೆ ಹಲವಾರು ಸಣ್ಣ ಹಡಗುಗಳು ದಾಳಿ ಮಾಡಿವೆ ಎಂದು ಬ್ರಿಟಿಷ್ ಸೇನೆಯ ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರ ತಿಳಿಸಿದೆ.ಇರಾನ್‌ನ ಸಿರಿಕ್‌ ಎಂಬಲ್ಲಿ ಈ ದಾಳಿ ನಡೆದಿದೆ. ಆದರೂ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದಿರುವ ಅದು, ಹಡಗುಗಳು ಎಚ್ಚರಿಕೆಯಿಂದ ಸಾಗುವಂತೆ ಎಚ್ಚರಿಸಿದೆ.

ಇರಾನಿನ ಅಧಿಕಾರಿಗಳು ಜಲಸಂಧಿಯನ್ನು ನಿಯಂತ್ರಿಸುವುದನ್ನು ಮುಂದುವರಿಸಿದ್ದಾರೆ ಮತ್ತು ಅಮೆರಿಕ ಅಥವಾ ಇಸ್ರೇಲ್‌ ನಂಟಿಲ್ಲದ ಹಡಗುಗಳು ಟೋಲ್ ಪಾವತಿಸಿದರೆ ಹಾದುಹೋಗಬಹುದು ಎಂದು ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪ್ರೀತಿಗೆ ಅಡ್ಡಿ: ಟ್ರೆಕ್‌ಗೆ ಹೋದಾಗ 400 ಅಡಿ ಕಂದಕಕ್ಕೆ ತಳ್ಳಿ ಭಾವಿ ಪತಿ ಕೊಲೆ
ಸಿಂದೂರದಲ್ಲಿ ಪಾಕ್‌ ಬಳಸಿದ್ದಚೀನಾ ನಿರ್ಮಿತ ಜೆ-10 ಜೆಟ್‌ಗೆಖರೀದಿಗೆ ಬಾಂಗ್ಲಾ ನಿರ್ಧಾರ