ಅಖಿಲೇಶ್‌ಗೆ ಫಲಿಸಿದ ಒಬಿಸಿ, ದಲಿತ ಮಂತ್ರ

KannadaprabhaNewsNetwork |  
Published : Jun 06, 2024, 12:31 AM IST
ಎಸ್‌ಪಿ | Kannada Prabha

ಸಾರಾಂಶ

ಎಸ್‌ಪಿಗೆ ಸಾರ್ವಕಾಲಿಕ ದಾಖಲೆ 37 ಸ್ಥಾನ ಲಭಿಸುವ ಮೂಲಕ ಬಿಜೆಪಿ, ಕಾಂಗ್ರೆಸ್‌ ನಂತರದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಲಖನೌ: 2019ರ ಚುನಾವಣೆಯಲ್ಲಿ ಉತ್ತರಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ ಕೇವಲ 5 ಸ್ಥಾನ ಗೆದ್ದು ಸೋತು ಸುಣ್ಣವಾಗಿದ್ದ ಸಮಾಜವಾದಿ ಪಕ್ಷ ಇದೀಗ ಹಿಂದೆಂದೂ ಕಂಡು ಕೇಳರಿಯದ ಸಾಧನೆ ಮಾಡಿದೆ. ಪಕ್ಷದ ಇತಿಹಾಸದಲ್ಲೇ ಗರಿಷ್ಠ 37 ಸ್ಥಾನಗಳನ್ನು ಸಮಾಜವಾದಿ ಅಭ್ಯರ್ಥಿಗಳು ಗೆದ್ದಿದ್ದಾರೆ.ಪಕ್ಷದ ಇಂಥದ್ದೊಂದು ಸಾಧನೆ ಹಿಂದೆ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ರ ಯಾದವ್‌ ಹೊರತಾದ ಒಬಿಸಿ, ದಲಿತ ಮಂತ್ರ ಯಶಸ್ವಿಯಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ. 2004ರಲ್ಲಿ ಮುಲಾಯಂ ಸಿಂಗ್‌ ನೇತೃತ್ವದಲ್ಲಿ 35 ಸ್ಥಾನ ಗೆದ್ದಿದ್ದೇ ಸಮಾಜವಾದಿ ಪಕ್ಷದ ಇದುವರೆಗಿನ ಬಹುದೊಡ್ಡ ಸಾಧನೆಯಾಗಿತ್ತು.ರಾಜ್ಯದಲ್ಲಿ ಇಂಡಿಯೂ ಕೂಟದ ಪ್ರಮುಖ ಪಕ್ಷವಾಗಿದ್ದ ಎಸ್‌ಪಿ, 80ರ ಪೈಕಿ 62ರಲ್ಲಿ ಸ್ಪರ್ಧಿಸಿತ್ತು. ಈ 62ರಲ್ಲಿ 32 ಸ್ಥಾನ ಒಬಿಸಿ, 16 ದಲಿತ, 10 ಮೇಲ್ವರ್ಗ, 4 ಮುಸ್ಲಿಂ ಅಭ್ಯರ್ಥಿಗಳಿಗೆ ನೀಡಲಾಗಿತ್ತು. ಒಬಿಸಿಗೆ ನೀಡಿದ 32 ಸ್ಥಾನಗಳ ಪೈಕಿ ಕೇವಲ 4 ಸ್ಥಾನ ಮಾತ್ರವೇ ಯಾದವ ಸಮುದಾಯಕ್ಕೆ ನೀಡಲಾಗಿತ್ತು. ಅದು ಕೂಡಾ ಮುಲಾಯಂ ಕುಟುಂಬ ಸದಸ್ಯರು ಮಾತ್ರ. ಉಳಿದದ್ದನ್ನು ಒಬಿಸಿಯ ಇತರೆ ಪಂಗಡಗಳಿಗೆ ಉದ್ದೇಶಪೂರ್ವಕವಾಗಿಯೇ ನೀಡಲಾಗಿತ್ತು.ಅಲ್ಲದೆ ಚುನಾವಣಾ ಪ್ರಚಾರದ ವೇಳೆಯೂ ಸಮಾಜವಾದಿ, ಕಾಂಗ್ರೆಸ್‌ ಮತ್ತು ಇಂಡಿಯಾ ಕೂಟದ ನಾಯಕರು ಪ್ರಮುಖವಾಗಿ ಒಬಿಸಿ, ಹಿಂದುಳಿದ ವರ್ಗದ ಮೀಸಲು ವಿಷಯ, ಕೃಷಿಗೆ ಕನಿಷ್ಠ ಬೆಂಬಲ ಬೆಲೆ, ಉದ್ಯೋಗ ಸೃಷ್ಟಿ, ಅಗ್ನಿವೀರ್ ಯೋಜನೆಗಳನ್ನೇ ಪ್ರಸ್ತಾಪಿಸಿ ಬಿಜೆಪಿ ಮತ್ತು ಎನ್‌ಡಿಎ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.ರಾಜ್ಯದ ಒಟ್ಟು ಜಸಸಂಖ್ಯೆಯಲ್ಲಿ ಶೆ.40ರಷ್ಟಿರುವ ಒಬಿಸಿ ಮತ್ತು ಶೆ.20ರಷ್ಟಿರುವ ದಲಿತರನ್ನು ಗುರಿಯಾಗಿಸಿ ಮಾಡಲಾದ ಟಿಕೆಟ್‌ ಹಂಚಿಕೆ ಭರ್ಜರಿಯಾಗಿ ಫಲ ಕೊಟ್ಟಿದೆ. ಇಂಡಿ ಕೂಟದ ನಾಯಕರು ಪ್ರಸ್ತಾಪಿಸಿದ ವಿಷಯಗಳು ಜನರನ್ನು ತಲುಪಿದ್ದು, ಕಳೆದ ಬಾರಿ 62 ಸ್ಥಾನ ಗೆದ್ದಿದ್ದ ಬಿಜೆಪಿಯನ್ನು ಮತದಾರರು ಈ ಬಾರಿ 32ಕ್ಕೆ ಇಳಿಸಿದ್ದಾರೆ.ಅಷ್ಟರ ಮಟ್ಟಿಗೆ ಒಬಿಸಿ, ದಲಿತ ಜಾತಿ ಸಮೀಕರಣ ರಾಜ್ಯದಲ್ಲಿ ಯಶಸ್ವಿಯಾಗಿದೆ. ಸಮಾಜವಾದಿ ಪಕ್ಷದಿಂದ ಗೆದ್ದ 37 ಜನರ ಪೈಕಿ 20 ಒಬಿಸಿ ಮತ್ತು 7 ದಲಿತ ಸಮುದಾಯಕ್ಕೆ ಅಭ್ಯರ್ಥಿಗಳಾಗಿದ್ದಾರೆ.3ನೇ ಅತಿದೊಡ್ಡ ಪಕ್ಷ:

ಇಂಥದ್ದೊಂದು ಸಾಧನೆಯೊಂದಿಗೆ ಸಮಾಜವಾದಿ ಪಕ್ಷ ಲೋಕಸಭೆಯಲ್ಲಿ 3ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 240 ಸ್ಥಾನ ಗೆದ್ದ ಬಿಜೆಪಿ, 99 ಸ್ಥಾನ ಗೆದ್ದ ಕಾಂಗ್ರೆಸ್‌ ಮೊದಲ ಎರಡು ಸ್ಥಾನದಲ್ಲಿವೆ.

ಟಾಪ್‌-3 ಅತಿದೊಡ್ಡ ಪಕ್ಷಗಳುಪಕ್ಷಸ್ಥಾನಬಿಜೆಪಿ240ಕಾಂಗ್ರೆಸ್‌099ಎಸ್‌ಪಿ037

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೈಸೂರು ಸ್ಯಾಂಡಲ್ ಸೋಪು ಉತ್ಪನ್ನ : ದಾಖಲೆ ಬರೆದ ಕೆಎಸ್‌ಡಿಎಲ್‌
ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌