ಎಫ್‌ಡಿ ಬಿಟ್ಟು ಹೆಚ್ಚಿನ ಲಾಭ ಗಳಿಸಲು ಮ್ಯೂಚುವಲ್‌ ಫಂಡ್ಸ್‌ಗಳತ್ತ ಜನರ ಚಿತ್ತ: ಬ್ಯಾಂಕ್‌ಗಳಿಗೆ ಹೊಸ ಸಂಕಷ್ಟ

KannadaprabhaNewsNetwork |  
Published : Jul 21, 2024, 01:22 AM ISTUpdated : Jul 21, 2024, 04:44 AM IST
shaktikanth Das

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಜನರು ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ (ಎಫ್‌ಡಿ) ಗಳನ್ನು ಬಿಟ್ಟು ಹೆಚ್ಚಿನ ಲಾಭ ಗಳಿಸಲು ಮ್ಯೂಚುವಲ್‌ ಫಂಡ್ಸ್‌ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಿಗೆ ನಗದು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ  

ಮುಂಬೈ: ಇತ್ತೀಚಿನ ದಿನಗಳಲ್ಲಿ ಜನರು ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ (ಎಫ್‌ಡಿ) ಗಳನ್ನು ಬಿಟ್ಟು ಹೆಚ್ಚಿನ ಲಾಭ ಗಳಿಸಲು ಮ್ಯೂಚುವಲ್‌ ಫಂಡ್ಸ್‌ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಿಗೆ ನಗದು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ ಎಂದು ಆರ್‌ಬಿಐ ಮುಖ್ಯಸ್ಥ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಇಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದಾಸ್‌,‘ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ಪ್ರಮಾಣ ಕಾರಣ ಜನರು ತಮ್ಮ ಚಿತ್ತವನ್ನು ಠೇವಣಿ ಇಡುವುದಕ್ಕಿಂತ ಮ್ಯೂಚುವಲ್‌ ಫಂಡ್ಸ್‌, ವಿಮಾ ಠೇವಣಿ ಹಾಗೂ ಪಿಂಚಣಿ ಠೇವಣಿಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿ ಒಳಹರಿವು ಪ್ರಮಾಣ ಕಡಿಮೆಯಾಗಲಿದೆ.

ಇದರಿಂದಾಗಿ ಸಾಲದ ಪ್ರಮಾಣ ಹೆಚ್ಚಾಗಿ ಬ್ಯಾಂಕುಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳು ಎದುರಾಗಬಹುದು ಎಂದು ಹೇಳಿದರು. ಕಳೆದ ಐದು ವರ್ಷದಲ್ಲಿ ಮ್ಯೂಚುವಲ್‌ ಫಂಡ್ಸ್‌ ಶೇ.152ರಷ್ಟು ಹೆಚ್ಚಾಗಿದ್ದು, ಆದರೆ ಬ್ಯಾಂಕ್‌ ಎಫ್‌ಡಿ ಕೇವಲ ಶೇ.70ರಷ್ಟು ಮಾತ್ರ ವೃದ್ಧಿಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ
ನೌಕರರಿಗೆ ಸಂಬಳ, ಪಿಂಚಣಿ ನೀಡಲು ಕೇರಳದಲ್ಲಿ ತತ್ವಾರ