ಆಪರೇಷನ್ ಸಿಂದೂರ : ಉಗ್ರರ ನೆಲೆ ಹೀಗಿದ್ದವು .. ಹೀಗಾದವು ...

KannadaprabhaNewsNetwork |  
Published : May 09, 2025, 12:30 AM ISTUpdated : May 09, 2025, 03:39 AM IST
ಉಪಗ್ರಹ  | Kannada Prabha

ಸಾರಾಂಶ

ಭಾರತೀಯ ಸೇನೆಯು ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನದ ಉಗ್ರರ 9 ನೆಲೆಗಳ ಹಳೆಯ ಹಾಗೂ ಹೊಸ ಸ್ಯಾಟ್‌ಲೈಟ್‌ ಫೋಟೋ ಬಿಡುಗಡೆಯಾಗಿವೆ. ಇದರಲ್ಲಿ ಭಯೋತ್ಪಾದಕ ತಾಣಗಳು ಹೇಗಿದ್ದವು ಹಾಗೂ ಈಗ ಹೇಗಾದವು ಎಂಬುದರ ಚಿತ್ರಣವಿದೆ.

 ನವದೆಹಲಿ: ಭಾರತೀಯ ಸೇನೆಯು ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನದ ಉಗ್ರರ 9 ನೆಲೆಗಳ ಹಳೆಯ ಹಾಗೂ ಹೊಸ ಸ್ಯಾಟ್‌ಲೈಟ್‌ ಫೋಟೋ ಬಿಡುಗಡೆಯಾಗಿವೆ. ಇದರಲ್ಲಿ ಭಯೋತ್ಪಾದಕ ತಾಣಗಳು ಹೇಗಿದ್ದವು ಹಾಗೂ ಈಗ ಹೇಗಾದವು ಎಂಬುದರ ಚಿತ್ರಣವಿದೆ.

ಮ್ಯಾಕ್ಸರ್‌ ಟೆಕ್ನಾಲಜಿಸ್‌ ಈ ಉಪಗ್ರಹ ಚಿತ್ರವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಲಷ್ಕರ್‌- ಇ- ತೊಯ್ಬಾ(ಎಲ್‌ಇಟಿ), ಜೈಶ್‌- ಇ- ಮೊಹಮ್ಮದ್‌ (ಜೆಇಎಂ) ಮತ್ತು ಹಿಜ್ಬುಲ್ಲಾ ಮುಜಾಹಿದ್ದೀನ್ ಉಗ್ರ ಸಂಘಟನೆಗಳ 9 ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಆಪರೇಷನ್ ಸಿಂದೂರದ ಕ್ಷಿಪಣಿ ದಾಳಿಯಿಂದ ಹೇಗೆ ಭಯೋತ್ಪಾದಕ ನೆಲೆಗಳುಧ್ವಂಸ ಆಯಿತು ಎನ್ನುವುದರ ದೃಶ್ಯ ಪುರಾವೆಗಳನ್ನು ಬಹಿರಂಗಪಡಿಸಿದೆ.

 ಈ ಚಿತ್ರದಲ್ಲಿ ಎಲ್‌ಇಟಿ ಮತ್ತು ಜೆಇಎಂ ಉಗ್ರರ ತರಬೇತಿ ಹಾನಿಗೀಡಾಗಿರುವುದು, ತರಬೇತಿ ಕೇಂದ್ರದ ಕುಸಿದ ಛಾವಣಿಗಳು, ದಾಳಿಯಿಂದ ಪರಿಣಾಮದ ಕುಳಿಗಳು ಮತ್ತು ಅವಶೇಷಗಳು ಸೆರೆಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!
ಸಿಡ್ನಿಯಲ್ಲಿ ಇನ್ನೊಂದು ದಾಳಿ ಸಂಚು ವಿಫಲ