ಸೇನೆ ಓಡಾಟಕ್ಕೆ ಅತ್ಯಗತ್ಯವಾಗಿದ್ದ ಸೇತುವೆ ಸ್ಫೋಟಮಾಸ್ಕೋ: ಎರಡು ದಿನಗಳ ಹಿಂದಷ್ಟೇ ರಷ್ಯಾದೊಳಗೆ ತನ್ನ ಲಾರಿಗಳನ್ನು ರಹಸ್ಯವಾಗಿ ಸಾಗಿಸಿ ಬಳಿಕ ಅದರೊಳಗಿಂದ ಡ್ರೋನ್ ಹಾರಿಸಿ ರಷ್ಯಾದ 40 ಯುದ್ಧ ವಿಮಾನ ಧ್ವಂಸಗೊಳಿಸಿದ್ದ ಉಕ್ರೇನ್, ಇದೀಗ ನೆಲದಾಳದಿಂದಲೇ ದಾಳಿ ನಡೆಸಿ ರಷ್ಯಾದ ಕ್ರೆಮ್ಲಿನ್ ಸೇತುವೆಯನ್ನು ಸ್ಫೋಟಿಸಿದೆ.
ಈ ಬಗ್ಗೆ ಉಕ್ರೇನ್‌ನ ಭದ್ರತಾ ಸಂಸ್ಥೆ ಮಾಹಿತಿ ನೀಡಿದ್ದು, ‘ಈ ದಾಳಿ ನಡೆಸಲು ಹಲವು ತಿಂಗಳುಗಳಿಂದ ಯೋಜನೆ ರೂಪಿಸಲಾಗುತ್ತಿತ್ತು’ ಎಂದಿದೆ. ಜತೆಗೆ, ಸ್ಫೋಟದ ವಿಡಿಯೋವನ್ನೂ ಬಿಡುಗಡೆ ಮಾಡಿದೆ.
ಕೆಲ ದಿನಗಳ ಹಿಂದಷ್ಟೇ ರಷ್ಯಾದ 2 ಸೇತುವೆಗಳು ಕುಸಿದು, ರೈಲುಗಳು ಕೆಳಗುರುಳಿ ಜನರು ಪ್ರಾಣ ಕಳೆದುಕೊಂಡಿದ್ದರು. ಈ ಸ್ಫೋಟವನ್ನೂ ಉಕ್ರೇನ್ ನಡೆಸಿದ್ದು ಎಂದು ರಷ್ಯಾ ಆರೋಪಿಸಿತ್ತು.