ಎನ್‌ಡಿಎ ಜಯ ಹಿಂದೆ ಆರೆಸ್ಸೆಸ್‌ ‘ಮಿಷನ್‌ ತ್ರಿಶೂಲ್‌’!

KannadaprabhaNewsNetwork |  
Published : Nov 16, 2025, 01:45 AM ISTUpdated : Nov 16, 2025, 04:26 AM IST
RSS

ಸಾರಾಂಶ

ಬಿಹಾರದಲ್ಲಿ ಎನ್‌ಡಿಎದ ಅಭೂತಪೂರ್ವ ಗೆಲುವಿಗೆ  ಬಿಜೆಪಿಯ ವೈಚಾರಿಕ ಮಾತೃಸಂಘಟನೆಯಾದ ಆರ್‌ಎಸ್‌ಎಸ್‌ನ ಸುದೀರ್ಘ ಯೋಜನೆಯೊಂದು ಕೂಡಾ ಪ್ರಮುಖ ಪಾತ್ರ ವಹಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

 ಪಟನಾ: ಬಿಹಾರದಲ್ಲಿ ಎನ್‌ಡಿಎದ ಅಭೂತಪೂರ್ವ ಗೆಲುವಿಗೆ ಮೋದಿ - ನಿತೀಶ್‌ ಮೋಡಿ, 1 ಕೋಟಿ ಮಹಿಳೆಯರ ಖಾತೆಗೆ ತಲಾ 10 ಸಾವಿರ ರು. ನಗದು ವರ್ಗ, ಮಹಿಳೆಯರು ಹೆಚ್ಚು ಮತದಾನ ಮಾಡಿದ್ದು ಸೇರಿದಂತೆ ಹಲವು ವಿಷಯಗಳು ಕಾರಣ ಎಂಬ ವಿಶ್ಲೇಷಣೆಗಳು ನಡೆದವೆ. ಇದರ ನಡುವೆ ಇದೆಲ್ಲದರ ಹಿಂದೆ ಬಿಜೆಪಿಯ ವೈಚಾರಿಕ ಮಾತೃಸಂಘಟನೆಯಾದ ಆರ್‌ಎಸ್‌ಎಸ್‌ನ ಸುದೀರ್ಘ ಯೋಜನೆಯೊಂದು ಕೂಡಾ ಪ್ರಮುಖ ಪಾತ್ರ ವಹಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

ಬಿಜೆಪಿಯ ಪಾಲಿಗೆ ಅತ್ಯಂತ ಮಹತ್ವವಾದ ಬಿಹಾರವನ್ನು ಗೆಲ್ಲಲೆಂದೇ ರಾಷ್ಟ್ರೀಯ ಸ್ವಯಂಸೇವಕ ಸಂಘವು ‘ಮಿಷನ್‌ ತ್ರಿಶೂಲ್‌’ ಎಂಬ ಕಾರ್ಯತಂತ್ರವನ್ನು ರೂಪಿಸಿತ್ತು. ಸ್ವತಃ ಅದರ ಮುಖ್ಯಸ್ಥರಾದ ಡಾ. ಮೋಹನ್‌ ಭಾಗವತ್‌ ಅವರು ಈ ಅಭಿಯಾನದ ನೇತೃತ್ವ ವಹಿಸಿದ್ದರು. ಬಿಹಾರದಾದ್ಯಂತ 50,000ದಿಂದ 60,000 ಸಭೆಗಳನ್ನು ನಡೆಸಿ, ತಂತ್ರ ಹೆಣೆಯಲಾಗಿತ್ತು. ಎನ್‌ಡಿಎಗೆ ಅಭೂತಪೂರ್ವ ಜಯ ದೊರಕಿಸಿಕೊಡುವಲ್ಲಿ ಈ ಕಾರ್ಯತಂತ್ರ ಮಹತ್ವದ ಪಾತ್ರ ವಹಿಸಿತು ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯತ್ತ ಮತಗಳನ್ನು ಸೆಳೆಯಲು ಈ ವರ್ಷದ ಫೆಬ್ರವರಿಯಲ್ಲೇ ಆರ್‌ಎಸ್‌ಎಸ್‌ ‘ಮಿಷನ್‌ ತ್ರಿಶೂಲ್‌’ ಅನ್ನು ಆರಂಭಿಸಿತ್ತು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 200-300 ಸಭೆಗಳಂತೆ ರಾಜ್ಯಾದ್ಯಂತ 50-60 ಸಾವಿರ ಸಭೆಗಳು ನಡೆದಿದ್ದವು. ಇದು ಮುಸ್ಲಿಂ ಮತ್ತು ಯಾದವ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು ಎನ್ನಲಾಗಿದೆ.

ಏನಿದು ‘ಮಿಷನ್‌ ತ್ರಿಶೂಲ್‌’?:

3 ಮುಖ್ಯ ವಿಚಾರಗಳನ್ನು ಕೇಂದ್ರೀಕರಿಸಿ ಈ ಯೋಜನೆಯನ್ನು ರೂಪಿಸಲಾಗಿತ್ತು. ಇವುಗಳನ್ನು ತನ್ನ ಕಾರ್ಯಕರ್ತರ ಮೂಲಕ ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದ ಆರ್‌ಎಸ್‌ಎಸ್‌ ತನ್ನ ತಂತ್ರ ಫಲಿಸುವುದನ್ನು ಖಾತರಿಪಡಿಸಿಕೊಂಡಿತು ಎಂದು ಮೂಲಗಳು ತಿಳಿಸಿವೆ.

ಮೊದಲ ತಂತ್ರ:

ಮೊದಲನೆಯದಾಗಿ, ಪ್ರಸ್ತುತ ರಾಜ್ಯ ಸರ್ಕಾರದಿಂದ ಅಸಂತುಷ್ಟರಾದ ಜನರನ್ನು ಗುರುತಿಸುವುದು. ನಿರುದ್ಯೋಗ, ಮೂಲಸೌಕರ್ಯ ಕೊರತೆ ಹಾಗೂ ಆಡಳಿತ ಲೋಪದಿಂದ ನಿರಾಶರಾದ ಜನರನ್ನು ತಲುಪುವ ಪ್ರಯತ್ನ ಮಾಡಲಾಗಿತ್ತು. ಜೊತೆಗೆ ಅದಕ್ಕೆ ಸರ್ಕಾರದ ಮೂಲಕ ಪರಿಹಾರ ದೊರಕಿಸುವ ಯತ್ನಗಳನ್ನು ಮಾಡಲಾಯಿತು. ಜೊತೆಗೆ ಪ್ರಣಾಳಿಕೆಯಲ್ಲೂ ಈ ಅಂಶಗಳು ಪ್ರಮುಖವಾಗಿ ಪ್ರಸ್ತಾಪವಾಗುವಂತೆ ಮಾಡಲಾಯಿತು.

ಎರಡನೇ ತಂತ್ರ:

ಎರಡನೆಯದಾಗಿ, ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಅದನ್ನು ಯಾವ ರೀತಿಯಲ್ಲಿ ಪರಿಹರಿಸಿದೆ ಎಂಬುದನ್ನು ಜನರಿಗೆ ತಲುಪಿಸಲಾಯಿತು. ಮುಖ್ಯವಾಗಿ ಉದ್ಯೋಗಸೃಷ್ಟಿ, ಕೃಷಿ ಸುಧಾರಣೆ ಹಾಗೂ ಬಿಹಾರದಲ್ಲಿ ಜಾತಿ ಆಧರಿತ ಮೀಸಲಾತಿಯನ್ನು ಪ್ರಚಾರ ಮಾಡಲಾಯಿತು.

ಮೂರನೇ ತಂತ್ರ:

ಮೂರನೆಯದಾಗಿ, ಹಿಂದೂ ರಾಷ್ಟ್ರವಾದದ ಅಡಿಯಲ್ಲಿ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಯಿತು. ಬಲಪಂಥೀಯ ಸಂಘಟನೆಗಳಾದ ಎಬಿವಿಪಿ, ಬಜರಂಗದಳ, ವಿಎಚ್‌ಪಿ, ಮಜ್ದೂರ್‌ ಸಂಘ ಮೊದಲಾದವು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡಿದವು. ಈ ಎಲ್ಲ ಕಾರಣಗಳಿಂದ ಎಲ್ಲ ವರ್ಗದ ಮತದಾರರು ಬಿಜೆಪಿ ಮತ್ತು ಎನ್‌ಡಿಎದತ್ತ ಆಕರ್ಷಿತರಾದರು ಎಂದು ತಿಳಿದುಬಂದಿದೆ.

ಬಿಜೆಪಿಗೆ 40 ಮುಸ್ಲಿಂ

ಕ್ಷೇತ್ರದಲ್ಲಿ ವಿಜಯ!

ಪಟನಾ: ಬಿಹಾರದಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿರುವ ಬಿಜೆಪಿ ಈ ಬಾರಿ ಮತ್ತೊಂದು ಅಚ್ಚರಿಯ ಸಾಧನೆ ಮಾಡಿದೆ. ಮುಸ್ಲಿಮರು ಬಿಜೆಪಿಯಿಂದ ದೂರ ಎಂಬ ಭಾವನೆ ಸುಳ್ಳಾಗಿಸಿರುವ ಅದು, ಮುಸ್ಲಿಂ ಬಾಹುಳ್ಯವುಳ್ಳ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.==ನ.19ಕ್ಕೆ ನಿತೀಶ್‌ಪ್ರಮಾಣವಚನ?ಪಟನಾ: ಬಿಹಾರದಲ್ಲಿ ಎನ್‌ಡಿಎ ಭಾರೀ ಬಹುಮತ ಗಳಿಸಿರುವ ಕಾರಣ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೇ ಪುನಃ ಪಟ್ಟ ಸಿಗಲಿದೆ ಎಂದು ಹೇಳಲಾಗಿದೆ. ಅವರು ನ.19 (ಬುಧವಾರ) ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಅವು ಹೇಳಿವೆ.---ಕುಟುಂಬ, ಪಕ್ಷ ಬಿಟ್ಟ ಲಾಲು ಪುತ್ರಿ ರೋಹಿಣಿ!ಪಟನಾ: ಬಿಹಾರದಲ್ಲಿ ಆರ್‌ಜೆಡಿ ಹೀನಾಯವಾಗಿ ಸೋತ ಕಾರಣ ಪುತ್ರಿ ರೋಹಿಣಿ ಆಚಾರ್ಯ, ರಾಜಕೀಯ ಮತ್ತು ಕುಟುಂಬದ ಜತೆ ಸಂಬಂಧ ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಲಾಲು ಕುಟುಂಬದ ಕಲಹ ಮತ್ತೊಮ್ಮೆ ಬೀದಿಗೆ ಬಂದಿದೆ

ಏನಿದು ತ್ರಿಶೂಲ್‌?

1. ನಿರುದ್ಯೋಗಿಗಳಂಥ ಅಸಂತುಷ್ಟರಾದ ಜನರನ್ನು ಗುರುತಿಸಿ ಸಮಸ್ಯೆ ಪರಿಹಾರ ಯತ್ನ

2. ಬಿಜೆಪಿಯ ರಾಷ್ಟ್ರೀಯ ನಾಯಕತ್ವದ ಕೊಡುಗೆಗಳೇನು ಎಂದು ಜನತೆಗೆ ಮನವರಿಕೆ

3. ಹಿಂದೂ ರಾಷ್ಟ್ರವಾದದ ಅಡಿಯಲ್ಲಿ ಬಿಹಾರದ ಎಲ್ಲ ವರ್ಗದ ಜನರ ಒಗ್ಗೂಡಿಸುವ ಯತ್ನ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗುರುತು ಸಾಬೀತು ಮಾಡಿ: ಸೇನಾನಿಗೆ ಚು. ಆಯೋಗ ನೋಟಿಸ್‌!
ಬಂಗಾಳಕೊಲ್ಲೀಲಿ ವಾಯುಭಾರ ಕುಸಿತ : ಭಾರೀ ಮಳೆ ಎಚ್ಚರಿಕೆ