ನವದೆಹಲಿ: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನಿರಾಕರಿಸಿದ್ದ ತನ್ನ ಮಹತ್ವದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಗಳನ್ನುಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಇದನ್ನು ವಜಾ ಮಾಡಿರುವ ಕೋರ್ಟ್, ‘ನನ್ನ ಹಿಂದಿನ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ. ಮೂಲ ತೀರ್ಪಿನಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳು ಕಾನೂನಿಗೆ ಅನುಗುಣವಾಗಿವೆ ಮತ್ತು ಹೆಚ್ಚಿನ ಹಸ್ತಕ್ಷೇಪ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಉಗ್ರ ನಿಜ್ಜರ್ ಹತ್ಯೆ: 4 ಭಾರತೀಯರಿಗೆ ಜಾಮೀನುನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಬಂಧಿತ ನಾಲ್ವರು ಭಾರತೀಯ ಪ್ರಜೆಗಳಿಗೆ ಕೆನಡಾ ನ್ಯಾಯಾಲಯವು ಜಾಮೀನು ನೀಡಿದೆ. ಪೊಲೀಸರು ಸಾಕ್ಷ್ಯ ನೀಡಲು ವಿಫಲ ಆದ ಕಾರಣ ಜಾಮೀನು ಲಭಿಸಿದೆ.ಕಳೆದ ವರ್ಷ ಖಲಿಸ್ತಾನಿ ಪರ ಉಗ್ರ ಹರ್ದೀಪ್ ನಿಜ್ಜರ್‌ನನ್ನು ಕೆನಡಾದ ಸರ್‍ರೆಯಲ್ಲಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧಭಾರತೀಯ ಮೂಲದ ಕರಣ್ ಬ್ರಾರ್, ಅಮನ್‌ದೀಪ್ ಸಿಂಗ್, ಕಮಲ್‌ಪ್ರೀತ್ ಸಿಂಗ್ ಮತ್ತು ಕರಣ್‌ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೋ ನೇರ ಆರೋಪ ಮಾಡಿದ್ದರು. ಇದನ್ನು ಭಾರತ ನಿರಾಕರಿಸಿತ್ತು. ಆದರೂ ಕೆನಾಡ ಪ್ರಧಾನಿ ಅವರ ಬಹಿರಂಗ ಹೇಳಿಕೆಗಳ ಬಳಿಕ ಈ ಪ್ರಕರಣ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು.
ಛತ್ತೀಸಗಢದಲ್ಲಿ ಎನ್‌ಕೌಂಟರ್: 3 ನಕ್ಸಲರ ಹತ್ಯೆ
ಗುರುವಾರ ಬೆಳಗ್ಗೆ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಈ ಎನ್‌ಕೌಂಟರ್ ನಡೆದಿದೆ. ಆಗ 3 ನಕ್ಸಲರ ಹತ್ಯೆ ಆಗಿದೆ ಹಾಗೂ ಕಾರ್ಯಾಚರಣೆ ಮುಂದುವರಿದಿದೆ.